ಕರ್ನಾಟಕ

karnataka

ಜಿಟಿ ಜಿಟಿ ಮಳೆಗೆ ಬಿಸಿ ಅನ್ನಕ್ಕೆ ಹೆಸರುಬೇಳೆ ಸಾರು! ಒಮ್ಮೆ ಹೀಗೆ ಮಾಡಿ ನೋಡಿ - Hesarubele Saaru Recipe

By ETV Bharat Karnataka Team

Published : Aug 7, 2024, 4:11 PM IST

ಬಿಸಿ ಅನ್ನದೊಂದಿಗೆ ಸಾರು ಅಥವಾ ರಸಂ ಸವಿಯಲು ಇಷ್ಟಪಡುತ್ತೀರಾ?. ನಿತ್ಯವೂ ಒಂದೇ ಫ್ಲೇವರ್ ತಿಂದು ಬೇಸರವಾಗುತ್ತಿದೆಯಾ? ಹಾಗಾದ್ರೆ ಚಿಂತಿಸಬೇಡಿ. ನಾವು ನಿಮಗಾಗಿ ಅದ್ಭುತ ಪಾಕವಿಧಾನವನ್ನು ತಂದಿದ್ದೇವೆ.

HESARUBELE SAARU  HOW TO MAKE HESARUBELE SAARU  BELE SAARU RECIPE  MOONG DAL RASAM RECIPEPE
ಹೆಸರುಬೇಳೆ ಸಾರು (ETV Bharat)

ಕೆಲವರಿಗೆ ಅನ್ನದ ಜೊತೆಗೆ ಎಷ್ಟೇ ಕರಿಗಳು ಇದ್ರೂ ಸಾಲದು. ಆದರೂ ಅನೇಕರು ಸಾಮಾನ್ಯವಾಗಿ ಟೊಮೆಟೊ ಸಾರು ಮತ್ತು ಸಾಂಬಾರ್ ಸೇರಿದಂತೆ ಇನ್ನಿತರ ಕರಿಗಳನ್ನು ರೆಡಿ ಮಾಡುತ್ತಾರೆ. ಆದರೆ ನಿತ್ಯವೂ ಅದೇ ರುಚಿ ತಿಂದರೆ ಏನು ಪ್ರಯೋಜನ?. ಅದಕ್ಕಾಗಿಯೇ ಈ ಬಾರಿ ಹೆಸರುಬೇಳೆ ಸಾರು ಮಾಡಿ ನೋಡಿ.

ಹೆಸರು ಬೇಳೆ ಸಾರಿನ ರುಚಿ ಹಾಗೇನೇ. ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕೆನಿಸುತ್ತದೆ. ಇದಕ್ಕೆ ಹೆಚ್ಚಿನ ಶ್ರಮವೂ ಬೇಕಾಗಿಲ್ಲ. ಅನ್ನದೊಂದಿಗೆ ತಿನ್ನುವುದಲ್ಲದೇ, ರಸಂ ರೀತಿಯೂ ಕುಡಿಯಬಹುದು. ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ಹೆಸರುಬೇಳೆ ಸಾರು ಮಾಡಲು ಬೇಕಾಗುವ ಸಾಮಗ್ರಿ ಯಾವುವು ಮತ್ತು ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಯೋಣ.

ಬೇಕಾಗುವ ಪದಾರ್ಥಗಳು:

  • ಹೆಸರುಬೇಳೆ - ಒಂದು ಕಪ್ (180 ಗ್ರಾಂ)
  • ಎಣ್ಣೆ - 2 ಟೀ ಚಮಚ
  • ಅರಿಶಿನ - ಕಾಲು ಟೀ ಚಮಚ
  • ನೀರು - ಬೇಕಾಗುವಷ್ಟು
  • ಕರಿಬೇವಿನ ಎಲೆಗಳು - ಸ್ವಲ್ಪ
  • ಹಸಿರು ಮೆಣಸಿನಕಾಯಿ - ರುಚಿಗೆ ತಕ್ಕಷ್ಟು
  • ಈರುಳ್ಳಿ - 1
  • ಟೊಮೆಟೊ - 3
  • ಹುಣಸೆ ಹಣ್ಣಿನ ರಸ - ಸ್ವಲ್ಪ
  • ಕೊತ್ತಂಬರಿ ಪುಡಿ - ಸ್ವಲ್ಪ

ಒಗ್ಗರಣೆಗೆ:

  • ಎಣ್ಣೆ - 1 ಚಮಚ
  • ಜೀರಿಗೆ - ಒಂದು ಚಮಚ
  • ಬೆಳ್ಳುಳ್ಳಿ ಎಸಳು - 5
  • ಸಾಸಿವೆ - ಅರ್ಧ ಟೀ ಚಮಚ
  • ಒಣಮೆಣಸಿನಕಾಯಿ - 3
  • ಇಂಗು - ಕಾಲು ಟೀ ಚಮಚ
  • ಕರಿಬೇವಿನ ಎಲೆಗಳು - ಸ್ವಲ್ಪ

ತಯಾರಿಸುವ ವಿಧಾನ:

