ಕರ್ನಾಟಕ

karnataka

ETV Bharat / bharat

ಬಾಲ್ಕನಿಯಲ್ಲಿ ಸೌರ ಫಲಕ ಅಳವಡಿಸಿ 100 ಯುನಿಟ್ ವಿದ್ಯುತ್ ಉತ್ಪಾದಿಸುವ ಯೋಜನೆ: ಇದರ ವೆಚ್ಚ ಕೇವಲ 50 ಸಾವಿರ! - HOW TO USE BALCONY SOLAR SYSTEM - HOW TO USE BALCONY SOLAR SYSTEM

ಫ್ಲಾಟ್‌ಗಳಲ್ಲಿ ವಾಸಿಸುವ ಜನರಿಗೆ ಬಾಲ್ಕನಿ ಸೋಲಾರ್ ಸಿಸ್ಟಮ್‌ವೊಂದನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಜೈಪುರದಲ್ಲಿ ಇದನ್ನು ಮೊದಲ ಬಾರಿಗೆ ಪರೀಕ್ಷೆ ಕೂಡಾ ನಡೆಸಲಾಗಿದೆ. ಮಾರ್ಗಸೂಚಿಗಳನ್ನು ಮಾಡಿದ ನಂತರ, ಸಾಮಾನ್ಯ ಗ್ರಾಹಕರು ಆರು ತಿಂಗಳೊಳಗೆ ತಮ್ಮ ಬಾಲ್ಕನಿಗಳಲ್ಲಿ ಈ ವ್ಯವಸ್ಥೆ ಸ್ಥಾಪಿಸಲು ಸಾಧ್ಯವಾಗುತ್ತದೆ. ಒಂದು ಕಿಲೋವ್ಯಾಟ್ ಬಾಲ್ಕನಿ ಸೋಲಾರ್ ಸಿಸ್ಟಮ್​ಗೆ 50,000 ರೂಪಾಯಿ ವೆಚ್ಚವಾಗುತ್ತದೆ.

RAJASTHAN BALCONY SOLAR  GENERATE 100 UNITS OF ELECTRICITY  INSTALLING SOLAR PANELS IN BALCONY
ಬಾಲ್ಕನಿಯಲ್ಲಿ ಸೌರ ಫಲಕ ಅಳವಡಿಸಿ 100 ಯುನಿಟ್ ವಿದ್ಯುತ್ ಉತ್ಪಾದಿಸಲು ಮೊದಲ ಬಾರಿಗೆ ಪರೀಕ್ಷೆ (ETV Bharat)

By ETV Bharat Karnataka Team

Published : Jul 31, 2024, 4:52 PM IST

ಜೈಪುರ (ರಾಜಸ್ಥಾನ):ಸಾಮಾನ್ಯವಾಗಿ ಮನೆ ಅಥವಾ ಫ್ಲಾಟ್ ಬಾಲ್ಕನಿಯಲ್ಲಿ ಹಚ್ಚ ಹಸಿರಿನ ಗಿಡಗಳು ಕಾಣಸಿಗುತ್ತವೆ. ಆದರೆ, ಈಗ ಬಾಲ್ಕನಿಯಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಿ ವಿದ್ಯುತ್ ಉತ್ಪಾದಿಸಬಹುದು. ವಿಶೇಷವೆಂದರೆ ಈ ಸೋಲಾರ್ ಸಿಸ್ಟಮ್ ಅನ್ನು ಗ್ರಿಡ್‌ಗೆ ಸಂಪರ್ಕಿಸುವ ಅಗತ್ಯವಿಲ್ಲ. ಇದನ್ನು ಮೈಕ್ರೊ ಇನ್ವರ್ಟರ್‌ಗೆ ಜೋಡಿಸಿ, ಸೋಲಾರ್ ಸಿಸ್ಟಮ್‌ನಿಂದ ಉತ್ಪತ್ತಿಯಾಗುವ ವಿದ್ಯುತ್ ಅನ್ನು ನೇರವಾಗಿ ಮನೆಯಲ್ಲಿ ಬಳಸಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಬಾಲ್ಕನಿ ಸೌರ ಫಲಕಗಳನ್ನು ಅಳವಡಿಸುವ ಪ್ರಯೋಗವನ್ನು ಜೈಪುರದಲ್ಲಿ ಮೊದಲ ಬಾರಿಗೆ ಪರೀಕ್ಷಿಸಲಾಯಿತು.

