ETV Bharat / state

ಹಿಂದೆ ಧರ್ಮಸಿಂಗ್, ಸಿದ್ದರಾಮಯ್ಯ ಕಾಲದಲ್ಲೂ ತ್ಯಾಗ ಮಾಡಿದ್ದೇನೆ: ಡಿಸಿಎಂ ಡಿಕೆಶಿ ತ್ಯಾಗದ ಮಾತು - DCM DK SHIVAKUMAR

ಸಾಕಷ್ಟು ಶ್ರಮ ಪಟ್ಟು, ತ್ಯಾಗ, ಹೋರಾಟ ಮಾಡಿ ಕಾಂಗ್ರೆಸ್​ಗೆ ಶಕ್ತಿ ತಂದಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಂಡಾಯ ಇಲ್ಲ.‌ ಅಲ್ಲದೇ ಯಾರ ಜೊತೆಗೂ ಭಿನ್ನಾಭಿಪ್ರಾಯವೂ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದರು.

DCM DK SHIVAKUMAR
ಡಿಸಿಎಂ ಡಿ.ಕೆ.ಶಿವಕುಮಾರ್​ (ETV Bharat)
author img

By ETV Bharat Karnataka Team

Published : Jan 20, 2025, 2:28 PM IST

Updated : Jan 20, 2025, 2:35 PM IST

ಬೆಳಗಾವಿ: ನನಗೆ ಕೊಟ್ಟ ಜವಾಬ್ದಾರಿ ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ. ಎಂತೆಂಥ ಸಂದರ್ಭದಲ್ಲಿ ತ್ಯಾಗ ಮಾಡಿಕೊಂಡು ಬಂದಿದ್ದೇನೆ. ಹಿಂದೆ ಧರ್ಮಸಿಂಗ್ ಮತ್ತು ಸಿದ್ದರಾಮಯ್ಯ ಕಾಲದಲ್ಲೂ ತ್ಯಾಗ ಮಾಡಿದ್ದೇನೆ. ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಕರೆದು ಟಿಕೆಟ್ ಕೊಟ್ಟಿದ್ದರು. ನನಗೆ ಯಾವುದೇ ಸ್ಥಾನದ ಅವಶ್ಯಕತೆ ಇಲ್ಲ. ಜನರಿಗೆ ಒಳ್ಳೆಯದು ಆಗುತ್ತಿದೆ. ಅಷ್ಟೇ ನನಗೆ ಸಾಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದರು.

ಕಾಂಗ್ರೆಸ್ 60 ಶಾಸಕರು ಬಿಜೆಪಿಗೆ ಬರುತ್ತಾರೆ ಎಂಬ ಯತ್ನಾಳ್​ ಹೇಳಿಕೆ ಕುರಿತು ಮಾಧ್ಯಮಗಳು ಕೇಳುತ್ತಿದ್ದಂತೆ ಬೆಳಗಾವಿಯಲ್ಲಿ ಗರಂ ಆದ ಡಿ.ಕೆ.ಶಿವಕುಮಾರ್, ಲೋಕಲ್ ಡರ್ಟಿ ಪಾಲಿಟಿಕ್ಸ್ ಬಗ್ಗೆ ನನ್ನ ಜೊತೆಗೆ ನೀವು ಮಾತಾಡಬೇಡಿ. ಇದಕ್ಕೆ ನಾವು ಉತ್ತರಿಸೋದಿಲ್ಲ. ರಾಷ್ಟ್ರೀಯ ಸಮಾವೇಶ ಮಾಡುತ್ತಿದ್ದೇವೆ. ಮಾಧ್ಯಮಗಳಿಗೂ ಕಾಮನ್ ಸೆನ್ಸ್ ಇರಬೇಕು. ಸುಮ್ಮನೆ ಏನೇನೋ ಹೇಳುತ್ತಿದ್ದಾರೆ‌. ಎಲ್ಲವೂ ಸುಳ್ಳು. ಸುಳ್ಳಿನ ಕಂತು. ಸಾಕಷ್ಟು ಶ್ರಮ ಪಟ್ಟು, ತ್ಯಾಗ, ಹೋರಾಟ ಮಾಡಿ ಕಾಂಗ್ರೆಸ್​ಗೆ ಶಕ್ತಿ ತಂದಿದ್ದೇವೆ. ಇಲ್ಲಿನ ಗಾಂಧೀಜಿ ಬಾವಿಯಿಂದ ನೀರು ಚೆಲ್ಲಿ ಮನೆಗಳಿಗೆ ಬೆಳಕು ಕೊಟ್ಟಿದ್ದೇವೆ. ಅನೇಕ ಕಾರ್ಯಕ್ರಮಳನ್ನು ಇಲ್ಲಿಂದಲೇ ರೂಪಿಸಿದ್ದೇವೆ ಎಂದು ಕಿಡಿಕಾರಿದರು.

