ಕರ್ನಾಟಕ

karnataka

ETV Bharat / bharat

ಆನ್‌ಲೈನ್‌ನಲ್ಲಿ ನಕಲಿ ಲಾಟರಿ ಮಾರಾಟ: ಗೂಗಲ್, ಮೆಟಾಗೆ ಕೇರಳ ಪೊಲೀಸರಿಂದ ನೋಟಿಸ್​ - Online Lottery Scam

ಪ್ಲೇ ಸ್ಟೋರ್‌ನಲ್ಲಿರುವ ನಕಲಿ ಲಾಟರಿ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವಂತೆ ಕೇರಳ ಪೊಲೀಸರು ಗೂಗಲ್ ಮತ್ತು ಮೆಟಾಗೆ ನೋಟಿಸ್ ನೀಡಿದ್ದಾರೆ.

By ETV Bharat Tech Team

Published : Aug 22, 2024, 3:08 PM IST

LOTTERY SCAM  KERALA ONLINE LOTTERY  GOOGLE PLAYSTORE  ADS LINKED TO FAKE LOTTERIES
ಸಾಂದರ್ಭಿಕ ಚಿತ್ರ (ETV Bharat)

ತಿರುವನಂತಪುರಂ(ಕೇರಳ): ಆನ್‌ಲೈನ್‌ನಲ್ಲಿ ನಕಲಿ ಲಾಟರಿ ಮಾರಾಟ ನಿಲ್ಲಿಸುವಂತೆ ಗೂಗಲ್ ಮತ್ತು ಮೆಟಾಗೆ ಕೇರಳ ಪೊಲೀಸರು ನೋಟಿಸ್ ನೀಡಿದ್ದಾರೆ. ಪ್ಲೇ ಸ್ಟೋರ್‌ನಿಂದ ನಕಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುವ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವಂತೆ ಸೂಚಿಸಿದ್ದಾರೆ. ಅದೇ ರೀತಿ, ಫೇಸ್‌ಬುಕ್‌ನಿಂದಲೂ ಅಂತಹ ಲಾಟರಿ ಜಾಹೀರಾತುಗಳನ್ನು ತೆಗೆದುಹಾಕುವಂತೆ ತಿಳಿಸಿದ್ದಾರೆ.

ಇತ್ತೀಚೆಗೆ ಕೇರಳ ಪೊಲೀಸರ ಸೈಬರ್ ವಿಭಾಗ ಆನ್‌ಲೈನ್ ಲಾಟರಿಗಳನ್ನು ಮಾರಾಟ ಮಾಡುವ 60 ನಕಲಿ ಅಪ್ಲಿಕೇಶನ್‌ಗಳನ್ನು ಪತ್ತೆ ಮಾಡಿತ್ತು. ಈ ಪೈಕಿ 25 ಫೇಸ್‌ಬುಕ್ ಪ್ರೊಫೈಲ್‌ಗಳು ಮತ್ತು 20 ವೆಬ್‌ಸೈಟ್‌ಗಳು ನಕಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡಿವೆ. ಈ ವಂಚನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಲಾಟರಿ ಹೆಸರಿನಲ್ಲಿ ನಕಲಿ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎರಡು ಲಾಟರಿಗಳನ್ನು 'ಮೆಗಾ ಮಿಲಿಯನ್ ಲಾಟರಿ' ಮತ್ತು 'ಕೇರಳ ಸಮ್ಮರ್ ಧಮಾಕಾ' ಎಂದು ಪ್ರಚಾರ ಮಾಡಲಾಗುತ್ತಿತ್ತು. ಇದರಲ್ಲಿ ಕೇರಳ ರಾಜ್ಯ ಲಾಟರಿ ಹೆಸರು ಉಲ್ಲೇಖಿಸಲಾಗಿದೆ. ವಾಟ್ಸ್‌ಆ್ಯಪ್, ಟೆಲಿಗ್ರಾಂ, ಇನ್‌ಸ್ಟಾಗ್ರಾಂನಲ್ಲಿ ಜಾಹೀರಾತುಗಳು ಹರಡಿವೆ. ಕೇರಳ ಸರ್ಕಾರ ಆನ್‌ಲೈನ್ ಲಾಟರಿ ಮಾರಾಟ ಆರಂಭಿಸಿದೆ ಎಂದು ಉಲ್ಲೇಖಿಸಲಾಗಿತ್ತು. ಟಿಕೆಟ್ ಬೆಲೆ 40 ರೂಪಾಯಿ ಆಗಿದ್ದು, ಬಹುಮಾನ ಮೌಲ್ಯ 12 ಕೋಟಿ ರೂಪಾಯಿ ಎಂದು ತಿಳಿಸಲಾಗಿತ್ತು.

