ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ಇಲ್ಲಿನ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಇಂದು ಸಂಜೆ 5 ಗಂಟೆಯ ವೇಳೆಗೆ ಶೇ.58ಕ್ಕೂ ಹೆಚ್ಚು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಚುನಾವಣಾಧಿಕಾರಿಗಳ ಅಧಿಕಾರಿಗಳ ಪ್ರಕಾರ, ಸಂಜೆ 5 ಗಂಟೆ ವೇಳೆಗೆ ಒಟ್ಟಾರೆ ಶೇ.58.19ರಷ್ಟು ಮತದಾನವಾಗಿದೆ. ಮೊದಲ ಹಂತಮತದಾನ ನಡೆಯುತ್ತಿರುವ 24 ವಿಧಾನಸಭಾ ಕ್ಷೇತ್ರಗಳ ಪೈಕಿ ಇಂದರ್‌ವಾಲ್‌ನಲ್ಲಿ ಅತಿ ಹೆಚ್ಚು ಅಂದರೆ ಶೇ.80.06 ರಷ್ಟು ಮತದಾನ ನಡೆದಿದೆ. ನಂತರ ಪಾಡರ್-ನಾಗ್ಸೇನಿ ಶೇ.76.80 ಮತ್ತು ಕಿಶ್ತ್ವಾರ್‌ನಲ್ಲಿ ಶೇ. 75.04 ರಷ್ಟು ಮತದಾನವಾಗಿದೆ.
ಇದೇ ಸಮಯಕ್ಕೆ ದೋಡಾ ಪಶ್ಚಿಮ ಕ್ಷೇತ್ರದಲ್ಲಿ ಶೇ.74.14 ರಷ್ಟು ಹೆಚ್ಚಿನ ಮತದಾನವಾಗಿದೆ. ಕಾಶ್ಮೀರ ಕಣಿವೆಯ ಪಹಲ್ಗಾಮ್ನಲ್ಲಿ ಶೇ. 67.86 ರಷ್ಟು ಮತದಾನವಾಗಿದೆ. ಮುಂದುವರೆದು, ಡಿ.ಎಚ್.ಪೋರಾ ಶೇ.65.21, ಕುಲ್ಗಾಮ್ ಶೇ.59.58, ಕೊಕರ್ನಾಗ್ ಶೇ.58 ಮತ್ತು ದೂರು ಶೇ.57.90ರಷ್ಟು ಮತದಾನ ದಾಖಲಾಗಿದೆ. ಟ್ರಾಲ್ ವಿಭಾಗದಲ್ಲಿ ಅತ್ಯಂತ ಕಡಿಮೆ ಅಂದರೆ ಶೇ. 40.58 ರಷ್ಟು ಮತದಾನ ದಾಖಲಾಗಿದೆ. ಪುಲ್ವಾಮಾ ಜಿಲ್ಲೆಯ ನಾಲ್ಕು ಕ್ಷೇತ್ರಗಳು ಇನ್ನೂ ಶೇ.50 ರ ಗಡಿಯನ್ನು ದಾಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಗಿ ಭದ್ರತೆಯ ನಡುವೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿತ್ತು.
2019 ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ನಡೆಯುತ್ತಿದೆ.
ಇದನ್ನೂ ಓದಿ:'ಒಂದು ರಾಷ್ಟ್ರ, ಒಂದು ಚುನಾವಣೆ‘ ವರದಿಗೆ ಕೇಂದ್ರ ಅನುಮೋದನೆ: ಖರ್ಗೆ ವಿರೋಧ - One Nation One Election