ಹೈದರಾಬಾದ್: ಅಧಿಕ ತಾಪಮಾನಕ್ಕೆ ಜನರಷ್ಟೇ ಅಲ್ಲ ಮೂಕ ಪ್ರಾಣಿಗಳೂ ನಡುಗಿ ಹೋಗಿವೆ. ಅದರಲ್ಲೂ ನಾಯಿಗಳ ಮೇಲೆ ಬಿಸಿಲು ತೀವ್ರ ಪರಿಣಾಮ ಬೀರುತ್ತಿದೆ. ಕುಡಿಯುವ ನೀರು, ಆಹಾರಕ್ಕೂ ತೊಂದರೆಯಾಗುತ್ತಿದೆ. ಯಾರಾದರೂ ಅವುಗಳ ಬಳಿ ಹೋದರೆ ಅಥವಾ ಅವುಗಳನ್ನು ಪ್ರಚೋದಿಸಿದರೆ ನಾಯಿಗಳು ಹಿಂದೆ- ಮುಂದೆ ನೋಡದೇ ದಾಳಿ ಮಾಡುತ್ತಿವೆ. ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ನಾಯಿಗಳ ಕಡಿತಕ್ಕೆ ಬಲಿಯಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ ಅಂತಿದೆ ನಾರಾಯಣಗೌಡ ಇನ್‌ಸ್ಟಿಟ್ಯೂಟ್ ಆಫ್ ಪ್ರಿವೆಂಟಿವ್ ಮೆಡಿಸಿನ್ (ಐಪಿಎಂ). ಏಪ್ರಿಲ್ ತಿಂಗಳೊಂದರಲ್ಲೇ ನಿತ್ಯ 100 ಮಂದಿ ಚಿಕಿತ್ಸೆಗೆ ಬರುತ್ತಿದ್ದಾರೆ ಎನ್ನುತ್ತಿದೆ ಇನ್‌ಸ್ಟಿಟ್ಯೂಟ್ ಅಂಕಿ- ಸಂಖ್ಯೆಗಳು.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಪಮಾನವು ತೆಲಂಗಾಣದಲ್ಲಿ ಸುಮಾರು 40 - 44 ಡಿಗ್ರಿಗಳಿಗೆ ಏರಿಕೆ ಆಗುತ್ತದೆ. ಹೀಗಾಗಿ ನಾಯಿಗಳಿಗೆ ಆಹಾರ ಮತ್ತು ನೀರಿನ ಕೊರತೆ ಮತ್ತು ಹಾರ್ಮೋನುಗಳ ಬದಲಾವಣೆಯಿಂದಾಗಿ ಕೆಲವು ನಾಯಿಗಳು ಆಕ್ರಮಣಕಾರಿಯಾಗುತ್ತವೆ. ಅಪಾರ್ಟ್ ಮೆಂಟ್, ಕಾಲೋನಿ, ಕೊಳೆಗೇರಿಗಳಲ್ಲಿ ವಾಸಿಸುವವರು ಒಂದಿಷ್ಟು ಮುನ್ನೆಚ್ಚರಿಕೆ ವಹಿಸಿದರೆ, ನಾಯಿಗಳ ಕಾಟ ತಪ್ಪಿಸಬಹುದು ಎನ್ನುತ್ತಾರೆ ಪ್ರಾಣಿ ಪ್ರಿಯರು.
ನಾಯಿಗಳಿಂದ ರಕ್ಷಣೆಗೆ ಏನೆಲ್ಲ ಮುನ್ನೆಚ್ಚರಿಕೆ ವಹಿಸಬೇಕು?
- 99 ಪ್ರತಿಶತ ನಾಯಿಗಳು ಸ್ನೇಹಪರ ಆಗಿರುತ್ತವೆ. ನೀವು ಅವುಗಳ ಬಗ್ಗೆ ಸ್ವಲ್ಪ ಕರುಣೆ ತೋರಿದರೂ ಅವು ನಿಮ್ಮನ್ನು ನಂಬುತ್ತವೆ. ಸಾಮಾನ್ಯವಾಗಿ ಬೀದಿ ನಾಯಿಗಳು ದಾರಿಯಲ್ಲಿ ಹೋಗುವವರನ್ನು ಕಂಡರೆ ಭಯ ಬೀಳುತ್ತವೆ. ಆದರೆ ಕೆಲವೊಮ್ಮೆ ಅವುಗಳು ತಮ್ಮ ದೇಹದಲ್ಲಿನ ಬದಲಾವಣೆಗಳಿಂದಾಗಿ ಆಕ್ರಮಣಕಾರಿಯಾಗಿ ವರ್ತಿಸುತ್ತವೆ. ಅಂತಹ ನಾಯಿಗಳೊಂದಿಗೆ ತುಸು ಜಾಗರೂಕರಾಗಿರಿ.
- ನಾಯಿಯ ಒಂದು ಕಿವಿಯನ್ನು ಭಾಗಶಃ ಕತ್ತರಿಸಿದ್ದರೆ, ಅವುಗಳಿಗೆ ಔಷಧಿ ಅಥವಾ ಆಂಟಿ ರೇಬಿಸ್ ಲಸಿಕೆ ನೀಡಲಾಗಿದೆ ಎಂದು ಪರಿಗಣಿಸಲಾಗುತ್ತದೆ. ನೀವು ನಾಯಿಯನ್ನು ನೋಡಿದರೆ, ಅವುಗಳನ್ನು ನೇರವಾದ ಕಣ್ಣುಗಳಲ್ಲಿ ನೋಡಬೇಡಿ. ನಾವು ಅದನ್ನು ಗಮನಿಸದೇ ಹೋದರೆ, ಅದು ನಿಮಗೆ ಯಾವುದೇ ಹಾನಿ ಮಾಡುವುದಿಲ್ಲ. ವಿಶೇಷ ಎಂದರೆ ನಾಯಿಗಳನ್ನು ಕಂಡು ನೀವು ಓಡಬೇಡಿ. ಸಾವಧಾನವಾಗಿಯೇ ನಡೆಯಿರಿ, ಆಗ ಅವು ನಿಮ್ಮನ್ನು ಬೆನ್ನಟ್ಟುವುದಿಲ್ಲ.