ರಾಜಸ್ಥಾನ ವಿದ್ಯುತ್ ನಿಯಂತ್ರಣ ಆಯೋಗದ (RERC) ಕಟ್ಟಡದಲ್ಲಿ ಬಾಲ್ಕನಿ ಸೋಲಾರ್ ಸಿಸ್ಟಮ್‌ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ರಾಜಸ್ಥಾನವು ಬಾಲ್ಕನಿ ಸೋಲಾರ್ ಸಿಸ್ಟಮ್‌ ಪ್ರಾರಂಭಿಸುತ್ತಿರುವ ಮತ್ತು ಅದನ್ನು ಪರೀಕ್ಷಿಸುವ ದೇಶದ ಮೊದಲ ರಾಜ್ಯವಾಗಿದೆ. ಆರು ತಿಂಗಳ ನಂತರ ಗ್ರಾಹಕರು ಈ ವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ. ಬಾಲ್ಕನಿ ಸೋಲಾರ್ ಸಿಸ್ಟಮ್ ಅನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿ ಪ್ರಾರಂಭಿಸಲಾಗಿದ್ದರೂ, ಸಾಮಾನ್ಯ ಗ್ರಾಹಕರು ತಮ್ಮ ಮನೆ ಅಥವಾ ಫ್ಲಾಟ್‌ನಲ್ಲಿ ಈ ಸೋಲಾರ್ ಸಿಸ್ಟಮ್ ಸ್ಥಾಪಿಸಲು ಇದೀಗ ಕಾಯಬೇಕಾಗಿದೆ. ಇದಕ್ಕಾಗಿ ಇನ್ನೂ ಮಾರ್ಗಸೂಚಿಗಳನ್ನು ಪ್ರಕಟಿಸಬೇಕಾಗಿದ್ದು, ಇದು ಸುಮಾರು ಆರು ತಿಂಗಳುಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಮಾರ್ಗಸೂಚಿಗಳು ಸಿದ್ಧವಾದ ನಂತರವೇ ಸಾಮಾನ್ಯ ಗ್ರಾಹಕರಿಗೆ ಈ ತಂತ್ರಜ್ಞಾನವನ್ನು ಬಳಸಲು ಸಾಧ್ಯವಾಗುತ್ತದೆ.

ಒಂದು ಕಿಲೋವ್ಯಾಟ್ ವ್ಯವಸ್ಥೆಗೆ 50 ಸಾವಿರ ರೂ. ಖರ್ಚು:ಪ್ರಸ್ತುತ ಬಾಲ್ಕನಿ ಸೋಲಾರ್ ಸಿಸ್ಟಮ್ ಅಳವಡಿಸಲು ಸಾಮಾನ್ಯ ಗ್ರಾಹಕರಿಗೆ ಸಬ್ಸಿಡಿ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಇದು ಗ್ರಿಡ್‌ಗೆ ಸಹ ಸಂಪರ್ಕಗೊಳ್ಳುವುದಿಲ್ಲ. ಇದರಿಂದ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಮೈಕ್ರೋ ಇನ್ವರ್ಟರ್ ಮೂಲಕ ನೇರವಾಗಿ ಮನೆಗಳಲ್ಲಿ ಬಳಸಬಹುದು. ಬಾಲ್ಕನಿಯಲ್ಲಿ ಒಂದು ಕಿಲೋ ವ್ಯಾಟ್ ಸೋಲಾರ್ ಸಿಸ್ಟಮ್​ ಅಳವಡಿಸಲು 50 ಸಾವಿರ ರೂ. ಇದರಿಂದ ಪ್ರತಿ ತಿಂಗಳು 100 ಯೂನಿಟ್ ವಿದ್ಯುತ್ ಲಭ್ಯವಾಗಲಿದೆ.

