ಕರ್ನಾಟಕ

karnataka

ETV Bharat / bharat

ಒಡಿಶಾ, ಬಂಗಾಳ, ಜಾರ್ಖಂಡ್‌ನಲ್ಲಿ ಬಿಸಿಗಾಳಿ, ಏಪ್ರಿಲ್ 27ರವರೆಗೆ ಈಶಾನ್ಯ ರಾಜ್ಯಗಳಲ್ಲಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ - IMD Forecast - IMD FORECAST

ಪಶ್ಚಿಮ ಬಂಗಾಳ, ಒಡಿಶಾ, ಪೂರ್ವ ಉತ್ತರ ಪ್ರದೇಶ, ಬಿಹಾರದ ಕೆಲವು ಭಾಗಗಳು ಮುಂದಿನ ಕೆಲವು ದಿನಗಳವರೆಗೆ ಏಪ್ರಿಲ್ 26 ರವರೆಗೆ ಬಿಸಿಗಾಳಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ.

HEATWAVE IN ODISHA BENGAL  NORTH EAST RAINFALL
ಒಡಿಶಾ, ಬಂಗಾಳ, ಜಾರ್ಖಂಡ್‌ನಲ್ಲಿ ಬಿಸಿಗಾಳಿ, ಏಪ್ರಿಲ್ 27ರವರೆಗೆ ಈಶಾನ್ಯ ರಾಜ್ಯಗಳಲ್ಲಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

By ETV Bharat Karnataka Team

Published : Apr 22, 2024, 2:30 PM IST

ನವದೆಹಲಿ:ಏಪ್ರಿಲ್ 26 ರವರೆಗೆ ಮುಂದಿನ ಕೆಲವು ದಿನಗಳಲ್ಲಿ ಪಶ್ಚಿಮ ಬಂಗಾಳ, ಒಡಿಶಾ, ಪೂರ್ವ ಉತ್ತರ ಪ್ರದೇಶ, ಬಿಹಾರದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

ಒಡಿಶಾ ಮತ್ತು ಗಂಗಾನದಿ ಪಶ್ಚಿಮ ಬಂಗಾಳದಲ್ಲಿ ದಿನದ ತಾಪಮಾನವು ಇಂದು 40 ಡಿಗ್ರಿ ಸೆಲ್ಸಿಯಸ್‌ನ ಗಡಿ ದಾಟುವ ನಿರೀಕ್ಷೆಯಿದೆ. ಈ ರಾಜ್ಯಗಳಲ್ಲದೇ, ಕರಾವಳಿ ಆಂಧ್ರಪ್ರದೇಶ, ಕೇರಳ, ಪುದುಚೇರಿ ಮತ್ತು ತಮಿಳುನಾಡು ಮುಂತಾದ ದಕ್ಷಿಣದ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಭಾಗಗಳಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣ ಕಂಡು ಬರುವ ಸಾಧ್ಯತೆಯಿದೆ.

ಪೂರ್ವ ಭಾರತದಾದ್ಯಂತ ಈ ವಾರ ತಾಪಮಾನವು 44 ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು ಎಂದು ಹವಾಮಾನ ಕಚೇರಿ ತಿಳಿಸಿದೆ. ಕಳೆದ ವಾರದಲ್ಲಿ ಉತ್ತರ, ದಕ್ಷಿಣ ಮತ್ತು ಪೂರ್ವ ರಾಜ್ಯಗಳಲ್ಲಿ ನಾಲ್ಕರಿಂದ ಆರು ಡಿಗ್ರಿ ತಾಪಮಾನ ಏರಿಕೆಯಾಗಿತ್ತು.

ದೆಹಲಿ ಹವಾಮಾನ: ಬೆಳಗ್ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿ ಸಹಿತ ಮಳೆ ಸುರಿದಿದೆ. ಇದರಿಂದ ತಾಪಮಾನ ತಗ್ಗಿಸಿತು, ಪರಿಣಾಮ ದೆಹಲಿಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಐಎಂಡಿಯ ಇತ್ತೀಚಿನ ಮಾಹಿತಿ ಪ್ರಕಾರ, ಮುಂದಿನ ಐದು ದಿನಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಶಾಖವು ತುಂಬಾ ಏರಿಕೆಯಾಗುವ ಸಾಧ್ಯತೆಯಿದೆ ಮತ್ತು ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ.

ಈ ರಾಜ್ಯಗಳಲ್ಲಿ ಮಳೆ ಸಾಧ್ಯತೆ:ಹವಾಮಾನ ಕಚೇರಿಯ ಪ್ರಕಾರ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಏಪ್ರಿಲ್ 27 ರವರೆಗೆ ಗಾಳಿ ಸಹಿತ ಮಳೆಯಾಗುವ ನಿರೀಕ್ಷೆಯಿದೆ.

ಏ.21ರಿಂದ 24ರ ಅವಧಿಯಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಗುಡುಗು ಮತ್ತು ಮಿಂಚು ಮತ್ತು ಬಿರುಗಾಳಿಯ ಗಾಳಿ (30-40 kmph) ಜೊತೆಗೆ ಸಾಧಾರಣ ಮಳೆ/ಹಿಮಪಾತ ಆಗಲಿದೆ. 2024ರ ಏ.25ರಿಂದ 27 ಏಪ್ರಿಲ್ ಅವಧಿಯಲ್ಲಿ ಅಸ್ಸಾಂ ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಮಳೆಯಾಗಲಿದೆ.

