ಹೈದರಾಬಾದ್/ಬೆಂಗಳೂರು :ಸಿಲಿಕಾನ್ ಸಿಟಿಯಲ್ಲಿ ನಿನ್ನೆ 22 ಕ್ಯಾರೆಟ್ನ 10 ಗ್ರಾಂನ ಬಂಗಾರದ ಬೆಲೆ ₹71,100 ಇತ್ತು. ಅದು ಇಂದು 700 ರೂ ಏರಿಕೆ ಕಂಡು 71,800 ರೂಗೆ ಹೆಚ್ಚಳವಾಗಿದೆ. ಅದರಂತೆಯೇ 24 ಕ್ಯಾರೆಟ್ನ 10 ಗ್ರಾಂನ ಬಂಗಾರದ ಬೆಲೆ ₹ ₹74,660 ಇತ್ತು. ಇಂದು ₹730 ರೂ ಏರಿಕೆಯಾಗಿ ₹75,390 ಕ್ಕೆ ತಲುಪಿದೆ.
ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಸೋಮವಾರ 10 ಗ್ರಾಂ ಶುದ್ಧ ಚಿನ್ನದ ಬೆಲೆ ರೂ.77,010 ರಷ್ಟಿದ್ದರೆ, ಮಂಗಳವಾರ ರೂ. 820 ರಷ್ಟು ಏರಿಕೆಯಾಗಿ ರೂ. 77,830 ಕ್ಕೆ ತಲುಪಿದೆ. ಸೋಮವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ 91,604 ರೂ.ಗಳಾಗಿದ್ದರೆ, ಮಂಗಳವಾರ 1,640 ರೂ.ಗಳ ಏರಿಕೆ ಕಂಡು 93,244 ರೂ.ಗೆ ತಲುಪಿದೆ.
ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ : ಹೈದರಾಬಾದ್‌ನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.77,830 ಇದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 93,244 ರೂ. ತಲುಪಿದೆ.
ವಿಜಯವಾಡದಲ್ಲಿ ಚಿನ್ನದ ಬೆಲೆ : ವಿಜಯವಾಡದಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.77,830 ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 93,244 ರೂ. ತಲುಪಿದೆ.