ಕರ್ನಾಟಕ

karnataka

ETV Bharat / bharat

ಮಹಾಕುಂಭಮೇಳ: ಭಕ್ತರ ಸುರಕ್ಷತೆಗೆ ಮಾರ್ಗಸೂಚಿ ಹೊರಡಿಸಲು ಕೋರಿ ಸುಪ್ರೀಂಗೆ ಪಿಐಎಲ್​ ಸಲ್ಲಿಕೆ - PIL IN SC

ಮಹಾ ಕುಂಭಮೇಳದಲ್ಲಿ ಭಕ್ತರ ಸುರಕ್ಷತೆಗಾಗಿ ಮಾರ್ಗಸೂಚಿಗಳನ್ನು ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಸುಪ್ರೀಂಗೆ ಪಿಐಎಲ್​ ಸಲ್ಲಿಸಲಾಗಿದೆ.

ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌ (ANI)

By ANI

Published : Jan 30, 2025, 5:46 PM IST

ನವದೆಹಲಿ :ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಉಂಟಾಗಿ ಭಕ್ತರು ಸಾವಿಗೀಡಾದ ಪ್ರಸಂಗ ಜರುಗಿದೆ. ಈ ಹಿನ್ನೆಲೆಯಲ್ಲಿ, ದೇಶಾದ್ಯಂತ ಯಾತ್ರಾರ್ಥಿಗಳಿಗೆ ಸುರಕ್ಷತಾ ಕ್ರಮಗಳು ಮತ್ತು ಮಾರ್ಗಸೂಚಿಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್​​) ಗುರುವಾರ ಸಲ್ಲಿಸಲಾಗಿದೆ.

ವಕೀಲ ವಿಶಾಲ್ ತಿವಾರಿ ಅವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಯಾವುದೇ ಯಾತ್ರೆಯಲ್ಲಿ ಗಣ್ಯರ (ವಿಐಪಿ) ಆಗಮನವು ಸಾಮಾನ್ಯರ ಸುರಕ್ಷತೆ ಕಂಟಕವಾಗಬಾರದು. ವಿಐಪಿಗಳಿಗೆ ಮಾರ್ಗಸೂಚಿ ತರಬೇಕು. ಮಹಾಕುಂಭದಲ್ಲಿ ಭಕ್ತರ ಆಗಮನ ಮತ್ತು ನಿರ್ಗಮನಕ್ಕೆ ಗರಿಷ್ಠ ಸ್ಥಳಾವಕಾಶ ಒದಗಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಈ ಅರ್ಜಿಯು ತುರ್ತು ವಿಚಾರಣೆಗೆ ಯೋಗ್ಯವಾದ ಹಿನ್ನೆಲೆ, ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನೇತೃತ್ವದ ಪೀಠದ ಮುಂದೆ ಇದನ್ನು ಪಟ್ಟಿ ಮಾಡಲು ನ್ಯಾಯಾಲಯದ ರಿಜಿಸ್ಟ್ರಿಗೆ ಕೋರಲಾಗಿದೆ ಎಂದು ವಕೀಲ ವಿಶಾಲ್​ ತಿವಾರಿ ತಿಳಿಸಿದ್ದಾರೆ.

ಫಲಕಗಳಲ್ಲಿ ವಿವಿಧ ಭಾಷೆ ಅಳವಡಿಸಿ:ಹಿಂದಿಯೇತರ ಭಾಷಿಕರಿಗೆ ಅರ್ಥವಾಗಲು ಇಲ್ಲಿನ ರಸ್ತೆಗಳು, ವ್ಯವಸ್ಥೆಗಳು, ದಾರಿಗಳಲ್ಲಿ ಪ್ರದರ್ಶನ ಫಲಕಗಳು ಅಳವಡಿಸಬೇಕು. ಅಲ್ಲಿನ ಮಾಹಿತಿಯನ್ನು ಇತರ ಭಾಷೆಗಳಲ್ಲೂ ಬರೆಯಬೇಕು. ಇದು ಸೂಕ್ತ ಮಾರ್ಗದರ್ಶನ ನೀಡಿದಂತಾಗುತ್ತದೆ ಎಂದಿದ್ದಾರೆ.

ಭಕ್ತರು ಅನುಸರಿಸಬೇಕಾದ ಮಾರ್ಗಸೂಚಿಗಳು ಮತ್ತು ಸುರಕ್ಷತಾ ಕ್ರಮಗಳ ಕುರಿತ ಮಾಹಿತಿಯನ್ನು SMS, WhatsApp ಮೂಲಕ ರವಾನೆಯಾಗುವಂತೆ ಎಲೆಕ್ಟ್ರಾನಿಕ್ ಮೋಡ್ ವ್ಯವಸ್ಥೆ ಮಾಡಬೇಕು ಎಂದೂ ಮನವಿಯಲ್ಲಿ ಕೋರಿದ್ದಾರೆ.

ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ:ಮಹಾ ಕುಂಭಮೇಳದಲ್ಲಿ ಜರುಗಿದ ಕಾಲ್ತುಳಿದ ಸ್ಥಿತಿಗತಿಯ ವರದಿಯನ್ನು ಸಲ್ಲಿಸಲು ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಬೇಕು. ನಿರ್ಲಕ್ಷ್ಯ ತೋರಿದ ವ್ಯಕ್ತಿಗಳು, ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅರ್ಜಿ ಕೋರಿದೆ.

ಜನವರಿ 29 ರ ಮಧ್ಯರಾತ್ರಿ 1.30 ರ ಸುಮಾರಿನಲ್ಲಿ ಮಹಾಕುಂಭದ ಸಂಗಮ್ ಘಾಟ್​ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ. 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್​​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಾತ್ರಿಕರಿಗೆ ಸುರಕ್ಷತಾ ಕ್ರಮಗಳು ಮತ್ತು ಮಾರ್ಗಸೂಚಿಗಳ ಕುರಿತು ಮೂಲಭೂತ ಮಾಹಿತಿ ಒದಗಿಸಲು ಎಲ್ಲ ರಾಜ್ಯಗಳು ಪ್ರಯಾಗ್‌ರಾಜ್‌ನಲ್ಲಿರುವ ತಮ್ಮ ಸೌಲಭ್ಯ ಕೇಂದ್ರಗಳಿಗೆ ನಿರ್ದೇಶನಗಳನ್ನು ನೀಡಬೇಕೆಂದು ಅದು ಕೋರಿದೆ.

ಓದಿ:ಮಹಾಕುಂಭ ಮೇಳ-2025; ಕಾಲ್ತುಳಿತದ ದುರ್ಘಟನೆ ಬಳಿಕ ಪ್ರಯಾಗ್​ರಾಜ್​ನಲ್ಲಿ ಹೇಗಿದೆ ಪರಿಸ್ಥಿತಿ?

ಕಾಲ್ತುಳಿತದ ನಂತರ ಮಹಾಕುಂಭದಲ್ಲಿ ಜನದಟ್ಟಣೆ ನಿರ್ವಹಣೆಗೆ ಹಲವು ಬದಲಾವಣೆ; ವಿವಿಐಪಿ ಪಾಸ್​ ರದ್ದು

ಮಹಾಕುಂಭ ಮೇಳ - ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ 30 ಜನರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ಘೋಷಣೆ ಮಾಡಿದ ಸಿಎಂ ಯೋಗಿ

ABOUT THE AUTHOR

...view details