ಸಂಭಾಲ್, ಉತ್ತರಪ್ರದೇಶ:ನಗರವನ್ನು ಧಾರ್ಮಿಕ ಮತ್ತು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಸಂಭಾಲ್ ಆಡಳಿತ ವಿಶೇಷ ಪ್ರಯತ್ನ ಮಾಡುತ್ತಿದೆ. ಈ ಸಂಬಂಧ ಭಾನುವಾರ ಡಿಎಂ ಡಾ. ರಾಜೇಂದ್ರ ಪೆನ್ಸಿಯಾ, ಎಸ್ಪಿ ಮತ್ತು ಇತರ ಅಧಿಕಾರಿಗಳು 24 ಕೋಸಿಯಾ ಪರಿಕ್ರಮ ಮಾರ್ಗದಲ್ಲಿ 11 ಕಿಲೋಮೀಟರ್ ಪಾದಯಾತ್ರೆ ನಡೆಸಿದರು ಸಂಭಾಲ್‌ನಲ್ಲಿ 41 ದೇಗುಲಗಳು ಮತ್ತು 19 ಬಾವಿಗಳು ಇರುವುದನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಈಗಾಗಲೇ ಈ ಜಿಲ್ಲೆಯಲ್ಲಿ ಪುರತತ್ವ ಇಲಾಖೆ 9 ಸಂರಕ್ಷಿತ ಸೈಟ್ ಗಳನ್ನ ಗುರುತಿಸಿದೆ.
ಸಂಭಾಲ್‌ನ 24 ಕೋಸಿ ಪರಿಕ್ರಮವು ಭಾನುವಾರ ಬೆಳಗ್ಗೆ 10:00 ರಿಂದ ಪ್ರಾರಂಭವಾಯಿತು. ಈ ಪರಿಕ್ರಮವು ಸಂಭಾಲ್‌ನ ವಂಶ ಗೋಪಾಲ ತೀರ್ಥರಿಂದ ಪ್ರಾರಂಭವಾಯಿತು. 24 ಕೋಸಿ ಪರಿಕ್ರಮವನ್ನು ಸಂಭಾಲ್ ಡಿಎಂ ಡಾ ರಾಜೇಂದ್ರ ಪೆನ್ಸಿಯಾ ಮತ್ತು ಎಸ್ಪಿ ಕೃಷ್ಣ ಕುಮಾರ್ ವಿಷ್ಣೋಯ್ ಅವರು ಉದ್ಘಾಟಿಸಿದರು. ಸಂಭಾಲ್ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಪೆನ್ಸಿಯಾ ಸೇರಿ ಎಲ್ಲ ಅಧಿಕಾರಿಗಳು ಈ ಪರಿಕ್ರಮ ಮಾರ್ಗದಲ್ಲಿ ಮೆರವಣಿಗೆ ನಡೆಸಿದರು. ಸುಮಾರು 11 ಕಿಲೋಮೀಟರ್ ಉದ್ದದ ಈ ಪಾದಯಾತ್ರೆಯಲ್ಲಿ ಅಧಿಕಾರಿಗಳು ತಮ್ಮ ವಾಹನಗಳನ್ನು ಒಂದೆಡೆ ಪಾರ್ಕ್ ಮಾಡಿ ಕಾಲ್ನಡಿಗೆಯಲ್ಲೇ ಪರ್ಯಟನೆ ನಡೆಸಿ, ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದರು. ಅಷ್ಟೇ ಅಲ್ಲ ವಸ್ತು ಸ್ಥಿತಿಯನ್ನು ಕಂಡುಕೊಂಡರು. ಸಂಭಾಲ್‌ನಲ್ಲಿ ಜನರಿಂದ ವಿವಿಧ ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಪೆನ್ಸಿಯಾ ತಿಳಿಸಿದ್ದಾರೆ.