3 ಕೆವಿ ಸಾಮರ್ಥ್ಯದ 75 ಲಕ್ಷ ಗ್ರಾಹಕರು:ರಾಜಸ್ಥಾನ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಬಿ.ಎನ್. ಶರ್ಮಾ ಮಾತನಾಡಿ, ಬಾಲ್ಕನಿ ಸೋಲಾರ್ ಸಿಸ್ಟಮ್ ಅನ್ನು ಔಪಚಾರಿಕವಾಗಿ ಪ್ರಾರಂಭಿಸಲಾಗಿದೆ. ರಾಜಸ್ಥಾನ ಸೋಲಾರ್ ಅಸೋಸಿಯೇಷನ್‌ನ ಅಧ್ಯಕ್ಷ ಸುನಿಲ್ ಬನ್ಸಾಲ್ ಪ್ರಕಾರ, ಸಾಮಾನ್ಯ ಗ್ರಾಹಕರಿಗೆ ಬಾಲ್ಕನಿ ಸೋಲಾರ್​ ಸಿಸ್ಟಮ್​ನ ಸೌಲಭ್ಯ ಪಡೆದುಕೊಳ್ಳಲು ಸುಮಾರು ಆರು ತಿಂಗಳು ಬೇಕಾಗುತ್ತದೆ. ಪ್ರಸ್ತುತ ರಾಜ್ಯದಲ್ಲಿ ಮೂರು ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಸಂಪರ್ಕ ಹೊಂದಿರುವ 75 ಲಕ್ಷ ಗ್ರಾಹಕರಿದ್ದು, ಮುಂದಿನ ಒಂದು ವರ್ಷದಲ್ಲಿ ಅದನ್ನು ಒಂದು ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಸೋಲಾರ್ ಸಿಸ್ಟಮ್ ಅಳವಡಿಸಲು ಒಂದು ಗಂಟೆ ಸಾಕು:ಬಾಲ್ಕನಿ ಸೌರ ವ್ಯವಸ್ಥೆಯು ವಿಶೇಷವಾಗಿ ತಮ್ಮ ಮನೆಗಳಲ್ಲಿ ಸ್ವಂತ ಚಾವಣಿಯನ್ನು ಹೊಂದಿರದ ಜನರಿಗೆ ತುಂಬಾ ಉಪಯುಕ್ತವಾಗಿದೆ. ಅಂದರೆ, ಫ್ಲಾಟ್‌ಗಳಲ್ಲಿ ವಾಸಿಸುವ ಜನರಿಗೆ ಈ ವ್ಯವಸ್ಥೆಯು ಉಪಯುಕ್ತ ಎಂಬುದು ಕೂಡಾ ಸಾಬೀತಾಗಿದೆ. ಇದು ಬಳಸಲು ಸಿದ್ಧವಾಗಿರುವ ಸೋಲಾರ್ ಸಿಸ್ಟಮ್ ಆಗಿದ್ದು, ಈ ವ್ಯವಸ್ಥೆಯನ್ನು ಕೇವಲ ಒಂದು ಗಂಟೆವಳಗೆ ಮಾಡಿ ಮುಗಿಸಬಹುದು. ಸದ್ಯ ಎರಡು ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಸಿಸ್ಟಮ್​ಗಳನ್ನು ಮಾತ್ರ ಮನೆಗಳಲ್ಲಿ ಅಳವಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸೌರಫಲಕದಿಂದ ಮನೆಯ ಗೋಡೆಗಳನ್ನೂ ತಯಾರಿಸಿ, ಅದರ ಮೂಲಕ ಹೆಚ್ಚಿನ ವಿದ್ಯುತ್ ಉತ್ಪಾದಿಸಬಹುದಾಗಿದೆ.

ಇದನ್ನೂ ಓದಿ:ಕಸ್ಟಮರ್​ ಕೇರ್​ ಕಾಲ್​ ಹೋಲ್ಡ್​ನಿಂದ ಭಾರತೀಯರ 15 ಬಿಲಿಯನ್ ಗಂಟೆಗಳಷ್ಟು ಸಮಯ ಹಾಳು - Calls On Hold

ABOUT THE AUTHOR

...view details