ಮೈಸೂರು: ಮುಡಾದಲ್ಲಿ (ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ) ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವೂ ಮುಡಾ ಆಯುಕ್ತರಿಗೆ ಪತ್ರ ಬರೆದು , 631 ಸೈಟ್‌ಗಳ ವಿವರ ಕೇಳಿದೆ. ಈ ಸಂಬಂಧ ಆಯುಕ್ತರಿಗೆ ಪತ್ರ ಬರೆದಿರುವ ಪತ್ರ ಈಟಿವಿ ಭಾರತಕ್ಕೆ ದೊರೆತಿದ್ದು, ಈ ಪತ್ರದ ವಿವರಗಳು ಇಲ್ಲಿದೆ.
ಮೈಸೂರು ನಗರದ ಶ್ರೀರಾಪುರ, ವಿಜಯನಗರ, ರಾಮಕೃಷ್ಣ ನಗರ, ಆಲನಹಳ್ಳಿ, ಬೋಗಾದಿ, ದೇವನೂರು, ಹಂಚಾ ಸಾತಗಳ್ಳಿ, ಹೆಬ್ಬಾಳ್ ಸೇರಿದಂತೆ ಸುಮಾರು 631 ನಿವೇಶನಗಳ ವಿವರವನ್ನು ಕೇಳಲಾಗಿದೆ.
ಈ ನಿವೇಶನಗಳಿಗೆ ಸಂಬಂಧಿಸಿದಂತೆ ಮಾಲೀಕರು, ಅವರ ವಿಳಾಸಗಳನ್ನು ಕೂಡಬೇಕು ಎಂದು ಜಾರಿ ನಿರ್ದೇಶನಾಲಯ ಕೋರಿದೆ. ಹಾಗೇ ನಿವೇಶನ ಹಂಚಿಕೆದಾರರ ವಿವರಗಳು, ಹೆಸರು, ವಿಳಾಸ, ಹಂಚಿಕೆ ದಿನಾಂಕ, ಹಂಚಿಕೆಯ ಗಾತ್ರ, ಹಂಚಿಕೆ ಮಾಡಿರುವ ಭೂಮಿಯ ವಿವರಗಳು, ಗ್ರಾಮಗಳು, ಉತ್ತೇಜಿತ ನಿವೇಶನದ ಸಂದರ್ಭದಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯ ಸರ್ವೆ ಸಂಖ್ಯೆ ವಿಸ್ತೀರ್ಣವನ್ನು ಸಹ ಉಲ್ಲೇಖಿಸಬಹುದು ಎಂದು ಹೇಳಿದೆ.
ಪಿಎಂಎಲ್ಎ 2002ರ ಸೆಕ್ಷನ್ 24ರ ಅಡಿ ಈ ಪತ್ರ ನೀಡಲಾಗಿದ್ದು, ಇದನ್ನು ಪರಿಗಣಿಸಬಹುದು ಎಂದು ಇಡಿ ಮಡಾ ಪತ್ರದಲ್ಲಿ ನಮೂದಿಸಿದೆ.
ಇದನ್ನೂ ಓದಿ: ಕಾರು ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್‌ಗಳ ನಡುವೆ ಡೆಡ್ಲಿ ಆ್ಯಕ್ಸಿಡೆಂಟ್; ಕೂದಲೆಳೆ ಅಂತರದಲ್ಲಿ ಸವಾರ ಪಾರು