ನವದೆಹಲಿ:ಅಂತಾರಾಷ್ಟ್ರೀಯ ಯುವ ದಿನವನ್ನು ಜಾಗತಿಕವಾಗಿ ಆಗಸ್ಟ್ 12ರಂದು ಆಚರಿಸಲಾಗುವುದು. ಈ ದಿನದ ಮುಖ್ಯ ಉದ್ದೇಶ ಭವಿಷ್ಯದ ನಿರ್ಮಾತೃಗಳಾಗಿರುವ ಇವರ ಸಮಸ್ಯೆ, ಮತ್ತು ಯುವಜನರ ಕೊಡುಗೆಗಳ ಕುರಿತು ಜಾಗೃತಿ ಮೂಡಿಸುವುದಾಗಿದೆ.
ವಿಶ್ವಸಂಸ್ಥೆ ಜಾಲತಾಣದ ಪ್ರಕಾರ, ಅಂತಾರಾಷ್ಟ್ರೀಯ ಯುವ ದಿನದಂದು ಯುವ ಜನತೆ ಸಮಸ್ಯೆಗಳನ್ನು ಅಂತಾರಾಷ್ಟ್ರೀಯ ಸಮುದಾಯದ ಗಮನಕ್ಕೆ ತರುವುದು. ಜಾಗತಿಕ ಮಟ್ಟದಲ್ಲಿ ಯುವಕರ ಸಾಮರ್ಥ್ಯವನ್ನು ಆಚರಿಸುವುದು.
ಅಂತಾರಾಷ್ಟ್ರೀಯ ಯುವ ದಿನದ ಕುರಿತು ವಿಶ್ವಸಂಸ್ಥೆ ಹೇಳಿಕೆ: ಡಿಜಿಟಲ್ ಅಳವಡಿಕೆ ಮತ್ತು ನಾವೀನ್ಯತೆಯಲ್ಲಿ ಯುವಜನತೆ ಪ್ರಮುಖವಾಗಿದೆ. 2022ರಲ್ಲಿ 15 ರಿಂದ 24 ವರ್ಷ ವಯಸ್ಸಿನ ಮುಕ್ಕಾಲು ಭಾಗದಷ್ಟು ಜನರು ಇಂಟರ್ನೆಟ್ ಅನ್ನು ಬಳಕೆ ಮಾಡುತ್ತಿದ್ದಾರೆ. ಡಿಜಿಟಲ್ ಜಗತ್ತಿನಲ್ಲಿ ಇತರ ವಯೋಮಾನದವರಿಗಿಂತ ಯುವಜನತೆ ದರ ಹೆಚ್ಚಿದೆ. ಯುವಕರು ಹೆಚ್ಚಾಗಿ ಡಿಜಿಟಲ್ ಸ್ಥಳೀಯರು ಎಂದು ಗುರುತಿಸಲಾಗಿದೆ. ತಂತ್ರಜ್ಞಾನದ ಬದಲಾವಣೆ ಮತ್ತು ಪರಿಹಾರಗಳಲ್ಲಿ ಇವರು ಪ್ರಮುಖವಾಗಿದ್ದು. ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಡಿಜಿಟಲ್ ಆವಿಷ್ಕಾರದಲ್ಲಿ ಯುವಜನರ ಪಾತ್ರ ಅತ್ಯಗತ್ಯ.
ಇತಿಹಾಸ: 1991ರಲ್ಲಿ ವಿಯೆನ್ನಾದದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯುವ ದಿನದ ಕುರಿತು ಪ್ರಸ್ತಾಪ ಸಲ್ಲಿಸಲಾಯಿತು. ಯುವ ಸಂಘಟನೆಗಳ ಸಹಭಾಗಿತ್ವದಲ್ಲಿ ವಿಶ್ವಸಂಸ್ಥೆ ಇದಕ್ಕಾಗಿ ವಿಶೇಷವಾಗಿ ನಿಧಿ ಸಂಗ್ರಹಣೆ ಮತ್ತು ಪ್ರಚಾರ ನಡೆಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಯುವ ದಿನದ ಕುರಿತು ಶಿಫಾರಸು ಮಾಡಿದರು. 1998ರಲ್ಲಿ ವಿಶ್ವ ಸಂಸ್ಥೆಯ ವಿಶ್ವ ಸಮ್ಮೇಳನದ ಮೊದಲ ಅಧಿವೇಶನದಿಂದ ಆಗಸ್ಟ್ 12 ಅನ್ನು ಅಂತಾರಾಷ್ಟ್ರೀಯ ಯುವ ದಿನವೆಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು.