ಕರ್ನಾಟಕ

karnataka

ETV Bharat / bharat

ದೆಹಲಿಯಿಂದ ಜೆಡ್ಡಾಗೆ ಹೊರಟಿದ್ದ ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ - INDIGO EMERGENCY LANDING IN KARACHI

ಸಮಸ್ಯೆ ಪರಿಹಾರ ಕಂಡ ಬಳಿಕ ವಿಮಾನವೂ ಕರಾಚಿಯಿಂದ ಸೌದಿ ಅರೇಬಿಯಾದ ಜೆಡ್ಡಾಗೆ ತೆರಳುವ ಬದಲಾಗಿ ದೆಹಲಿಗೆ ವಾಪಸ್​ ಮರಳಿದೆ ಎಂದು ವರದಿ ತಿಳಿಸಿದೆ.

indigo-flight-bound-for-jeddah-makes-emergency-landing-in-karachi
ಇಂಡಿಗೋ ವಿಮಾನ (ಸಾಂದರ್ಭಿಕ ಚಿತ್ರ) (ಎಎನ್​ಐ)

By PTI

Published : 6 hours ago

ಕರಾಚಿ, ಪಾಕಿಸ್ತಾನ: ದೆಹಲಿಯಿಂದ ಸೌದಿ ಅರೇಬಿಯಾದ ಜೆಡ್ಡಾಗೆ ಹೊರಟಿದ್ದ ಇಂಡಿಗೋ ವಿಮಾನ ವೈದ್ಯಕೀಯ ಪರಿಸ್ಥಿತಿಯಿಂದ ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಶನಿವಾರ ನವದೆಹಲಿಯಿಂದ ಹೊರಟಿದ್ದ ವಿಮಾನದಲ್ಲಿ ವ್ಯಕ್ತಿಯೊಬ್ಬರು ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾದ ಹಿನ್ನೆಲೆ ಪಾಕಿಸ್ತಾನದಲ್ಲಿ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

ಜಿಯೋ ನ್ಯೂಸ್​ ಪ್ರಕಾರ, 33 ವರ್ಷದ ಭಾರತೀಯರೊಬ್ಬರು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದು, ಅವರಿಗೆ ತಕ್ಷಣದ ವೈದ್ಯಕೀಯ ನೆರವು ಹಿನ್ನೆಲೆಯಲ್ಲಿ ತುರ್ತು ಲ್ಯಾಂಡಿಂಗ್​ ಮಾಡಲಾಗಿದೆ.

ಅನಾರೋಗ್ಯಗೊಂಡ ಪ್ರಯಾಣಿಕರಿಗೆ ತಕ್ಷಣಕ್ಕೆ ಆಕ್ಸಿಜನ್​ ನೀಡಿದರೂ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣದ ಹಿನ್ನೆಲೆ ಭಾರತೀಯ ವಿಮಾನಯಾನ ಸಂಸ್ಥೆ ಕರಾಚಿ ವಿಮಾನ ನಿಲ್ದಾಣದ ಏರ್​ ಟ್ರಾಫಿಕ್​ ಕಂಟ್ರೋಲ್​ ಅನ್ನು ಸಂಪರ್ಕಿಸಿದೆ.

ಮಾನವೀಯ ನೆಲೆ ಆಧಾರದ ಮೇಲೆ ಕರಾಚಿ ಏರ್​​ ಟ್ರಾಫಿಕ್​ ಕಂಟ್ರೋಲ್​ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶಕ್ಕೆ ಅವಕಾಶ ನೀಡಿತು. ವಿಮಾನ ಲ್ಯಾಂಡ್​ ಆಗುತ್ತಿದ್ದಂತೆ, ಅಲ್ಲಿ ವೈದ್ಯಕೀಯ ತಂಡವು ಪ್ರಯಾಣಿಕರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲು ವಿಮಾನ ಪ್ರವೇಶಿಸಿದರು

ಈ ಸಮಸ್ಯೆ ಪರಿಹಾರ ಕಂಡ ಬಳಿಕ ವಿಮಾನವೂ ಕರಾಚಿಯಿಂದ ಸೌದಿ ಅರೇಬಿಯಾದ ಜೆಡ್ಡಾಗೆ ತೆರಳುವ ಬದಲಾಗಿ ದೆಹಲಿಗೆ ವಾಪಸ್​ ಮರಳಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ 10 ವರ್ಷದ ಕ್ಯಾನ್ಸರ್​ ರೋಗಿಗೆ ಕಚ್ಚಿದ ಇಲಿ; ಬಾಲಕ ಸಾವು, ತನಿಖಾ ವರದಿಯೂ ಬಹಿರಂಗ!

ABOUT THE AUTHOR

...view details