ನವದೆಹಲಿ/ಬೆಂಗಳೂರು: ಕರ್ನಾಟಕ ಪೊಲೀಸರ ಸೈಬರ್ ಕ್ರೈಂ ತನಿಖಾ ಸಾಮರ್ಥ್ಯವನ್ನು ಬಲಪಡಿಸಲು ಇನ್ಫೋಸಿಸ್ ಫೌಂಡೇಷನ್ 33 ಕೋಟಿ ರೂ.ಗಳ ಅನುದಾನ ನೀಡಿದೆ.
ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರದ (ಸಿಸಿಐಟಿಆರ್) ಸಹಯೋಗವನ್ನು ನವೀಕರಿಸಲು ಇನ್ಫೋಸಿಸ್ ಫೌಂಡೇಷನ್, ಅಪರಾಧ ತನಿಖಾ ಇಲಾಖೆ(ಸಿಐಡಿ) ಮತ್ತು ಡೇಟಾ ಭದ್ರತಾ ಮಂಡಳಿ (ಡಿಎಸ್‌ಸಿಐ) ಜತೆಗಿನ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ. ಬೆಂಗಳೂರಿನ ಸಿಐಡಿ ಪ್ರಧಾನ ಕಚೇರಿ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದು ಸಿಎಸ್‌ಆರ್ ಅಂಗವಾದ ಇನ್ಫೋಸಿಸ್ ಫೌಂಡೇಶನ್ ಬುಧವಾರ ಹೇಳಿದೆ.