ಡಿಸಿಎಂ ಡಿ.ಕೆ.ಶಿವಕುಮಾರ್​ (ETV Bharat)

ಯಾವ ಬಂಡಾಯವೂ ಇಲ್ಲ, ಭಿನ್ನಾಭಿಪ್ರಾಯವೂ ಇಲ್ಲ: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಂಡಾಯ ಇಲ್ಲ.‌ ಅಲ್ಲದೇ ಯಾರ ಜೊತೆಗೂ ಭಿನ್ನಾಭಿಪ್ರಾಯವೂ ಇಲ್ಲ. ಯಾರ ಜೊತೆಗೂ ರಾಜಕೀಯ ಮತ್ತು ವಯಕ್ತಿಕ ವ್ಯತ್ಯಾಸಗಳೂ ಇಲ್ಲ. ನಾನು ದೊಡ್ಡ ಅಧ್ಯಕ್ಷ ಸ್ಥಾನದಲ್ಲಿ ಇದ್ದೇನೆ. ನನಗೆ ಎಲ್ಲರೂ ಒಂದೇ. ಎಲ್ಲರನ್ನೂ ಸರಿಸಮಾನವಾಗಿ ತೆಗೆದುಕೊಂಡು ಹೋಗುವುದು ನನ್ನ ಕರ್ತವ್ಯ. ನಾನುಂಟು, ನನ್ನ ಪಕ್ಷ ಮತ್ತು ಹೈಕಮಾಂಡ್ ಉಂಟು. ಕಾರ್ಯಕರ್ತರ ರಕ್ಷಣೆ ಮತ್ತು ಪಕ್ಷ ಉಳಿಸುವುದು. ಅದೇ ರೀತಿ ಸರ್ಕಾರವನ್ನು ಭದ್ರವಾಗಿ ಇಡುವುದು ಅಷ್ಟೇ ನನ್ನ ಕರ್ತವ್ಯ. ಬೇರೆ ಯಾವುದಕ್ಕೂ ನನ್ನ ಹೆಸರು ತೆಗೆದುಕೊಳ್ಳಲು ಹೋಗಬೇಡಿ. ಬೆಳಗಾವಿ ಜಿಲ್ಲಾ ರಾಜಕಾರಣದ ಬಗ್ಗೆ ನನಗೇನೂ ಗೊತ್ತಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಶಿಸ್ತಿನಿಂದ ಕೆಲಸ ಮಾಡುವ ಪ್ರತಿಯೊಬ್ಬರಿಗೂ ನಾನು ತಲೆ ಬಾಗಿ ಸೇವೆ ಮಾಡುತ್ತೇನೆ. ನನಗೆ ಪಕ್ಷ ಅಷ್ಟೇ ಮುಖ್ಯ ಎಂದರು.

ನಿಮಗೆ ಯಾರೋ ಸುಳ್ಳು ಹೇಳಿದ್ದಾರೆ; ಸುರ್ಜೇವಾಲ್ ವಿರುದ್ಧ ರಾಹುಲ್ ಗಾಂಧಿ ಅವರಿಗೆ ದೂರು ನೀಡಲು ಮುಂದಾಗಿರುವುದಕ್ಕೆ ನಿಮಗೆ ಯಾರೋ ಸುಳ್ಳು ಹೇಳಿ, ನಿಮ್ಮ ವ್ಯಕ್ತಿತ್ವವನ್ನೇ ಹಾಳು ಮಾಡುತ್ತಿದ್ದಾರೆ. ನಿನ್ನೆ ನಾನು ಬೆಳಗಾವಿ ಹಿರಿಯ ಮಾಜಿ ಶಾಸಕರೊಬ್ಬರ ಮನೆಗೆ ಭೇಟಿ ನೀಡಿದ್ದೆ. ಅವರ ಮಧ್ಯೆ ಏನೋ ಜಗಳವಿತ್ತು. ಅದಕ್ಕೆ ಹೋಗಿದ್ದಾರೆ ಅಂತೆಲ್ಲಾ ಕೆಲ ಟಿವಿಗಳಲ್ಲಿ ಸುದ್ದಿ ಮಾಡಿದ್ದಾರೆ. ಫಿರೋಜ್ ಸೇಠ್ ಹಿರಿಯ ರಾಜಕಾರಣಿ, ನನ್ನ ಜೊತೆಗೆ ಎರಡು ಬಾರಿ ಶಾಸಕರಾಗಿ ಇದ್ದವರು. ಗಾಂಧಿ ಭಾರತ ಕಾರ್ಯಕ್ರಮ ಸಮಿತಿ ರಾಜ್ಯಮಟ್ಟದ ಸದಸ್ಯರು ಆಗಿದ್ದಾರೆ. ಹಾಗಾಗಿ, ಸಂಘಟನೆ ದೃಷ್ಟಿಯಿಂದ ಅವರನ್ನು ಭೇಟಿಯಾಗಿ ಬಂದಿದ್ದೇನೆ ಎಂದು ಅಸಮಾಧಾನ ವಕ್ತಪಡಿಸಿದರು.

ಪ್ರಿಯಾಂಕಾ ಗಾಂಧಿ ಆಗಮಿಸುತ್ತಿದ್ದಾರೆ; 20 ಜನ ಕಾರ್ಯಕಾರಿ ಸಮಿತಿ ಸದಸ್ಯರು, ಕೆಲವರು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಸಂಸತ್ ಸದಸ್ಯರು ಸೇರಿ ಹೊರಗಡೆಯಿಂದ ಸುಮಾರು 60 ಜನ ಅತಿಥಿಗಳು ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ. ಅದೇ ರೀತಿ ಬಹುತೇಕ ಹಿರಿಯ ನಾಯಕರು, ನಮ್ಮ ಶಾಸಕರು, ವಿಧಾನಪರಿಷತ್ ಸದಸ್ಯರು ಬರುತ್ತಿದ್ದಾರೆ.‌ ಕೆಲವರಿಗೆ ಮುಖ್ಯ ವೇದಿಕೆಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ. ಹಿಂದೆ ಕಾರ್ಯಕ್ರಮಕ್ಕೆ ರೂಪಿಸಿದಂತೆ ಅದನ್ನೆ ಮುಂದುವರಿಸುತ್ತೇವೆ. ಇನ್ನು ಪ್ರಿಯಾಂಕಾ ಗಾಂಧಿ ಅವರು ಆಗಮಿಸುತ್ತಿದ್ದು, ಅವರ ಪ್ರವಾಸದ ವೇಳಾ ಪಟ್ಟಿ ಕೂಡ ಸಿದ್ಧವಾಗಿದೆ. ಅವರೆಲ್ಲಾ ನಾಳೆ ಒಂದು ಪ್ಲೈಟ್​ನಲ್ಲಿ ಬರುತ್ತಾರೆ. ಇನ್ನುಳಿದ ಕೆಲ ನಾಯಕರು ಇಂದು ಸಾಯಂಕಾಲವೇ ಆಗಮಿಸಲಿದ್ದಾರೆ. ಅವರಿಗೆ ಎಲ್ಲ ರೀತಿ ವ್ಯವಸ್ಥೆ ಮಾಡಿದ್ದೇವೆ ಎಂದರು.