ಜಾಹೀರಾತಿನಲ್ಲಿ ನಮೂದಿಸಿರುವ ಸಂಖ್ಯೆಗೆ 40 ರೂಪಾಯಿ ಕಳುಹಿಸಿದರೆ ಸಂಬಂಧಪಟ್ಟವರು ವಾಟ್ಸ್‌ಆ್ಯಪ್​ನಲ್ಲಿ ಟಿಕೆಟ್ ಪಡೆಯುತ್ತಾರೆ ಎಂದು ಹೇಳಲಾಗಿದೆ. ಆ ಬಲೆಗೆ ಸಿಲುಕಿ ಅನೇಕರು ವಂಚನೆಗೊಳಗಾಗುತ್ತಿದ್ದಾರೆ. ತನಿಖೆ ನಡೆಸಿದಾಗ, 40 ರೂ.ಗಳನ್ನು ಕಳುಹಿಸಿದ ನಂತರ, ನಕಲಿ ಲಾಟರಿ ಟಿಕೆಟ್ ಅನ್ನು ಸಂಬಂಧಪಟ್ಟವರಿಗೆ ಕಳುಹಿಸಲಾಗುತ್ತಿದೆ ಎಂದು ಪೊಲೀಸರಿಗೆ ಕಂಡುಕೊಂಡಿದ್ದಾರೆ.

ನೀವು 5 ಲಕ್ಷ ರೂಪಾಯಿ ಗೆದ್ದಿದೀರಿ. ಈ ಹಣ ಪಡೆಯಲು ನಮ್ಮ ಖಾತೆಗೆ ಇಂತಿಷ್ಟು ಹಣ ಕಳುಹಿಸಬೇಕು. ಆಗ ಮಾತ್ರ ಬಹುಮಾನದ ಮೊತ್ತವನ್ನು ನೀಡಲಾಗುತ್ತದೆ. ದೇಶದ ಶಿರ್ಗ್ ಬ್ಯಾಂಕ್ ನಿಯಮಗಳ ಪ್ರಕಾರ, ಹಣ ಕಳುಹಿಸಲಾಗುವುದು ಎಂದು ವಂಚಕರು ಹೇಳುತ್ತಿದ್ದಾರೆ. ಕೆಲವೊಮ್ಮೆ ಸಾಮಾನ್ಯ ಜನರ ವಿಶ್ವಾಸವನ್ನು ಗಳಿಸಲು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಈ ಘಟನೆ ಪೊಲೀಸರ ಗಮನಕ್ಕೆ ಬಂದಾಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಹೀಗಾಗಿ, ವಂಚಕರ ಬಲೆಗೆ ಬೀಳದಂತೆ ಕೇರಳ ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಯಾವುದೇ ಆನ್‌ಲೈನ್ ಹಗರಣ ಅಥವಾ ಹಣಕಾಸಿನ ವಂಚನೆಯಾದಲ್ಲಿ ತಕ್ಷಣವೇ 1930ಗೆ ಕರೆ ಮಾಡಿ ವರದಿ ಮಾಡಬೇಕು ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ

ಇದನ್ನೂ ಓದಿ:ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಕೇಸ್​: ಸಾಮಾಜಿಕ ಮಾಧ್ಯಮಗಳಿಂದ ಸಂತ್ರಸ್ತೆಯ ಗುರುತು ತೆಗೆದುಹಾಕಲು ಎಸ್‌ಸಿ ಆದೇಶ - SC Orders

ABOUT THE AUTHOR

...view details