Ind vs Eng, 3rd ODI: ಇಂಗ್ಲೆಂಡ್ ವಿರುದ್ಧ ಇಂದು ನಡೆದ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿತು. ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿದ ಭಾರತೀಯರು ಆಂಗ್ಲರನ್ನು ಬಗ್ಗು ಬಡಿದು 142 ರನ್‌ಗಳಿಂದ ಬೃಹತ್ ಗೆಲುವು ದಾಖಲಿಸಿದರು.
ಟಾಸ್ ಗೆದ್ದರೂ ಆಂಗ್ಲರಿಗೆ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಘಾತ ಎದುರಿಸಿತು. ಕಳೆದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ಘರ್ಜಿಸಿದ್ದ ರೋಹಿತ್ ಬ್ಯಾಟ್ ಮೌನಕ್ಕೆ ಶರಣಾಯಿತು. ಕೇವಲ ಒಂದು ರನ್ ಗಳಿಸಿ ಅವರು ನಿರ್ಗಮಿಸಿದರು. ಆದರೆ ಮತ್ತೊಂದು ತುದಿಯಿಂದ ಬ್ಯಾಟಿಂಗ್ ಆರಂಭಿಸಿದ್ದ ಗಿಲ್ ಮಾತ್ರ ಆಂಗ್ಲ ಬೌಲರ್ಗಳನ್ನು ದಂಡಿಸಿದರು. ಕೊಹ್ಲಿ ಜೊತೆಗೂಡಿ ಉತ್ತಮ ಸ್ಕೋರ್ ಕಲೆ ಹಾಕಿದರು. ಇಬ್ಬರು 107 ಎಸೆತಗಳಲ್ಲಿ 116 ರನ್ ಪೇರಿಸಿದರು.
𝐂𝐋𝐄𝐀𝐍 𝐒𝐖𝐄𝐄𝐏
— BCCI (@BCCI) February 12, 2025
Yet another fabulous show and #TeamIndia register a thumping 142-run victory in the third and final ODI to take the series 3-0!
Details - https://t.co/S88KfhFzri… #INDvENG @IDFCFIRSTBank pic.twitter.com/ZoUuyCg2ar
ಕೊಹ್ಲಿ ಕಮ್‌ಬ್ಯಾಕ್: ಕಳಪೆ ಫಾರ್ಮ್‌ನಿಂದ ಕಂಗೆಟ್ಟಿದ್ದ ಕೊಹ್ಲಿ ಈ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿದಂತೆ ಕಾಣುತ್ತಿದೆ. 55 ಎಸೆತಗಳನ್ನಾಡಿ 7 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 52 ರನ್ ಗಳಿಸಿ ನಿರ್ಗಮಿಸಿದರು. ಶುಭಮನ್ ಗಿಲ್ (112) ತಮ್ಮ ಆಟ ಮುಂದುವರೆಸಿ ಶತಕ ಪೂರ್ಣಗೊಳಿಸಿದರು.
ಅಯ್ಯರ್ 78 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರೆ, ರಾಹುಲ್ ಮತ್ತೊಮ್ಮೆ ತಾವು 5ನೇ ಕ್ರಮಾಂಕದಲ್ಲೂ ಉತ್ತಮ ಬ್ಯಾಟ್ ಮಾಡಬಲ್ಲೆ ಎಂಬುದನ್ನು ಪ್ರೂವ್ ಮಾಡಿದರು. 29 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 40 ರನ್ ಬಾರಿಸಿದರು. ಒಟ್ಟಾರೆ ಟೀಂ ಇಂಡಿಯಾ ಸಾಂಘಿಕ ಬ್ಯಾಟಿಂಗ್ ಪ್ರದರ್ಶನದಿಂದ 50 ಓವರ್‌ಗಳಲ್ಲಿ 356 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಬೃಹತ್ ಸ್ಕೋರ್‌ಗೆ ಬೆಚ್ಚಿದ ಆಂಗ್ಲರು 214 ರನ್ ಗಳಿಗೆ ತಮ್ಮ ಆಟ ಮುಕ್ತಾಯಗೊಳಿಸಿದರು. ಇಂಗ್ಲಿಷರ ಪರ ಯಾವೊಬ್ಬ ಬ್ಯಾಟರ್‌ಗೂ ಕನಿಷ್ಠ ಅರ್ಧಶತಕ ಬಾರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತದ ಮಂದೆ ಮಂಡಿಯೂರಿದರು.
Winners are grinners 😃😃#TeamIndia #INDvENG pic.twitter.com/xNa72K5WAh
— BCCI (@BCCI) February 12, 2025
ಭಾರತದ ಕರಾರುವಾಕ್ ಬೌಲಿಂಗ್: ಇಂಗ್ಲೆಂಡ್ ಪಡೆಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಭಾರತೀಯರು ಯಶಸ್ವಿಯಾದರು. ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಉರುಳಿಸಿದರು. ವಾಷಿಂಗ್ಟನ್ ಸುಂದರ್, ಕುಲ್ದೀಪ್ ತಲಾ ಒಂದು ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವಾದರು.
ಆಂಗ್ಲರಿಗೆ ವೈಟ್‌ವಾಶ್ ಮುಖಭಂಗ: ಏಕದಿನ ಸರಣಿಗೂ ಮೊದಲು ನಡೆದಿದ್ದ 5 ಪಂದ್ಯಗಳ ಟಿ20 ಸರಣಿಯಲ್ಲಿ 4-1 ಅಂತರದಿಂದ ಸೋಲು ಕಂಡಿದ್ದ ಆಂಗ್ಲರು, ಏಕದಿನ ಸರಣಿಯಲ್ಲಿ 3-0 ಅಂತರದಿಂದ ಸೋತು ವೈಟ್ ವಾಶ್ ಆದರು.
𝟭 𝗰𝗲𝗻𝘁𝘂𝗿𝘆
— BCCI (@BCCI) February 12, 2025
𝟮 𝗵𝗮𝗹𝗳-𝗰𝗲𝗻𝘁𝘂𝗿𝗶𝗲𝘀
𝟮𝟱𝟵 𝗿𝘂𝗻𝘀 𝗮𝘁 𝟴𝟲.𝟯𝟯@ShubmanGill wins the Player of the Series award for his dominating show with the bat. #TeamIndia #INDvENG pic.twitter.com/nMoQoPqC25
ಹಳೆ ಸೇಡು ತೀರಿಸಿಕೊಂಡ ಭಾರತ: ಈ ಪಂದ್ಯ ಗೆದ್ದ ಭಾರತ, ಇಂಗ್ಲೆಂಡ್ ವಿರುದ್ದ 44 ವರ್ಷದ ಹಳೆ ಸೇಡನ್ನೂ ತೀರಿಸಿಕೊಂಡಿತು. 1981ರಲ್ಲಿ ಇದೇ ಮೈದಾನದಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಆಂಗ್ಲರು ಭಾರತೀಯರ ವಿರುದ್ಧ 5 ವಿಕೆಟ್ಗಳಿಂದ ಗೆಲುವು ಸಾಧಿಸಿದ್ದರು.
ಗಿಲ್ ಸರಣಿ, ಪಂದ್ಯಶ್ರೇಷ್ಠ: ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ತೋರಿರುವ ಶುಭಮನ್ ಗಿಲ್ ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ, ಪಂದ್ಯಶ್ರೇಷ್ಠ ಆಟಗಾರನಾಗಿಯೂ ಪ್ರಶಸ್ತಿ ಪಡೆದರು.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಬುಮ್ರಾ, ಜೈಸ್ವಾಲ್ ಔಟ್: ಕನ್ನಡಿಗನಿಗೆ ಲಕ್ಕಿ ಚಾನ್ಸ್!