ನವದೆಹಲಿ:ಬಿಜೆಪಿ ನಾಯಕ ಮನೋಜ್ ಸೋಂಕರ್ ಅವರು ಚಂಡೀಗಢ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ‘ಅನ್ಯಾಯ ಮಾರ್ಗ’ಗಳನ್ನು ಬಳಸಿ ಚುನಾವಣೆ ಗೆದ್ದಿರುವುದನ್ನು ತೋರಿಸುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಆರೋಪಿಸಿದ್ದಾರೆ.
ದೆಹಲಿ ವಿಧಾನಸಭೆಯ ಹೊರಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಮೇಯರ್ ರಾಜೀನಾಮೆ ನೀಡಿದ್ದಾರೆ ಅಂದ್ರೆ ಅಲ್ಲಿ ಏನೋ ನಿಗೂಢವಾಗಿ ನಡೆದಿರುವುದು ಸ್ಪಷ್ಟ. ಅವರು ಅನ್ಯಾಯದ ರೀತಿಯಲ್ಲಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂಬುದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೇಳಿದರು.
ಅವರು ಇತರ ಚುನಾವಣೆಗಳನ್ನೂ ಗೆಲ್ಲುವುದು ಹೀಗೆ. ಇಲ್ಲದಿದ್ದರೇ ಗೆದ್ದ ಪಕ್ಷದಿಂದ ಅವರು ನಾಯಕರನ್ನು ಖರೀದಿಸುತ್ತಾರೆ. ಅನ್ಯಾಯವಾಗಿ ಚುನಾವಣೆ ಗೆದ್ದರೆ ಪ್ರಜಾಪ್ರಭುತ್ವ ರಾಷ್ಟ್ರ ಹೇಗೆ ಕಾರ್ಯನಿರ್ವಹಿಸುತ್ತದೆ?. ಅವರು (ಬಿಜೆಪಿ) ಚುನಾವಣೆಯಲ್ಲಿ ಗೆದ್ದ ಪಕ್ಷಕ್ಕೆ ಸರ್ಕಾರ ನಡೆಸಲು ಬಿಡಬೇಕು ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದರು. ಸೋಂಕರ್ ಚಂಡೀಗಢ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎಎಪಿಯ ಮೂವರು ಕೌನ್ಸಿಲರ್ಗಳಾದ ನೇಹಾ, ಪೂನಂ ಮತ್ತು ಗುರುಚರಣ್ ಕಲಾ ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡರು.