ಕರ್ನಾಟಕ

karnataka

ETV Bharat / bharat

8ನೇ ಸಲ ಇಡಿ ವಿಚಾರಣೆಗೆ ಗೈರಾದ ಕೇಜ್ರಿವಾಲ್​; ಮಾರ್ಚ್​ 12 ರ ಬಳಿಕ ವರ್ಚುಯಲ್​ ಹಾಜರಿಗೆ ಕೋರಿಕೆ

ಇಡಿ ಕಳುಹಿಸಿದ 8ನೇ ಸಮನ್ಸ್​ಗೂ ಕ್ಯಾರೇ ಅನ್ನದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​, ಮಾರ್ಚ್​ 12 ರ ನಂತರ ವರ್ಚುಯಲ್​ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ದೆಹಲಿ ಸಿಎಂ ಕೇಜ್ರಿವಾಲ್
ದೆಹಲಿ ಸಿಎಂ ಕೇಜ್ರಿವಾಲ್

By PTI

Published : Mar 4, 2024, 12:12 PM IST

ನವದೆಹಲಿ:ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಸತತ 8ನೇ ಬಾರಿಗೆ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆಗೆ ಗೈರಾಗಿದ್ದಾರೆ. ಇದೀಗ, ಇಡಿಗೆ ಪತ್ರ ಬರೆದಿರುವ ಸಿಎಂ, ಮಾರ್ಚ್​ 12 ರ ಬಳಿಕ ವರ್ಚುಯಲ್​ ಆಗಿ ವಿಚಾರಣೆಗೆ ಒಳಗಾಗುವುದಾಗಿ ತಿಳಿಸಿದ್ದಾರೆ.

ಮದ್ಯ ನೀತಿ ಹಗರಣದಲ್ಲಿ ಆಮ್​ ಆದ್ಮಿ ಪಕ್ಷದ ಸಂಚಾಲಕರೂ ಆಗಿರುವ ಕೇಜ್ರಿವಾಲ್​ರಿಗೆ ಈವರೆಗೆ 8 ಸಮನ್ಸ್​ ಜಾರಿ ಮಾಡಲಾಗಿದೆ. ಫೆಬ್ರವರಿ 27 ರಂದು 8ನೇ ಸಮನ್ಸ್​ ನೀಡಲಾಗಿದ್ದು, ಮಾರ್ಚ್ 4ರಂದು ವಿಚಾರಣೆಗೆ ಬರಲು ಸೂಚಿಸಿತ್ತು. ಆದರೆ, ಇದಕ್ಕೂ ಬಗ್ಗದೆ ಇಂದಿನ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ.

ವಿಡಿಯೋ ಕಾನ್ಫೆರೆನ್ಸ್​ ಮೂಲಕ ಹಾಜರು:ಸೋಮವಾರದ ವಿಚಾರಣೆಯಿಂದ ಗೈರಾದ ಬಳಿಕ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ಉತ್ತರ ನೀಡಿರುವ ಸಿಎಂ ಕೇಜ್ರಿವಾಲ್​, ತಮ್ಮ ವಿರುದ್ಧ ಜಾರಿ ಮಾಡಲಾದ ಸಮನ್ಸ್​ಗಳು ಕಾನೂನುಬಾಹಿರವಾಗಿವೆ. ಆದಾಗ್ಯೂ ನಾನು ವಿಚಾರಣೆ ಎದುರಿಸಲು ಸಿದ್ಧ. ವಿಡಿಯೋ ಕಾನ್ಫರೆನ್ಸಿಂಗ್​ ಮೂಲಕ ಮಾರ್ಚ್​ 12 ರ ನಂತರ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಪ್ರಕರಣದಲ್ಲಿ ತಮ್ಮ ಪಾತ್ರ ಇರದಿದ್ದರೂ, ರಾಜಕೀಯ ಪ್ರೇರಿತವಾಗಿ ನನ್ನ ವಿರುದ್ಧ ಸಮನ್ಸ್​​ಗಳನ್ನು ಜಾರಿ ಮಾಡಲಾಗುತ್ತಿದೆ. ಇದನ್ನು ನಾನು ಕಾನೂನಾತ್ಮಕವಾಗಿ ಎದುರಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಇನ್ನು, ದೆಹಲಿ ಸಿಎಂ ಪದೆ ಪದೇ ವಿಚಾರಣೆಯಿಂದ ಗೈರಾಗುತ್ತಿರುವ ಹಿನ್ನೆಲೆಯಲ್ಲಿ ಇಡಿ ಕೋರ್ಟ್​ ಮೆಟ್ಟಿಲೇರಿದೆ. ಕಾನೂನು ಪಾಲನೆ ಮಾಡಬೇಕಾದ ಹುದ್ದೆಯಲ್ಲಿದ್ದವರು ಆರೋಪ ಕೇಳಿಬಂದರೂ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ವಿಚಾರಣೆಗೆ ಹಾಜರಾಗಲು ಸೂಚಿಸಬೇಕು ಎಂದು ಕೋರಿ ಸ್ಥಳೀಯ ನ್ಯಾಯಾಲಯಕ್ಕೆ ಇಡಿ ದೂರು ನೀಡಿದೆ. ವಿಚಾರಣೆ ನಡೆಸಿರುವ ಕೋರ್ಟ್ ಕೇಜ್ರಿವಾಲ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಕೋರ್ಟ್​ ಮುಂದೆ ಹಾಜರಾಗಲು ಸೂಚಿಸಿತ್ತು. ಇದರಿಂದ ಕೇಜ್ರಿವಾಲ್​ ತಪ್ಪಿಸಿಕೊಂಡು ವರ್ಚುಯಲ್​ ಆಗಿ ಹಾಜರಾಗಿದ್ದರು.

ಮುಂದಿನ ಬಾರಿ ಖುದ್ದು ವಿಚಾರಣೆಗೆ ಬರುವುದಾಗಿ ಕೋರ್ಟ್​ಗೆ ತಿಳಿಸಿದ್ದರು. ಕೋರ್ಟ್​ನ ಆದೇಶದ ಮೇರೆಗೆ ತಾವು ವಿಚಾರಣೆ ಎದುರಿಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸುವುದಾಗಿ ಆಪ್​ ಸಂಚಾಲಕರು ತಿಳಿಸಿದ್ದಾರೆ.

ಯಾವಾಗೆಲ್ಲಾ ಸಮನ್ಸ್​ ಜಾರಿ:ದಿಲ್ಲಿ ಸಿಎಂ ಕೇಜ್ರಿವಾಲ್​ಗೆ ಈ ಹಿಂದೆ ಅಂದರೆ, 2023 ರ ನವೆಂಬರ್​ 2, ಡಿಸೆಂಬರ್​​ 21, ಈ ವರ್ಷದ ಜನವರಿ 3, ಜನವರಿ 18 ಮತ್ತು ಫೆಬ್ರವರಿ 2, ಫೆಬ್ರವರಿ 15, ಫೆಬ್ರವರಿ 22, ಫೆಬ್ರವರಿ 27 ರಂದು ಸೇರಿ ಒಟ್ಟಾರೆ 8 ಬಾರಿ ತನಿಖಾ ಸಂಸ್ಥೆ ಸಮನ್ಸ್​ ನೀಡಿದೆ.

ಇದನ್ನೂ ಓದಿ:'ನಾನು ಬಿಜೆಪಿ ಸೇರಬೇಕೆಂದು ಒತ್ತಡ ಹಾಕಲಾಗುತ್ತಿದೆ'- ದೆಹಲಿ ಸಿಎಂ ಕೇಜ್ರಿವಾಲ್​; ಸಚಿವೆ ಅತಿಶಿಗೆ ನೋಟಿಸ್​

ABOUT THE AUTHOR

...view details