ಕರ್ನಾಟಕ

karnataka

ETV Bharat / bharat

ಇಡಿ ಕಸ್ಟಡಿಯಿಂದಲೇ ಸರ್ಕಾರಿ ಆದೇಶ ಹೊರಡಿಸಿದ ಸಿಎಂ ಅರವಿಂದ್​ ಕೇಜ್ರಿವಾಲ್​ - Kejriwal Issues Work Order

ದೆಹಲಿಯ ಕೆಲ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಲು ಇಡಿ ವಶದಲ್ಲಿರುವ ಸಿಎಂ ಕೇಜ್ರಿವಾಲ್​ ಅವರು ಜೈಲಿನಿಂದಲೇ ಆದೇಶ ಹೊರಡಿಸಿದ್ದಾರೆ.

ಸಿಎಂ ಅರವಿಂದ್​ ಕೇಜ್ರಿವಾಲ್​
ಸಿಎಂ ಅರವಿಂದ್​ ಕೇಜ್ರಿವಾಲ್​

By ETV Bharat Karnataka Team

Published : Mar 24, 2024, 12:38 PM IST

ನವದೆಹಲಿ:ಅಬಕಾರಿ ನೀತಿ ಹಗರಣದಲ್ಲಿ ಆರೋಪಿಯಾಗಿ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಜೈಲಿನಿಂದಲೇ ಸರ್ಕಾರದ ಮೊದಲ ಆದೇಶವನ್ನು ಹೊರಡಿಸಿದ್ದಾರೆ. ನಗರದ ಕೆಲವು ಪ್ರದೇಶಗಳಲ್ಲಿ ನೀರು ಮತ್ತು ಒಳಚರಂಡಿಗೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಸಚಿವೆ ಅತಿಶಿ ಅವರಿಗೆ ನಿರ್ದೇಶನ ನೀಡಿದ್ದಾರೆ. ಈ ಮೂಲಕ ಪ್ರಕರಣವೊಂದರಲ್ಲಿ ಬಂಧಿತರಾಗಿ ಜೈಲಿಂದ ಅಧಿಕಾರ ನಡೆಸಿದ ಭಾರತದ ಮೊದಲ ರಾಜಕಾರಣಿಯಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಜಲ ಸಂಪನ್ಮೂಲ ಇಲಾಖೆ ಸಚಿವೆ ಅತಿಶಿ, ದೆಹಲಿಯಲ್ಲಿನ ನೀರಿನ ಸಮಸ್ಯೆಯ ಬಗ್ಗೆ ಕ್ರಮ ಕೈಗೊಳ್ಳಲು ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು ಇಡಿ ಮೂಲಕ ಜೈಲಿನಿಂದಲೇ ಆದೇಶ ಹೊರಡಿಸಿದ್ದಾರೆ. ಇದು ಓರ್ವ ಜನಪ್ರತಿನಿಧಿಗೆ ಇರುವ ಬದ್ಧತೆ ಎಂದು ಬಣ್ಣಿಸಿದ್ದಾರೆ.

ಜನರ ಬಗ್ಗೆ ಇರುವ ನಿಜವಾದ ಕಾಳಜಿ:ಕೇಜ್ರಿವಾಲ್​ ಅವರು ಇಡಿ ಬಂಧನದಲ್ಲಿದ್ದರೂ, ದೆಹಲಿಯ ಜನರ ಬಗ್ಗೆ ಕಾಳಜಿ ಹೊಂದಿದ್ದಾರೆ. ಬೇಸಿಗೆ ಹೆಚ್ಚುತ್ತಿರುವ ಕಾರಣ ಮುಂಜಾಗೃತಾ ಕ್ರಮವಾಗಿ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಸಾಕಷ್ಟು ನೀರಿನ ಟ್ಯಾಂಕರ್‌ಗಳನ್ನು ನಿಯೋಜಿಸಲು ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ತಿಂಗಳುಗಳಿಗೆ ಆಗುವಷ್ಟು ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದ್ದಾಗಿ ತಿಳಿಸಿದರು.

ನೀರಿನ ಸಮಸ್ಯೆಯಾಗದಂತೆ ಮುಖ್ಯ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡುವಂತೆ ಕೇಜ್ರಿವಾಲ್ ನಿರ್ದೇಶಿಸಿದ್ದಾರೆ. ಅಗತ್ಯವಿದ್ದರೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಸಹಾಯವನ್ನೂ ಪಡೆಯಲು ಅವರು ಸಲಹೆ ನೀಡಿದ್ದಾರೆ. ಲೆಫ್ಟಿನೆಂಟ್​ ಗವರ್ನರ್​ ಎಲ್ಲಾ ಸಹಾಯವನ್ನು ನೀಡುತ್ತಾರೆ ಎಂದು ನಿರೀಕ್ಷೆ ಇದೆ ಎಂದು ಸಚಿವೆ ಅತಿಶಿ ಹೇಳಿದರು.

6 ದಿನ ಇಡಿ ಕಸ್ಟಡಿಗೆ:ಅಬಕಾರಿ ನೀತಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) 9 ಬಾರಿ ಸಮನ್ಸ್​ ಜಾರಿ ಮಾಡಿ ವಿಚಾರಣೆಗೆ ಕರೆದಿತ್ತು. ಆದರೆ, ಇದು ರಾಜಕೀಯಪ್ರೇರಿತ ಎಂದು ಆರೋಪಿಸಿದ ಆಪ್​ ಸಂಚಾಲಕರು ವಿಚಾರಣೆಯಿಂದ ಪ್ರತಿ ಬಾರಿ ಗೈರಾಗಿದ್ದರು. ಇಡಿ ಕೋರ್ಟ್​ ಮೆಟ್ಟಿಲೇರಿದ ಬಳಿಕ ಮಾರ್ಚ್​ 31 ರಂದು ರಾತ್ರಿ ಅವರನ್ನು ಬಂಧಿಸಿದೆ.

ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಮೂರ್ತಿಗಳು ಎಎಪಿ ರಾಷ್ಟ್ರೀಯ ಸಂಚಾಲಕರನ್ನು ಮಾರ್ಚ್ 28 ರವರೆಗೆ ವಿಚಾರಣೆಗಾಗಿ ಇಡಿ ಕಸ್ಟಡಿಗೆ ನೀಡಿ ಆದೇಶಿಸಿದೆ. ಜೈಲು ಪಾಲಾಗಿದ್ದರೂ, ಕೇಜ್ರಿವಾಲ್​ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುವುದಿಲ್ಲ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ:ಇಡಿ ಕಸ್ಟಡಿಯಿಂದಲೇ ಪತ್ರ ಬರೆದ ಕೇಜ್ರಿವಾಲ್​: ಈ ಸಂದೇಶ ಜನರಿಗೆ ಮುಟ್ಟಿಸಿದ ಪತ್ನಿ ಸುನಿತಾ - Sunita kejriwal Press meet

ABOUT THE AUTHOR

...view details