ETV Bharat / bharat

ಕುತೂಹಲ ಕೆರಳಿಸಿದ್ದ ಕೇರಳ ಪ್ರಕರಣ: ಪ್ರಿಯಕರನ ಕೊಂದ ಪ್ರೇಯಸಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ - DEATH SENTENCE FOR GREESHMA

ಇದೊಂದು ಹೀನ ಕೃತ್ಯವಾಗಿದ್ದು, ಆರೋಪಿಯು ಯಾವುದೇ ವಿನಾಯಿತಿಗೆ ಅರ್ಹವಾಗಿಲ್ಲ. ಯಾವುದೇ ಪ್ರತ್ಯಕ್ಷದರ್ಶಿ ಸಾಕ್ಷ್ಯಿಗಳಿಲ್ಲದಿದ್ದರೂ, ಪೊಲೀಸರು ಉತ್ತಮ ರೀತಿಯ ತನಿಖೆ ನಡೆಸಿದ ಹಿನ್ನೆಲೆ ಕೋರ್ಟ್​ ಪ್ರಶಂಸೆ ವ್ಯಕ್ತಪಡಿಸಿದೆ.

Kerala court pronounces death sentence for Greeshma in Sharon Raj poisoning case
ಗ್ರೀಷ್ಮಾ- ಶರೋನ್​ ರಾಜ್​ (IANS)
author img

By ETV Bharat Karnataka Team

Published : Jan 20, 2025, 1:48 PM IST

ತಿರುವನಂತಪುರಂ: ಪ್ರಿಯಕರನಿಗೆ ಆಯುರ್ವೇದ ಔಷಧದಲ್ಲಿ ವಿಷಕಾರಿ ರಾಸಾಯನಿಕ ಮಿಶ್ರಣ ಮಾಡಿ ಹತ್ಯೆ ಮಾಡಿದ ಆರೋಪದ ಮೇಲೆ 24 ವರ್ಷದ ಗ್ರೀಷ್ಮಾ ಎಂಬ ಯುವತಿಗೆ ಮರಣದಂಡನೆ ವಿಧಿಸಿ ತಿರುವನಂತಪುರಂನ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ.

ಈ ತೀರ್ಪು ಹೊರ ಬೀಳುತ್ತಿದ್ದಂತೆ ಗ್ರೀಷ್ಮಾ ನಿರ್ಭಾವಕ್ಕೆ ಒಳಗಾಗಿದ್ದು, ಸಾವನ್ನಪ್ಪಿದ ಯುವಕ ಶರೋನ್​ ರಾಜ್​​ ಕುಟುಂಬಸ್ಥರ ಕಣ್ಣೀರಲ್ಲಿ ಆತನ ಸಾವಿಗೆ ನ್ಯಾಯ ದೊರೆತ ಭಾವದಲ್ಲಿ ಕಣ್ಣೀರಿಗೆ ಜಾರಿದರು. ಮತ್ತೊಂದು ಕಡೆ ಇದೊಂದು ಹೀನಕೃತ್ಯವಾಗಿದ್ದು, ಆರೋಪಿಯು ಯಾವುದೇ ವಿನಾಯಿತಿಗೆ ಅರ್ಹವಾಗಿಲ್ಲ. ಯಾವುದೇ ಪ್ರತ್ಯಕ್ಷದರ್ಶಿ ಸಾಕ್ಷ್ಯಿಗಳಿಲ್ಲದಿದ್ದರೂ, ಪೊಲೀಸರು ಉತ್ತಮ ರೀತಿಯ ತನಿಖೆ ನಡೆಸಿದ ಬಗ್ಗೆ ಕೋರ್ಟ್​ ಪ್ರಶಂಸೆ ವ್ಯಕ್ತಪಡಿಸಿದೆ.

ಪ್ರಕರಣದಲ್ಲಿ ಭಾಗಿಯಾದ ಮಾವನಿಗೆ 3ವರ್ಷ ಶಿಕ್ಷೆ, ತಾಯಿ ಬಿಡುಗಡೆ: ಪ್ರಕರಣದಲ್ಲಿ ಭಾಗಿಯಾದ ಗ್ರೀಷ್ಮಾ ಸಹೋದರ ಮಾವನಿಗೂ ಮೂರು ವರ್ಷ ಶಿಕ್ಷೆ ವಿಧಿಸಲಾಗಿದ್ದು, ಪ್ರಕರಣದ ಎರಡನೇ ಆರೋಪಿಯಾಗಿರುವ ಗ್ರೀಷ್ಮಾ ತಾಯಿಯನ್ನು ಬಿಡುಗಡೆ ಮಾಡಲಾಗಿದೆ.

