ಕರ್ನಾಟಕ

karnataka

ETV Bharat / bharat

ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 57ಕ್ಕೆ ಹೆಚ್ಚಿಸಲು ಕೇರಳ ಸರ್ಕಾರದ ಚಿಂತನೆ - RETIREMENT AGE

ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 56 ರಿಂದ 57ಕ್ಕೆ ಏರಿಸಲು ಕೇರಳ ಸರ್ಕಾರ ಚಿಂತನೆ ನಡೆಸುತ್ತಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Nov 19, 2024, 4:53 PM IST

ತಿರುವನಂತಪುರಂ, ಕೇರಳ: ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 57 ವರ್ಷಗಳಿಗೆ ಹೆಚ್ಚಿಸಲು ಕೇರಳ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಸರ್ಕಾರದ ವಿವಿಧ ಇಲಾಖೆಗಳ ಮಧ್ಯೆ ಚರ್ಚೆ ನಡೆಯುತ್ತಿದ್ದು, ಮುಂದಿನ ವರ್ಷ ಫೆಬ್ರವರಿಯಲ್ಲಿ ರಾಜ್ಯ ಬಜೆಟ್​ ಮಂಡನೆಯ ವೇಳೆ ರಾಜ್ಯ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರು ಈ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರಿ ನೌಕರರು 56 ನೇ ವಯಸ್ಸಿನಲ್ಲಿ ನಿವೃತ್ತರಾಗುವ ಏಕೈಕ ರಾಜ್ಯ ಕೇರಳವಾಗಿದೆ. ಉಮ್ಮನ್ ಚಾಂಡಿ (2011-16) ಅವರ ಅಧಿಕಾರಾವಧಿಯಲ್ಲಿ ಎಲ್ಲ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಏಕರೂಪಕ್ಕೆ ತರಲು ನಿವೃತ್ತಿ ವಯಸ್ಸನ್ನು 55 ರಿಂದ 56 ವರ್ಷಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿತ್ತು.

ಸಮಿತಿಯ ಇತ್ತೀಚಿನ ಅಧ್ಯಯನದ ಪ್ರಕಾರ, ನಿವೃತ್ತಿ ವಯಸ್ಸನ್ನು ಒಂದು ವರ್ಷ ಹೆಚ್ಚಿಸಿದರೆ ರಾಜ್ಯ ಸರ್ಕಾರವು ನಿವೃತ್ತರಾಗುವ ನೌಕರರಿಗೆ ನೀಡಬೇಕಾದ ಗ್ರಾಚ್ಯುಟಿ ಮತ್ತು ಬಂಡವಾಳ ವೆಚ್ಚಕ್ಕಾಗಿ ಸೇವೆಯ ಅಂತ್ಯದ ಪ್ರಯೋಜನಗಳು ಸೇರಿದಂತೆ 5,000 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳಲು ಸಾಧ್ಯವಾಗಲಿದೆ.

ರಾಜ್ಯ ಸರ್ಕಾರವು ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿಸಿದಲ್ಲಿ, ಡಿಎ ಬಾಕಿ ಹೆಚ್ಚಳದ ವಿಷಯದಲ್ಲಿ ರಾಜ್ಯ ಸರ್ಕಾರಿ ನೌಕರರು ವಿಜಯನ್ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿರುವುದರಿಂದ ಇದು ಸಿಪಿಐ - ಎಂ ಸರ್ಕಾರಕ್ಕೆ ಸಾಕಷ್ಟು ಜನಪ್ರಿಯತೆ ತಂದುಕೊಡಲಿದೆ. 2025 ರ ದ್ವಿತೀಯಾರ್ಧದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು 2026 ರ ಏಪ್ರಿಲ್ ನಲ್ಲಿ ಕೇರಳ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಕ್ರಮವನ್ನು ವಿಜಯನ್ ನೇತೃತ್ವದ ಸರ್ಕಾರದ ಪ್ರಮುಖ ಹೆಜ್ಜೆ ಎಂದು ಹೇಳಲಾಗುತ್ತಿದೆ.

ಕೇರಳಕ್ಕೆ ಹೊಸ ವಂದೇ ಭಾರತ್ ರೈಲು: ಕೇರಳದಲ್ಲಿ, ಪ್ರಸ್ತುತ ಎಂಟು ಬೋಗಿಗಳ ವಂದೇ ಭಾರತ್ ರೈಲುಗಳನ್ನು 20 ಬೋಗಿಗಳ ರೈಲುಗಳೊಂದಿಗೆ ಬದಲಾಯಿಸಲಾಗುವುದು. ಪ್ರಸ್ತುತ ಅಲಪ್ಪುಳ ಮೂಲಕ ಚಲಿಸುತ್ತಿರುವ ತಿರುವನಂತಪುರಂ - ಮಂಗಳೂರು - ತಿರುವನಂತಪುರಂ (20631/20632) ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿನ ಬದಲಾಗಿ ಹೊಸ ರೈಲು ಚಲಿಸಲಿದೆ.

ರೈಲ್ವೆ ಅಂಕಿ - ಅಂಶಗಳ ಪ್ರಕಾರ, ಈ ರೈಲು ಶೇಕಡಾ 200 ರಷ್ಟು ಆಕ್ಯುಪೆನ್ಸಿಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರರ್ಥ 100 ಆಸನಗಳನ್ನು ಹೊಂದಿರುವ ಬೋಗಿಯಲ್ಲಿ, ಅನೇಕ ಪ್ರಯಾಣ ಮಾರ್ಗಗಳಲ್ಲಿ 200 ಪ್ರಯಾಣಿಕರು ಈ ಆಸನಗಳನ್ನು ಬಳಸುತ್ತಾರೆ. ಮಂಗಳೂರು - ತಿರುವನಂತಪುರಂ ರೈಲಿನ (20631) ಎಲ್ಲಾ 474 ಆಸನಗಳು ಸಂಪೂರ್ಣವಾಗಿ ಭರ್ತಿಯಾಗಿ ಸಂಚರಿಸುತ್ತಿದೆ. 20 ಬೋಗಿಗಳನ್ನು ಹೊಂದಿರುವ ಹೊಸ ರೈಲಿನಲ್ಲಿ 1,246 ಕ್ಕೂ ಹೆಚ್ಚು ಆಸನಗಳು ಲಭ್ಯವಿರುತ್ತವೆ.

ಇದನ್ನೂ ಓದಿ : ಗೂಗಲ್​ ಮ್ಯಾಪ್​ ಎಡವಟ್ಟು, 7 ತಾಸು ಕೆಸರಿನಲ್ಲಿ ಸಿಲುಕಿದ ಮಂಗಳೂರಿನ ಅಯ್ಯಪ್ಪ ಭಕ್ತ; ತಮಿಳುನಾಡು ಪೊಲೀಸರಿಂದ ರಕ್ಷಣೆ

ABOUT THE AUTHOR

...view details