ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ನಾಯಕನ ಹತ್ಯೆ - pv sathyanathan

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕ ಪಿವಿ ಸತ್ಯನಾಥನ್ ಅವರನ್ನು ಹತ್ಯೆ ಮಾಡಲಾಗಿದೆ.

Eಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕನ ಹತ್ಯೆ
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕನ ಹತ್ಯೆ

By ETV Bharat Karnataka Team

Published : Feb 23, 2024, 12:34 PM IST

Updated : Feb 23, 2024, 1:12 PM IST

ಕೊಯಿಕ್ಕೋಡ್​:ಕೇರಳದ ಕೊಯಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ಎಂಬಲ್ಲಿ ದೇವಸ್ಥಾನದ ಉತ್ಸವದ ವೇಳೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸ್ಥಳೀಯ ನಾಯಕ ಪಿವಿ ಸತ್ಯನಾಥನ್ ಅವರನ್ನು ಹತ್ಯೆ ಮಾಡಲಾಗಿದೆ.

ಗುರುವಾರ ರಾತ್ರಿ ಚೆರಿಯಪುರಂ ದೇವಸ್ಥಾನದ ಉತ್ಸವದ ವೇಳೆ ಈ ಘಟನೆ ನಡೆದಿದೆ. ಸ್ಥಳೀಯ ಮುಖಂಡನ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಪಿ ಮೋಹನನ್ ಹೇಳಿದ್ದಾರೆ. ನಾಯಕನ ಸಾವನ್ನು ಖಂಡಿಸಿ ಇಂದು ಪಕ್ಷದ ಸದಸ್ಯರು ಕೊಯಿಲಾಂಡಿ ಬಂದ್​ಗೆ ಕರೆ ನೀಡಲಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:ಮಹಾರಾಷ್ಟ್ರ ಮಾಜಿ ಸಿಎಂ, ಶಿವಸೇನೆ ಹಿರಿಯ ನಾಯಕ ಮನೋಹರ್ ಜೋಶಿ ನಿಧನ: ಮೋದಿ ಸಂತಾಪ

ಬಿಜೆಪಿ ಶಾಸಕ ರಾಜೇಂದ್ರ ಪಟ್ನಿ ವಿಧಿವಶ( ವಾಶಿಂ) : ಮಹಾರಾಷ್ಟ್ರದ ಕಾರಂಜಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಜೇಂದ್ರ ಪಟ್ನಿ (59) ಇಂದು ನಿಧನರಾಗಿದ್ದಾರೆ. ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಕೆಲ ದಿನಗಳ ಹಿಂದೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಕೂಡಲೇ ಗುಣಮುಖರಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೇ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ. ಪಟ್ನಿ ಅವರ ನಿಧನ ಬಗ್ಗೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾಹಿತಿ ನೀಡಿದ್ದಾರೆ.

ಪಟ್ನಿ ಸಾವಿಗೆ ಗಣ್ಯರ ಸಂತಾಪ:ಪ್ರಧಾನಿ ನರೇಂದ್ರ ಮೋದಿ ಅವರು ರಾಜೇಂದ್ರ ಪಟ್ನಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ, ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಜೇಂದ್ರ ಪಟ್ನಿ ಜಿ ಅವರ ನಿಧನದ ವಿಷಯ ತಿಳಿದು ದುಃಖವಾಗಿದೆ. ಪಟ್ನಿ ಅವರು ಅನೇಕ ಸಮಾಜ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು. ಅಲ್ಲದೇ ಜನರ ಪರ ಪರಿಣಾಮಕಾರಿ ಧ್ವನಿಯಾಗಿದ್ದರು. ಪಕ್ಷವನ್ನು ಬಲಪಡಿಸುವಲ್ಲಿಯೂ ಅವರ ಪಾತ್ರ ಶ್ಲಾಘನೀಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

'ವಾಶಿಂ ಜಿಲ್ಲೆಯ ಕಾರಂಜಾ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಂದ್ರ ಪಟ್ನಿ ನಿಧನರಾಗಿದ್ದಾರೆ. ಅವರು ಪಶ್ಚಿಮ ವಿದರ್ಭದ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಿದ್ದರು. ನೀರಾವರಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸುತ್ತಿದ್ದರು. ಅವರ ನಿಧನದಿಂದ ವಾಶಿಮ್ ಜಿಲ್ಲೆ ಒಬ್ಬ ದಕ್ಷ ನಾಯಕನನ್ನು ಕಳೆದುಕೊಂಡಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಪಟ್ನಿ ಕುಟುಂಬ ಸದಸ್ಯರಿಗೆ ಈ ದುಃಖವನ್ನು ಬರಿಸುವ ಶಕ್ತಿ ನೀಡಲಿ ಎಂದು ಸಿಎಂ ಶಿಂಧೆ ಸಂತಾಪ ಸೂಚಿಸಿದ್ದಾರೆ.

ಡಿಸಿಎಂ ದೇವೇಂದ್ರ ಫಡ್ನವಿಸ್​ ಸಹ ಶಾಸಕರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. "ನನ್ನ ಸಹೋದ್ಯೋಗಿ ರಾಜೇಂದ್ರ ಪಟ್ನೀಜಿ ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಬೇಗನೆ ಗುಣಮುಖರಾಗುತ್ತಾರೆ ಎಂದು ನಾವೆಲ್ಲರೂ ಆಶಿಸಿದ್ದೆವು. ಆದರೆ, ಇಂದು ಕೊನೆಯುಸಿರೆಳೆದಿದ್ದಾರೆ. ಗ್ರಾಮೀಣ ಸಮಸ್ಯೆಗಳ ಬಗೆಹರಿಸಲು ಶ್ರಮಿಸುತ್ತಿದ್ದ ಜನಪ್ರತಿನಿಧಿಯನ್ನು ಬಿಜೆಪಿ ಕಳೆದುಕೊಂಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕಮಲ್ ನಾಥ್​ಗೆ ಬಿಜೆಪಿಯ ಬಾಗಿಲು ಮುಚ್ಚಲಾಗಿದೆ: ಮಧ್ಯಪ್ರದೇಶದ ಸಚಿವ ಕೈಲಾಶ್ ವಿಜಯವರ್ಗಿಯ

Last Updated : Feb 23, 2024, 1:12 PM IST

ABOUT THE AUTHOR

...view details