ಕರ್ನಾಟಕ

karnataka

ETV Bharat / bharat

ಲೋಕಸಭೆ ಚುನಾವಣೆಗೆ 97 ಕೋಟಿ ಮತದಾರರು, 12 ರಾಜ್ಯಗಳಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕ

Lok Sabha Election 2024: 2024ರ ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದೆ.

lok-sabha-polls-2024-election-commission-announced-election-schedule
ಲೋಕಸಭೆ ಚುನಾವಣೆಗೆ ಆಯೋಗ ಸಿದ್ಧತೆ

By ETV Bharat Karnataka Team

Published : Mar 16, 2024, 3:08 PM IST

Updated : Mar 16, 2024, 5:04 PM IST

ನವದೆಹಲಿ:18ನೇ ಲೋಕಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಮುಖ್ಯ ಆಯುಕ್ತ ರಾಜೀವ್​ ಕುಮಾರ್, ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ಜ್ಞಾನೇಶ್ ಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಚುನಾವಣೆ ಕುರಿತು ವಿವರಗಳನ್ನು ನೀಡಿದರು.

  • ಭಾರತೀಯ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬಕ್ಕೆ ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
  • ದೇಶಾದ್ಯಂತ 97 ಕೋಟಿ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 49.7 ಕೋಟಿ ಪುರುಷರು, 47.1 ಕೋಟಿ ಮಹಿಳಾ ಮತದಾರರು ಇದ್ದಾರೆ.
  • 10.5 ಲಕ್ಷ ಮತಗಟ್ಟೆಗಳು ಸ್ಥಾಪನೆ ಮಾಡಲಾಗಿದೆ. 1.5 ಕೋಟಿ ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ ಬಳಕೆ ಆಗಲಿದ್ದಾರೆ ಹಾಗೂ 55 ಲಕ್ಷ ಇವಿಎಂಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
  • ಶಾಂತಿ, ಹಿಂಸಾಚಾರ ರಹಿತ ಚುನಾವಣೆಗೆ ಕ್ರಮ, ಮತದಾನ ಹೆಚ್ಚಳಕ್ಕೆ ಆದ್ಯತೆ ನೀಡಲಾಗುವುದು ಎಂದು ಆಯೋಗ ತಿಳಿಸಿದೆ.
  • ಈ ಬಾರಿ 1.80 ಲಕ್ಷ ಹೊಸ ಮತದಾರರು ಇದೇ ಮೊದಲ ಬಾರಿಗೆ (18-19 ವಯಸ್ಸು) ತಮ್ಮ ಹಕ್ಕು ಚಲಾಯಿಸಲಿದ್ದಾರೆ.
  • 19.74 ಕೋಟಿ 20-29 ವರ್ಷದೊಳಗಿನ ಮತದಾರರು ಇದ್ದಾರೆ.
  • ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಆಯೋಗ ತಿಳಿಸಿದೆ.
  • ಕುಡಿಯುವ ನೀರು, ಶೌಚಾಲಯ, ವೀಲ್​ಚೇರ್​ ಸೇರಿದಂತೆ ಸೂಕ್ತ ವ್ಯವಸ್ಥೆ ಇರುತ್ತದೆ.
  • ದೇಶಾದ್ಯಂತ ಮತದಾರರ ಲಿಂಗ ಅನುಪಾತ ಮಾಹಿತಿಯನ್ನು ನೋಡಿದರೆ, 1000 ಪುರುಷರಿಗೆ 948 ಮಹಿಳೆಯರು ಇದ್ದಾರೆ.
  • 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುರುಷ ಮತದಾರರಿಗಿಂತ ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ.
  • ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ನಡೆಸುವಲ್ಲಿ ನಾಲ್ಕು ಸವಾಲುಗಳು ಇದೆ.
  • ಬಲ, ಹಣ, ತಪ್ಪು ಮಾಹಿತಿ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಬೆದರಿಕೆಗಳು ಇದೆ.
  • ಚುನಾವಣಾ ಆಯೋಗವು ಇವುಗಳನ್ನು ಎದುರಿಸಲು ಬದ್ಧವಾಗಿದೆ. ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಅಡ್ಡಿಪಡಿಸುವ ಈ ಸವಾಲುಗಳನ್ನು ಎದುರಿಸಲು ಕ್ರಮಗಳನ್ನು ಕೈಗೊಂಡಿದೆ.
  • ಮತದಾರರ ನಂಬಿಕೆಯನ್ನು ಖಾತ್ರಿಪಡಿಸುವುದು ಅತಿಮುಖ್ಯವಾಗಿದೆ.
  • ಚುನಾವಣೆಗಳಲ್ಲಿ ಹಿಂಸಾಚಾರ ಸ್ವೀಕಾರಾರ್ಹವಲ್ಲ.
  • SUVIDHA ಪೋರ್ಟಲ್ ಮೂಲಕ ಪಕ್ಷಗಳು, ಅಭ್ಯರ್ಥಿಗಳಿಗೆ ಅನುಮತಿ ನೀಡುವಲ್ಲಿ ಪಾರದರ್ಶಕತೆ ಇರುತ್ತದೆ.
  • ಚುನಾವಣಾ ಪ್ರಕ್ರಿಯೆಯಲ್ಲಿ ಬಲಪ್ರಯೋಗ, ಪ್ರಜಾಪ್ರಭುತ್ವ ವಿರೋಧಿ ಪ್ರಭಾವವನ್ನು ತಡೆಗಟ್ಟಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
  • ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಗಿದೆ.
  • ಪ್ರತಿ ಜಿಲ್ಲೆಯಲ್ಲಿ ಸಿಎಪಿಎಫ್​ ಸಮರ್ಪಕವಾಗಿ ನಿಯೋಜಿಸಲು ಮತ್ತು ಸಮಗ್ರ ನಿಯಂತ್ರಣ ಕೊಠಡಿಗಳಿಂದ ಸಹಾಯ ಮಾಡಲು.
  • ಭದ್ರತೆಗಳನ್ನು ಖಚಿತಪಡಿಸಿಕೊಳ್ಳಲು ಚೆಕ್​ ಪೋಸ್ಟ್‌ಗಳು ಮತ್ತು ಡ್ರೋನ್‌ಗಳ ನಿಗಾ ಇರಲಿದೆ.
  • ಚುನಾವಣಾ ಅಕ್ರಮಗಳ ತಡೆಗೆ ಚುನಾವಣಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
  • 2022-23ರಲ್ಲಿ ನಡೆದ 11 ರಾಜ್ಯಗಳ ವಿವಿಧ ಚುನಾವಣೆಗಳಲ್ಲಿ 3,400 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ
  • ಐದು ವರ್ಷಗಳಿಗೆ ಹಿಂದೆ ಹೋಲಿಸಿದರೆ ನಗದು ವಶಪಡಿಸಿಕೊಳ್ಳುವಿಕೆಯು ಶೇ.800ರಷ್ಟು ಅಧಿಕವಾಗಿದೆ.
  • ಇದರಲ್ಲಿ ಅಕ್ರಮ ಹಣ, ಮದ್ಯ, ಡ್ರಗ್ಸ್ ಮತ್ತು ಉಚಿತ ವಸ್ತುಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಜಾರಿ ಸಂಸ್ಥೆಗಳಿಗೆ ನಿರ್ದೇಶಿಸಲಾಗಿದೆ.
Last Updated : Mar 16, 2024, 5:04 PM IST

ABOUT THE AUTHOR

...view details