ಕರ್ನಾಟಕ

karnataka

By ETV Bharat Karnataka Team

Published : Jan 23, 2024, 5:35 PM IST

ETV Bharat / bharat

ನಾಳೆಯಿಂದ ಜೆಇಇ ಮುಖ್ಯ ಪರೀಕ್ಷೆ ಸೆಷನ್​-1 ಆರಂಭ: ಪರೀಕ್ಷಾರ್ಥಿಗಳೇ ಈ ನಿಯಮ ಪಾಲನೆ ಕಡ್ಡಾಯ

ಜೆಇಇ ಪರೀಕ್ಷೆಗೆ ಹಾಜರಾಗುವ ಪರೀಕ್ಷಾರ್ಥಿಗಳು ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ಎಂಬ ಪಟ್ಟಿಯನ್ನು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ.

ಜೆಇಇ ಮುಖ್ಯ ಪರೀಕ್ಷೆ
ಜೆಇಇ ಮುಖ್ಯ ಪರೀಕ್ಷೆ

ನವದೆಹಲಿ:ನಾಳೆಯಿಂದ ಮೊದಲ ಹಂತದ ಜೆಇಇ ಮುಖ್ಯ ಪರೀಕ್ಷೆಗಳು ಆರಂಭವಾಗಲಿವೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್​ಟಿಎ) ಸೂಚನಾ ಪಟ್ಟಿಯನ್ನು ನೀಡಿದೆ.

ಜೆಇಇ ಮುಖ್ಯ ಪರೀಕ್ಷೆಯ ಸೆಷನ್- 1 ಜನವರಿ 24 ರಿಂದ ಆರಂಭವಾಗಿ ಜನವರಿ 27, 29, 30, 31 ಮತ್ತು ಫೆಬ್ರವರಿ 1ರ ವರೆಗೂ ನಡೆಯಲಿವೆ. ಪರೀಕ್ಷಾರ್ಥಿಗಳು ಪ್ರಮುಖವಾಗಿ ಹಾಲ್​ ಟಿಕೆಟ್​, ಪರೀಕ್ಷಾ ಕೇಂದ್ರಕ್ಕೆ 1 ಗಂಟೆ ಮೊದಲು ಹಾಜರು, ಗುರುತಿನ ಚೀಟಿ ಸೇರಿದಂತೆ ಹಲವು ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಇಲ್ಲವಾದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂಬ ಷರತ್ತು ವಿಧಿಸಿದೆ.

ಪರೀಕ್ಷಾರ್ಥಿಗಳು ಏನು ಮಾಡಬೇಕು?:

  • ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮೊದಲು ಎನ್​ಟಿಎ ಅಧಿಕೃತ ವೆಬ್​ಸೈಟ್​ ಆದ https://jeemain.nta.ac.in/ ನಿಂದ ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
  • 1 ಗಂಟೆಗೂ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು.
  • ಡಿಜಿ ಲಾಕರ್/ಎಬಿಸಿ ಐಡಿ ಮೂಲಕ ನೋಂದಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ಪರೀಕ್ಷಾ ಕೇಂದ್ರದಲ್ಲಿ ತಮ್ಮ ಬಯೋಮೆಟ್ರಿಕ್‌ ದಾಖಲಿಸಬೇಕು.
  • ಪ್ರವೇಶ ಕಾರ್ಡ್, ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಯಾವುದಾದರೂ ಅಧಿಕೃತ ಗುರುತಿನ ಚೀಟಿ (ಪ್ಯಾನ್ ಕಾರ್ಡ್/ ಡ್ರೈವಿಂಗ್ ಲೈಸೆನ್ಸ್/ ವೋಟರ್ ಐಡಿ/ಪಾಸ್‌ಪೋರ್ಟ್/ಆಧಾರ್ ಕಾರ್ಡ್, ಇ- ಆಧಾರ್/ರೇಷನ್ ಕಾರ್ಡ್/12ನೇ ತರಗತಿ ಪ್ರವೇಶ ಕಾರ್ಡ್) ಶಾಲೆಗಳು /ಕಾಲೇಜುಗಳು/ವಿಶ್ವವಿದ್ಯಾಲಯಗಳು /ಕೋಚಿಂಗ್ ಸೆಂಟರ್‌ಗಳು ನೀಡಿದ ಐಡಿ ಕಾರ್ಡ್‌ಗಳು.
  • ಯಾವುದೇ ಗುರುತಿನ ಚೀಟಿಗೆ ಪರೀಕ್ಷಾರ್ಥಿಯ ಚಿತ್ರ ಇರುವುದು ಕಡ್ಡಾಯ.
  • ಅಭ್ಯರ್ಥಿಯು ಆಯ್ಕೆ ಮಾಡಿಕೊಂಡ ವಿಷಯ/ಮಾಧ್ಯಮ ಸರಿಯಾಗಿದೆಯಾ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇಲ್ಲವಾದಲ್ಲಿ ತಕ್ಷಣವೇ ಮೇಲ್ವಿಚಾರಕರಿಗೆ ಮಾಹಿತಿ ನೀಡಿ.
  • ಡ್ರಾಯಿಂಗ್ ಟೆಸ್ಟ್‌ಗೆ B.Arch ನ ಭಾಗ III ಅಭ್ಯರ್ಥಿಯು ತಾವೇ ಜ್ಯಾಮಿತಿ ಬಾಕ್ಸ್, ಪೆನ್ಸಿಲ್‌ಗಳು, ಎರೇಸರ್‌ಗಳು ಮತ್ತು ಕಲರ್ ಪೆನ್ಸಿಲ್‌ಗಳು ಅಥವಾ ಕ್ರಯೋನ್‌ಗಳನ್ನು ತರಬೇಕು. ಡ್ರಾಯಿಂಗ್ ಶೀಟ್‌ನಲ್ಲಿ ಜಲವರ್ಣಗಳನ್ನು ಬಳಸುವಂತಿಲ್ಲ.
  • ಅಭ್ಯರ್ಥಿಗಳು ತಿನಿಸು, ನೀರು, ಮೊಬೈಲ್ ಫೋನ್, ಇಯರ್ ಫೋನ್, ವಾಚ್​, ಮೈಕ್ರೊಫೋನ್, ಪೇಜರ್, ಕ್ಯಾಲ್ಕುಲೇಟರ್, ಡಾಕ್ಯುಪೆನ್, ಸ್ಲೈಡ್ ರೂಲ್‌ಗಳು, ಲಾಗ್ ಟೇಬಲ್‌ಗಳು, ಕ್ಯಾಮೆರಾ, ಟೇಪ್ ರೆಕಾರ್ಡರ್, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಕೊಂಡೊಯ್ಯುವಂತಿಲ್ಲ.
  • ಪರೀಕ್ಷಾರ್ಥಿ ಶೌಚಾಲಯಕ್ಕೆ ಹೋದಲ್ಲಿ ಮತ್ತೊಮ್ಮೆ ಕಡ್ಡಾಯ ತಪಾಸಣೆ ಮತ್ತು ಬಯೋಮೆಟ್ರಿಕ್ಸ್‌ಗೆ ಒಳಗಾಗಬೇಕು.
  • ಮಧುಮೇಹ ಹೊಂದಿರುವ ವಿದ್ಯಾರ್ಥಿಗಳು ಮಾತ್ರೆಗಳು, ಹಣ್ಣುಗಳು ಮತ್ತು ಪಾರದರ್ಶಕ ನೀರಿನ ಬಾಟಲಿಯನ್ನು ಪರೀಕ್ಷಾ ಹಾಲ್, ರೂಮ್‌ಗೆ ಒಯ್ಯಲು ಅನುಮತಿಸಲಾಗುವುದು. ಚಾಕೊಲೇಟ್‌, ಕ್ಯಾಂಡಿ, ಸ್ಯಾಂಡ್‌ವಿಚ್‌ಗಳಂತಹ ಪ್ಯಾಕ್ ಮಾಡಿದ ಆಹಾರ ನಿಷಿದ್ಧ.
  • ಅಭ್ಯರ್ಥಿಗಳು ಹಾಜರಾತಿ ಹಾಳೆಯಲ್ಲಿ ಸ್ಪಷ್ಟವಾದ ಕೈಬರಹದಲ್ಲಿ ಅಗತ್ಯ ವಿವರಗಳನ್ನು ನಮೂದಿಸಬೇಕು. ಸಹಿ, ಎಡಗೈ ಹೆಬ್ಬೆರಳು ಇಂಪ್ರೆಷನ್, ಫೋಟೋವನ್ನು ಸೂಕ್ತ ಸ್ಥಳದಲ್ಲಿ ಅಂಟಿಸಿ.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಮರು ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಭದ್ರತೆ

ABOUT THE AUTHOR

...view details