ಕರ್ನಾಟಕ

karnataka

ETV Bharat / bharat

ನೀಟ್​ ಪರೀಕ್ಷೆಯಲ್ಲಿ ಫೇಲ್​​: ನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು - kota student suicide - KOTA STUDENT SUICIDE

ನೀಟ್​ ಪರೀಕ್ಷೆಯ ಫಲಿತಾಂಶದಿಂದ ನೊಂದ ವಿದ್ಯಾರ್ಥಿನಿಯೊಬ್ಬಳು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿನಿ ಆತ್ಮಹತ್ಯೆ
ವಿದ್ಯಾರ್ಥಿನಿ ಆತ್ಮಹತ್ಯೆ (ETV Bharat)

By ETV Bharat Karnataka Team

Published : Jun 6, 2024, 9:28 AM IST

ಕೋಟಾ, ರಾಜಸ್ಥಾನ:ನೀಟ್​ ಪರೀಕ್ಷೆಯಲ್ಲಿ ನಿರಾಶಾದಾಯಕ ಫಲಿತಾಂಶದಿಂದ ಮನನೊಂದು ಮಧ್ಯಪ್ರದೇಶ ವಿದ್ಯಾರ್ಥಿನಿಯೊಬ್ಬರು ಇಂದು ರಾಜಸ್ಥಾನದ ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ.

ಕೋಟಾದ ಜವಾಹರ್ ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಹರಿನಾರಾಯಣ ಶರ್ಮಾ ನೀಡಿರುವ ಮಾಹಿತಿ ಪ್ರಕಾರ,"18 ವರ್ಷದ ವಿದ್ಯಾರ್ಥಿನಿ ತನ್ನ ತಾಯಿ, ಸಹೋದರನೊಂದಿಗೆ ರಾಜಸ್ಥಾನದ ಕೋಟಾದ ಕೋಚಿಂಗ್ ಹಬ್‌ನ ನಗರವೊಂದರ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಳು. ವಿದ್ಯಾರ್ಥಿನಿ ತಂದೆಗೆ ಮಾಹಿತಿ ತಿಳಿಸಲಾಗಿದ್ದು, ಕೋಟಾಕ್ಕೆ ಆಗಮಿಸಲಿದ್ದಾರೆ. ಮೃತ ವಿದ್ಯಾರ್ಥಿನಿ NEET ಫಲಿತಾಂಶದ ನಂತರ ಅಧಿಕ ಒತ್ತಡಕ್ಕೆ ಒಳಗಾಗಿದ್ದಳು. ಇವರು ಕಟ್ಟಡದ 5 ನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳಲು 9 ನೇ ಮಹಡಿಗೆ ತೆರಳಿದ್ದಾಳೆ. ಆ ಮಹಡಿಯ ಮಹಿಳೆಯೊಬ್ಬರು ನೋಡಿ ಇವಳನ್ನು ತಡೆಯಲು ಪ್ರಯತ್ನಿಸಿದ್ದಾರೆ.

ಅಷ್ಟೊತ್ತಿಗಾಗಲೇ ಆಕೆ ಆ ಮಹಡಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣವೇ ವಿದ್ಯಾರ್ಥಿನಿಯನ್ನು MBS ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ವೈದ್ಯರು ವಿದ್ಯಾರ್ಥಿನಿ ಸಾವನ್ನಪ್ಪಿರುವ ಕುರಿತು ಸ್ಪಷ್ಟತೆ ನೀಡಿದ್ದಾರೆ. ಘಟನೆಯಿಂದ ವಿದ್ಯಾರ್ಥಿನಿ ತಾಯಿಯು ಆಘಾತಕ್ಕೊಳಾಗಾಗಿರುವುದರಿಂದ ಅವರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಸಾಧ್ಯವಾಗಿರುವುದಿಲ್ಲ. ವಿದ್ಯಾರ್ಥಿನಿಯ ತಂದೆ ಆಗಮಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ.

ಆತ್ಮಹತ್ಯೆಯೇ ಪರಿಹಾರವಲ್ಲ: ನೀವು ಆತ್ಮಹತ್ಯಾ ಆಲೋಚನೆಗಳನ್ನು ಹೊಂದಿದ್ದರೆ ನಿಮಗೆ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ನಿಮ್ಮೊಂದಿಗೆ ಸದಾ ಮಾತನಾಡಲು ನಿಮ್ಮ ಸಮಸ್ಯೆಗಳನ್ನು ಆಲಿಸಲು ನಾವಿದ್ದೇವೆ. ಸ್ನೇಹ ಫೌಂಡೇಶನ್ - 044 24640050 (ವಾರದ 24 ಗಂಟೆ ಲಭ್ಯ) ಅಥವಾ iCall, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸಹಾಯವಾಣಿಗಾಗಿ - 9152987821 (ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ ಲಭ್ಯವಿದೆ).

ಇದನ್ನೂ ಓದಿ:ಉತ್ತರಾಖಂಡ್​​ ಟ್ರೆಕ್ಕಿಂಗ್​ ದುರಂತ:​ ಬೆಂಗಳೂರಿನ ಐವರು ಸಾವು, ನಾಲ್ವರು ನಾಪತ್ತೆ, 11 ಜನರ ರಕ್ಷಣೆ - TREKKING TRAGEDY

ABOUT THE AUTHOR

...view details