ಘಟನೆಯ ಹಿನ್ನೆಲೆ: ಗ್ರೀಷ್ಮಾ ಮತ್ತು ಶರೋನ್​ ರಾಜ್​​ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಮೊದಲ ಗಂಡ ಸಾವನ್ನಪ್ಪಿದ ಬಳಿಕ ನೆಮ್ಮದಿಯಾಗಿ ಎರಡನೇ ಮದುವೆ ಆಗಬಹುದು ಎಂಬ ಜ್ಯೋತಿಷಿಯ ಮಾತನನ್ನು ಗ್ರೀಷ್ಮಾ ನಂಬಿದ್ದಳು. ಈ ಮಾತಿಗೆ ಸಹಮತ ಹೊಂದಿರದ ಶರೋನ್​ ಇದನ್ನು ಅನೇಕ ಬಾರಿ ಪ್ರಶ್ನಿಸುವ ಹಾಗೂ ಸವಾಲು ಹಾಕುವ ರೀತಿಯಲ್ಲಿ ನಡೆದುಕೊಂಡಿದ್ದ ಎಂಬುದು ಇಬ್ಬರ ನಡುವಣ ವಾಟ್ಸ್​ಆ್ಯಪ್​​ ಸಂದೇಶದಿಂದ ಕಂಡು ಬಂದಿತ್ತು. ಅಲ್ಲದೇ ಶರೋನ್​ ಗ್ರೀಷ್ಮಾಳನ್ನು ವೆಟ್ಟುಕಡು ಚರ್ಚ್​ನಲ್ಲಿ ಸಾಕೇಂತಿಕವಾಗಿ ಮದುವೆಯಾಗಿ, ಹಣೆಗೆ ಸಿಂಧೂರವನ್ನೂ ಕೂಡಾ ಹಚ್ಚಿದ್ದ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಹತ್ಯೆಗೂ ಮುನ್ನ ಎರಡು ಬಾರಿ ಕೊಲೆ ಯತ್ನ ಮಾಡಿದ್ದ ಅಪರಾಧಿ: ಈ ನಡುವೆ ಸೇನೆಯಲ್ಲಿದ್ದ ವ್ಯಕ್ತಿ ಜೊತೆ ಮದುವೆ ಸಂಬಂದ ಬಂದ ಹಿನ್ನೆಲೆ ಶರೋನ್​ ಜೊತೆ ಸಂಬಂಧವನ್ನು ಮುರಿದುಕೊಳ್ಳುವ ಯತ್ನ ನಡೆಸಿದ್ದ ಗ್ರೀಷ್ಮಾ, ಆತನನ್ನು ದೂರ ಇಡುವ ಸಂಬಂಧ ಎರಡು ಬಾರಿ ಕೊಲೆ ಯತ್ನ ನಡೆಸಿದ್ದಳು. ಮೊದಲ ಪ್ರಯತ್ನದಲ್ಲಿ ಜ್ಯೂಸ್​ಗೆ ಪ್ಯಾರಾಸಿಟಮಲ್​ ಆಗಿ ನೀಡಿದ್ದಳು. ಈ ವೇಳೆ ಅಸ್ವಸ್ಥಗೊಂಡಿದ್ದ ಆತ ಬಳಿಕ ಚೇತರಿಸಿಕೊಂಡಿದ್ದ.

ಬಳಿಕ 2022ರ ಅಕ್ಟೋಬರ್​​ ​ 14ರಂದು ಮತ್ತೊಮ್ಮೆ ರಾಸಾಯನಿಕ ಮಿಶ್ರಣದ ಜ್ಯೂಸ್​ನೊಂದಿಗೆ ಕೊಲ್ಲುವ ಪ್ರಯತ್ನಕ್ಕೆ ಮುಂದಾಗಿದ್ದಳು. ಈ ವೇಳೆ ಆತ ತೀವ್ರವಾಗಿ ಅಸ್ವಸ್ಥಗೊಂಡಿದ್ದ. 11ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಶರೋನ್​ ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದ

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ಪೊಲೀಸ್​ ಕಸ್ಟಡಿಯಲ್ಲಿದ್ದಾಗ ಗ್ರೀಷ್ಮಾ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಈ ವೇಳೆ ಈ ಪ್ರಕರಣ ಮತ್ತೊಂದು ತಿರುವು ಪಡೆದಿತ್ತು. ಒಂದು ವರ್ಷ ಸೆರೆವಾಸ ಅನುಭವಿಸಿದ್ದ ಗ್ರೀಷ್ಮಾ ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದಳು.

ಕೇರಳದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್​​ 2024ರ ಅಕ್ಟೋಬರ್​ 15ರಂದು ಆರಂಭಿಸಿ, ಜನವರಿ 3,2025ರವರೆಗೆ ನಡೆಸಿತು. ಇದರಲ್ಲಿ 95 ಸಾಕ್ಷಿಗಳನ್ನು ಪಡೆದುಕೊಂಡಿತ್ತು. ಅಂತಿಮವಾಗಿ ಇಂದು ತೀರ್ಪು ಹೊರ ಬಿದ್ದಿದೆ. (ಐಎಎನ್​ಎಸ್​)

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.