ಗಾಂಧೀಜಿ, ಅಂಬೇಡ್ಕರ್ ಅವರ ಸ್ಮರಣೆ ಮತ್ತು ಸಂವಿಧಾನದ ರಕ್ಷಣೆ ಮೂಲ ಉದ್ದೇಶವನ್ನು ಸಮಾವೇಶ ಹೊಂದಿದೆ. ಗಾಂಧೀಜಿ ಆದರ್ಶಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅಂಬೇಡ್ಕರ್ ಅವರು ನೀಡಿರುವ ಮಾರ್ಗದರ್ಶನವನ್ನು ಎತ್ತಿ ಹಿಡಿದು ಸಂವಿಧಾನವನ್ನು ರಕ್ಷಿಸಲಾಗುತ್ತದೆ. ಇದು ನಮ್ಮೆಲ್ಲರ ಮೂಲಮಂತ್ರವಾಗಿದೆ. ಈ ವಿಚಾರಗಳನ್ನು ಸಮಾವೇಶದಲ್ಲಿ ಪಾಲ್ಗೊಂಡವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಬೆಳಗಾವಿಗೆ ವಿಶೇಷ ಕೊಡುಗೆ ನೀಡುವ ಬಗ್ಗೆ ನಿನ್ನೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಇಂದು ಮತ್ತೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಗಳ ಜೊತೆಗೆ ಈ ಸಂಬಂಧ ಮಾತಾಡಿದ್ದೇನೆ. ನಾಳೆ ಏನಾದರೂ ಘೋಷಣೆ ಮಾಡಿದರೆ ರಾಷ್ಟ್ರೀಯ ವಿಚಾರಗಳು ವಿಷಯಾಂತರ ಆಗಬಾರದು. ಎಐಸಿಸಿ ಸಂದೇಶ ಮತ್ತು ಕಾರ್ಯಕ್ರಮಗಳಿಗೆ ತೊಂದರೆ ಉಂಟಾಗಬಾರದು. ಹಾಗಾಗಿ, ನಮ್ಮ ಸರ್ಕಾರಿ ಕಾರ್ಯಕ್ರಮವನ್ನು ಬೇರೆ ಸಂದರ್ಭದಲ್ಲಿ ಘೋಷಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ ಹೇಳಿದರು.

ಗಾಂಧೀಜಿ ಪ್ರತಿಮೆ ಕೆತ್ತನೆ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ಆ ಮೂರ್ತಿಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸಿದೆ. ಆ ಬಗ್ಗೆ ನಾನು ಅಧಿಕೃತವಾಗಿ ಹೇಳಲು ಆಗುವುದಿಲ್ಲ ಎಂದಷ್ಟೇ ಡಿಕೆಶಿ ಹೇಳಿದರು.

ನನಗೆ ಎಐಸಿಸಿ ಜವಾಬ್ದಾರಿ ಕೊಟ್ಟಿದೆ; ದೆಹಲಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ, ಅದು ನನಗೆ ಗೊತ್ತಿದೆ. ನಾನೇ ದೆಹಲಿಗೆ ಹೋಗಿ 2500 ರೂ. ಪ್ಯಾರಿ ದೀದಿ ಕಾರ್ಯಕ್ರಮ ಘೋಷಣೆ ಮಾಡಿ ಬಂದಿದ್ದೇನೆ. ನನಗೆ ಎಐಸಿಸಿ ಮತ್ತು ದೆಹಲಿಯವರು ಜವಾಬ್ದಾರಿ ಕೊಟ್ಟಿದ್ದಾರೆ. ಹಾಗಾಗಿ, ಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ ಎಂದರು.

ಸಿದ್ದರಾಮಯ್ಯ ಅವರ ಹೆಸರು ಕೈ ಬಿಟ್ಟಿರುವ ವಿಚಾರಕ್ಕೆ, ಬಜೆಟ್ ಸಿದ್ಧತೆಯಲ್ಲಿ ನಮ್ಮ ಮುಖ್ಯಮಂತ್ರಿಗಳು ಬಜೆಟ್ ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕಾಗಿ ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು ಮಂತ್ರಿಗಳನ್ನು ಕರೆದು ಮಾತಾಡಬೇಕಾಗುತ್ತದೆ. ಹಾಗಾಗಿ, ಅವರನ್ನು ಫ್ರೀ ಬಿಟ್ಟಿದ್ದಾರೆ ಎಂದು ಡಿಕೆಶಿ ಸಮರ್ಥಿಸಿಕೊಂಡರು.

ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಬಡಿದಾಟ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ: ಪ್ರಲ್ಹಾದ್​ ಜೋಶಿ - PRALHAD JOSHI

Last Updated : Jan 20, 2025, 2:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.