ಗಾಜಿಪುರ(ಉತ್ತರ ಪ್ರದೇಶ):ಮದುವೆಗೆ ತೆರಳುತ್ತಿದ್ದ ಬಸ್ ಮೇಲೆ 11,000 ವೋಲ್ಟ್‌ನ ಹೈಟೆನ್ಷನ್ ಕರೆಂಟ್ ವೈರ್ ಬಿದ್ದ ಪರಿಣಾಮ ಬಸ್‌ಗೆ ಬೆಂಕಿ ಹೊತ್ತಿಕೊಂಡಿರುವ ಘಟನೆ ಗಾಜಿಪುರದಲ್ಲಿ ನಡೆದಿದೆ. ಇಲ್ಲಿನ ಮರ್ದಾಹ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ, ಬಸ್ನಲ್ಲಿದ್ದ 20 ರಿಂದ 25 ಮಂದಿ ಸಜೀವ ದಹನವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಜಿಲ್ಲಾಡಳಿತವು ಇದುವರೆಗೆ ಐದು ಮಂದಿ ಮೃತಪಟ್ಟಿರುವ ಬಗ್ಗೆ ಖಚಿತ ಪಡಿಸಿದೆ.
ಬಸ್ ಮೇಲೆ ಬಿದ್ದ 11,000 ವೋಲ್ಟ್ ಕರೆಂಟ್ ವೈರ್: ಐದು ಮಂದಿ ಸಜೀವ ದಹನ
ಬಸ್ ಮೇಲೆ ಹೈಟೆನ್ಷನ್ ವಿದ್ಯುತ್ ತಂತಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು 5 ಜನರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
Published : Mar 11, 2024, 6:01 PM IST
ಘಟನಾ ಸ್ಥಳದಲ್ಲಿ ಬಸ್‌ಗೆ ಗೊತ್ತಿಕೊಂಡಿರುವ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಆಗಮಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮಾಹಿತಿಯ ಪ್ರಕಾರ, ಮೌ ಜಿಲ್ಲೆಯ ಕಜಾದ ಪ್ರಯಾಣಿಕರು ಮದುವೆಗಾಗಿ ಮರ್ದಾಹ್ಗೆ ಹೋಗುತ್ತಿದ್ದರು. ಆಗ ಈ ಅವಘಡ ಸಂಭವಿಸಿದೆ. ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ಧನಸಹಾಯ ನೀಡಿ ಉಚಿತ ಚಿಕಿತ್ಸೆಗೆ ನೀಡಲು ಸೂಚಿಸಿದ್ದಾರೆ.
ಇದನ್ನೂ ಓದಿ:ಮದುವೆ ಮೆರವಣಿಗೆಗೆ ತೆರಳುತ್ತಿದ್ದ ವೇಳೆ ಕಾಲುವೆಗೆ ಬಿದ್ದ ಕಾರು; ಮೂವರು ಸಾವು