  • ಮೊದಲು ಒಂದು ಪಾತ್ರೆಯಲ್ಲಿ ಹೆಸರುಬೇಳೆ ತೆಗೆದುಕೊಂಡು ಅರ್ಧ ಗಂಟೆ ನೆನೆಸಿಡಿ. ನಂತರ ಚೆನ್ನಾಗಿ ತೊಳೆದು ಕುಕ್ಕರ್‌ನಲ್ಲಿ ಹಾಕಿ.
  • ಹೆಸರುಬೇಳೆ ತೆಗೆದುಕೊಂಡ ಅದೇ ಕಪ್‌ನಿಂದ ಎರಡರಿಂದ ಎರಡೂವರೆ ಕಪ್ ನೀರು ಸುರಿಯಿರಿ. ಅದಕ್ಕೆ ಅರಿಶಿನ ಮತ್ತು ಎಣ್ಣೆ ಹಾಕಿ.
  • ಕುಕ್ಕರ್ ಮುಚ್ಚಿ ಮತ್ತು ದಾಲ್ ಅನ್ನು ಎರಡರಿಂದ ಮೂರು ಸೀಟಿಗಳು ಕೇಳುವವರೆಗೆ ಬೇಯಿಸಿ.
  • ಅಡುಗೆಗೆ ಅಗತ್ಯವಿರುವ ಹಸಿರು ಮೆಣಸಿನಕಾಯಿಯನ್ನು ಮಧ್ಯಮ ಗಾತ್ರದಲ್ಲಿ ಕತ್ತರಿಸಿ. ನುಣ್ಣಗೆ ಈರುಳ್ಳಿ ಮತ್ತು ಟೊಮೆಟೊ ಕತ್ತರಿಸಿಕೊಳ್ಳಿ.
  • ಕುಕ್ಕರ್ ಮೂರು ಸೀಟಿ ಹೊಡೆದ ನಂತರ ಮತ್ತು ಅದರಲ್ಲಿರುವ ಫ್ರೀಜರ್ ಹೋದಾಗ ಮುಚ್ಚಳ ತೆಗೆಯಿರಿ. ಬೇಯಿಸಿದ ದಾಲ್ ಅನ್ನು ಒಂದು ಲೋಟದಿಂದ ಸ್ಮ್ಯಾಶ್ ಮಾಡಿ.
  • ಈಗ ಕತ್ತರಿಸಿದ ಹಸಿರು ಮೆಣಸಿನಕಾಯಿ, ಈರುಳ್ಳಿ ಮತ್ತು ಟೊಮೆಟೊ ತುಂಡುಗಳನ್ನು ಸ್ಮ್ಯಾಶ್​ ಮಾಡಿದ ಹೆಸರುಬೇಳೆಗೆ ಸೇರಿಸಿ. ನಂತರ ನಿಮ್ಮ ರೆಸಿಪಿಗೆ ಎಷ್ಟು ನೀರು ಬೇಕೋ ಅಷ್ಟು ಹಾಕಿಕೊಳ್ಳಿ.
  • ಸಾರಿಗೆ ಬೇಕಾದಷ್ಟು ಹುಣಸೆ ಹಣ್ಣಿನ ರಸ, ಸ್ವಲ್ಪ ಕರಿಬೇವು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ. ಅದರ ನಂತರ ಕುಕ್ಕರ್ ಅನ್ನು ಒಲೆಯ ಮೇಲೆ ಇರಿಸಿ ಮತ್ತು ಗ್ಯಾಸ್​ ಅನ್ನು ಮಧ್ಯಮ ಉರಿಯಲ್ಲಿ ಇರಿಸಿ, 10 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ಬೇಳೆಯನ್ನು ಕುದಿಸಿದ ನಂತರ ಹೊರ ತೆಗೆದು ಮುಚ್ಚಿಡಿ.
  • ಇದಕ್ಕಾಗಿ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಸ್ವಲ್ಪ ಬಿಸಿಯಾದ ನಂತರ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಸ್ವಲ್ಪ ಹುರಿಯಿರಿ. ನಂತರ ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ, ಇಂಗು ಮತ್ತು ಕರಿಬೇವಿನ ಸೊಪ್ಪು ಹಾಕಿ ಸ್ವಲ್ಪ ಹುರಿಯಿರಿ.
  • ಒಗ್ಗರಣೆಯನ್ನು ತೆಗೆದುಕೊಂಡು ಅದನ್ನು ಹೆಸರುಬೇಳೆ ಸಾರಿಗೆ ಸುರಿಯಿರಿ. ಕೊನೆಗೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ. ಅಷ್ಟೇ, ರುಚಿಕರವಾದ 'ಹೆಸರುಬೇಳೆ ಸಾರು' ರೆಡಿ.!

ಇದನ್ನೂ ಓದಿ:ಹಿಟ್ಟು ರುಬ್ಬುವ ರಗಳೆ ಇಲ್ಲ, ನೆನೆಸಿಡುವ ಪ್ರಮೇಯವೂ ಇಲ್ಲ: 10 ನಿಮಿಷದಲ್ಲಿ ನಿಮ್ಮಿಷ್ಟದ ಗರಿಗರಿ ದೋಸೆ ರೆಡಿ; ಅದು ಹೇಗೆ? - How to make DOSA WITHOUT GRINDING

ABOUT THE AUTHOR

...view details