- ನಿಮ್ಮ ಪ್ರದೇಶದಲ್ಲಿ ಹೆಚ್ಚು ಬೀದಿ ನಾಯಿಗಳಿದ್ದರೆ ಕೂಡಲೇ ಪಾಲಿಕೆ ಮತ್ತು ಪುರಸಭೆಗಳಿಗೆ ಮಾಹಿತಿ ನೀಡಿ. ಅವರು ಅವುಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಮಾಡುತ್ತಾರೆ ಮತ್ತು ಅವುಗಳಿಗೆ ಆಂಟಿರೇಬಿಸ್ ಲಸಿಕೆ ನೀಡುತ್ತಾರೆ. ಶಸ್ತ್ರಚಿಕಿತ್ಸೆಯ ನಂತರ, ಟೆಸ್ಟೋಸ್ಟೆರಾನ್ ಹಾರ್ಮೋನ್ ಉತ್ಪಾದನೆಯು ಕಡಿಮೆಯಾಗುತ್ತದೆ. ಆಗ ಅವು ದಾಳಿ ಮಾಡಲು ಮುಂದಾಗುವುದಿಲ್ಲ.
- ಬೇಸಿಗೆಯಲ್ಲಿ ನೀರು ಮತ್ತು ಆಹಾರದ ಕೊರತೆ. ಕಾಲೋನಿ, ಅಪಾರ್ಟ್ ಮೆಂಟ್ ಗಳ ಹೊರಭಾಗದಲ್ಲಿ ಚಿಕ್ಕ ಚಿಕ್ಕ ಬಟ್ಟಲುಗಳನ್ನು ಇಟ್ಟು ನೀರು, ಆಹಾರ ಹಾಕಿ. ಆಗ ನಾಯಿಗಳ ಆಕ್ರಮಣಕಾರಿ ಗುಣ ಕಡಿಮೆಯಾಗಿ ಆ ಪ್ರದೇಶದಲ್ಲಿ ತಿರುಗಾಡುವವರೊಂದಿಗೆ ಹೆಚ್ಚು ನಂಬಿಕೆ ಇಡುತ್ತವೆ. ಅಲ್ಲದೇ ಅಪಾರ್ಟ್ ಮೆಂಟ್ಗಳಲ್ಲಿ ವಾಸಿಸುವವರು 5-6 ಬೀದಿನಾಯಿಗಳನ್ನು ದತ್ತು ತೆಗೆದುಕೊಂಡು ಅವುಗಳಿಗೆ ಲಸಿಕೆ, ಆಹಾರ, ನೀರು ಇತ್ಯಾದಿಗಳನ್ನು ಒದಗಿಸಬೇಕು. ಹೀಗೆ ಆಶ್ರಯ ನೀಡಿದರೆ ನಾಯಿಗಳು ಅಮಾಯಕರ ಮೇಲೆ ದಾಳಿ ಮಾಡುವುದನ್ನು ತಡೆಗಟ್ಟಬಹುದು.
- ಎಲ್ಲಕ್ಕಿಂತ ಹೆಚ್ಚಾಗಿ ನಾಯಿ ಕಡಿತವನ್ನು ನಿರ್ಲಕ್ಷಿಸಬೇಡಿ. ಗಾಯವಾದ ಜಾಗವನ್ನು ತಕ್ಷಣ ಸೋಪಿನಿಂದ ತೊಳೆಯಿರಿ. ಗಾಯದೊಳಗೆ ನೀರು ಆಡದಂತೆ ನೋಡಿಕೊಳ್ಳಬೇಕು. ಇದು ರೇಬೀಸ್ ಅನ್ನು ಉಂಟುಮಾಡುವ ವೈರಸ್ ಅನ್ನು ಬಿಡುಗಡೆ ಮಾಡುತ್ತದೆ. ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ಆಂಟಿರೇಬಿಸ್ ಲಸಿಕೆ ತೆಗೆದುಕೊಳ್ಳಿ. ಸಾಕು ನಾಯಿಗಳಿಗೆ ಆಂಟಿರೇಬಿಸ್ ಅನ್ನು ಮೊದಲೇ ನೀಡಬೇಕು. ಸಾಕು ನಾಯಿ ಕಡಿತವನ್ನು ನಿರ್ಲಕ್ಷಿಸಬಾರದು. ಔಷಧಿಯ ಸಂಪೂರ್ಣ ಪ್ರಮಾಣವನ್ನು ತೆಗೆದುಕೊಳ್ಳುವುದು ಭವಿಷ್ಯದ ರೇಬೀಸ್ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.
ಇದನ್ನು ಓದಿ:ನೀಳ ಕಾಲಿನ ಸೌಂದರ್ಯಕ್ಕೆ ಅಡ್ಡಿಯಾಗುತ್ತಿದ್ಯಾ ತೊಡೆಯ ಕೊಬ್ಬು; ಇಲ್ಲಿದೆ ಸರಳ ಪರಿಹಾರ - how to cut Thigh Fat