ಅದೇ ರೀತಿ, ಏ. 22ರಿಂದ 24ರವರೆಗೆ ಉಪ ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಹಾಗೂ ಏ.22ರಿಂದ 23ರ ಸಮಯದಲ್ಲಿ ಒಡಿಶಾ, 23 ಏಪ್ರಿಲ್ ಗಂಗಾನದಿ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್​ನಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಗಾಳಿ (30-40 kmph) ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ.

ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಫರಾಬಾದ್ ಹಾಗೂ ಏಪ್ರಿಲ್ 22 ಮತ್ತು 23 ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಮೇಲೆ ಗುಡುಗು ಮತ್ತು ಮಿಂಚುಗಳ ಸಹಿತ ಸಾಧಾರಣ ಮಳೆ ಅಥವಾ ಹಿಮಪಾತ ಆಗುವ ನಿರೀಕ್ಷೆಯಿದೆ. 22 ಏಪ್ರಿಲ್ ರಂದು ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದ ಮೇಲೆ ಗುಡುಗು, ಮಿಂಚು ಮತ್ತು ಬಿರುಗಾಳಿಯ ಗಾಳಿ (30-40 kmph) ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ಕೊಟ್ಟಿದೆ.

ದಕ್ಷಿಣ ಭಾರತ ವಾತಾವರಣ: 2024ರ ಏಪ್ರಿಲ್ 22 ಮತ್ತು 24 ರಂದು ಮಧ್ಯ ಮಹಾರಾಷ್ಟ್ರ, ಮರಾಠವಾಡದಲ್ಲಿ ಮತ್ತು ಕೊಂಕಣ ಹಾಗೂ ಗೋವಾದಲ್ಲಿ ಗುಡುಗು ಮತ್ತು ಮಿಂಚು ಸಹಿತ ಲಘು ಮಳೆ ಸುರಿಯುವ ಸಾಧ್ಯತೆಯಿದೆ. ಏಪ್ರಿಲ್ 22 ರಂದು ತಮಿಳುನಾಡು, ಕೇರಳ ಮತ್ತು ಮಾಹೆ ಮತ್ತು ಕರ್ನಾಟಕದಲ್ಲಿ ಪ್ರತ್ಯೇಕವಾದ ಗುಡುಗು ಮತ್ತು ಮಿಂಚು ಸಹಿತ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ ಮತ್ತು ತೆಲಂಗಾಣದಲ್ಲಿ ಏಪ್ರಿಲ್ 21 ರಿಂದ 24 ರವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ (ಗಂಟೆಗೆ 40-60 ಕಿಮೀ) ಮಳೆಯಾಗುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ.

ಬಿಸಿಗಾಳಿಯ ಎಚ್ಚರಿಕೆ:ಹವಾಮಾನ ಕಚೇರಿಯು ಮುಂದಿನ 5 ದಿನಗಳಲ್ಲಿ ಗಂಗಾನದಿ ಪಶ್ಚಿಮ ಬಂಗಾಳದ ಹಲವು/ಕೆಲವು ಭಾಗಗಳಲ್ಲಿ ಹಾಗೂ ಒಡಿಶಾ, ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಮುಂದಿನ 5 ದಿನಗಳಲ್ಲಿ, ಉಪ - ಹಿಮಾಲಯ ಪಶ್ಚಿಮ ಬಂಗಾಳದ ಮೇಲೆ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಏ.24ರಿಂದ 26 ರ ಅವಧಿಯಲ್ಲಿ ಮತ್ತು ಜಾರ್ಖಂಡ್‌ನಲ್ಲಿ, ಏಪ್ರಿಲ್ 22-26 ರ ಅವಧಿಯಲ್ಲಿ ಗಂಗಾನದಿ ಪಶ್ಚಿಮ ಬಂಗಾಳದ ಪ್ರದೇಶಗಳಲ್ಲಿ ತೀವ್ರವಾದ ಬಿಸಿಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ.

ಏಪ್ರಿಲ್ 22-26 ರ ಅವಧಿಯಲ್ಲಿ ಉಪ-ಹಿಮಾಲಯ ಪಶ್ಚಿಮ ಬಂಗಾಳ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ರಾಯಲಸೀಮಾ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್, ಕರಾವಳಿ ಕರ್ನಾಟಕ ಮತ್ತು ಕೇರಳ ಮತ್ತು ಮಾಹೆಯಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣವು ಕಂಡುಬರಲಿದೆ. ಏಪ್ರಿಲ್ 22 ರಂದು ಗಂಗಾನದಿ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಹಗಲಿನ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚು, ರಾತ್ರಿ ವೇಳೆ ಬಿಸಿ ವಾತಾವರಣ ಕಂಡುಬರುವ ಸಾಧ್ಯತೆಯಿದೆ.

ಇದನ್ನೂ ಓದಿ:ಹೋಳಿಯ ಮೊದಲ ಬಣ್ಣ ಭಾರತದ ರಕ್ಷಕರ ಹೆಸರಿನಲ್ಲಿರಬೇಕು: ಸಿಯಾಚಿನ್​​ನಲ್ಲಿ ರಾಜನಾಥ್ ಸಿಂಗ್ ಬಣ್ಣನೆ - Rajnath Singh

ABOUT THE AUTHOR

...view details