ಕರ್ನಾಟಕ

karnataka

ETV Bharat / bharat

ಒಂದು ಲಕ್ಷಕ್ಕೂ ಹೆಚ್ಚು ಗಣಪತಿ ವಿಗ್ರಹಗಳ ನಿಮಜ್ಜನ: ಮುತ್ತಿನ ನಗರಿಯಲ್ಲಿ ಶೋಭಾಯಾತ್ರೆ ಸಂಭ್ರಮ - Ganesha Idols Immersion

ಭಾಗ್ಯನಗರಿ ಹೈದರಾಬಾದ್‌ನಲ್ಲಿ ಗಣೇಶ ನಿಮಜ್ಜನ ಶೋಭಾಯಾತ್ರೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ವಿಶೇಷವಾಗಿ, ಟ್ಯಾಂಕ್ ಬಂಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆಯಾಗಿದೆ. 25 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.

KHAIRATABAD GANESH UPDATES  GANESH IMMERSION 2024  VINAYAKA IDOLS IMMERSION
ಮುತ್ತಿನನಗರದಲ್ಲಿ ಲಂಬೋದರನ ನಿಮಜ್ಜನ ಶೋಭಾಯಾತ್ರೆ ಆರಂಭ (ETV Bharat)

By ETV Bharat Karnataka Team

Published : Sep 17, 2024, 11:25 AM IST

Updated : Sep 17, 2024, 11:54 AM IST

ಹೈದರಾಬಾದ್: ವರ್ಷವಿಡೀ ಭಕ್ತರು ಕಾತರದಿಂದ ಎದುರು ನೋಡುವ ವಿನಾಯಕನ ಭವ್ಯ ಶೋಭಾಯಾತ್ರೆ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. 9 ದಿನಗಳಿಂದ ಪೂಜಿಸಲ್ಪಟ್ಟ ಲಂಬೋದರ ಮೂರ್ತಿಗಳು ಇಂದು ಬೆಳಗ್ಗೆಯಿಂದಲೇ ಗಂಗೆಯ ದಡಕ್ಕೆ ತೆರಳಲುತ್ತಿವೆ. ಇದಕ್ಕಾಗಿ ಸಂಬಂಧಿತ ಎಲ್ಲ ವ್ಯವಸ್ಥೆಗಳನ್ನು ಆಯಾ ಸರ್ಕಾರಿ ಇಲಾಖೆಗಳು ಈಗಾಗಲೇ ಪೂರ್ಣಗೊಳಿಸಿವೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಗಣಪತಿ ಮಂಟಪಗಳು ಹೆಚ್ಚಿದ್ದವು. ಹುಸೇನ್‌ಸಾಗರಕ್ಕೆ ಸುಮಾರು ಒಂದು ಲಕ್ಷ ವಿಗ್ರಹಗಳು ಆಗಮಿಸಲಿವೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಗುರುವಾರದವರೆಗೂ ನಿಮಜ್ಜನ ಕಾರ್ಯ ನಡೆಯುವ ಸಾಧ್ಯತೆ ಇದೆ.

ಗಣೇಶ ಮೂರ್ತಿಗಳ ಆಕರ್ಷಕ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಐದು ಲಕ್ಷಕ್ಕೂ ಹೆಚ್ಚು ಭಕ್ತರು ಹುಸೇನ್‌ಸಾಗರ ಪ್ರದೇಶಕ್ಕೆ ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಸೋಮವಾರ ಇಡೀ ಸರಕಾರಿ ಯಂತ್ರವೇ ಕ್ಷೇತ್ರ ಮಟ್ಟದ ಪರಿಶೀಲನೆಗೆ ತೆರಳಿತ್ತು. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಬಂಜಾರಹಿಲ್ಸ್‌ನಲ್ಲಿರುವ ಕಮಾಂಡ್ ಕಂಟ್ರೋಲ್ ಸೆಂಟರ್‌ಗೆ ಭೇಟಿ ನೀಡಿ ಶೋಭಾಯಾತ್ರೆಯ ಮಾರ್ಗಗಳು, ಉಪಸ್ಥಿತರಿರುವ ಭಕ್ತರು ಮತ್ತು ಇತರ ಸಮಸ್ಯೆಗಳನ್ನು ಪರಿಶೀಲಿಸಿದರು.

ಹೈದರಾಬಾದ್ ಜಿಲ್ಲಾ ಉಸ್ತುವಾರಿ ಸಚಿವ ಪೊನ್ನಂ ಪ್ರಭಾಕರ್ ಅವರು ಮೇಯರ್ ಗದ್ವಾಲ್ ವಿಜಯಲಕ್ಷ್ಮಿ ಮತ್ತು ಜಿಎಚ್‌ಎಂಸಿ ಆಯುಕ್ತ ಆಮ್ರಪಾಲಿ ಸಾಗರ್ ಅವರೊಂದಿಗೆ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಖೈರತಾಬಾದ್ ಗಣಪತಿಯನ್ನು ಎನ್‌ಟಿಆರ್‌ ಮಾರ್ಗದಲ್ಲಿ ಮತ್ತು ಬಾಲಾಪುರ್ ಗಣಪತಿಯನ್ನು ಟ್ಯಾಂಕ್‌ಬಂಡ್‌ನಲ್ಲಿ ನಿಮಜ್ಜನ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದಾದ್ಯಂತ 73 ಸ್ಥಳಗಳಲ್ಲಿ ನಿಮಜ್ಜನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಕೇಂದ್ರಗಳಲ್ಲಿ 10 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಎಂದು ಬಲ್ದಿಯಾ ಆಯುಕ್ತರಾದ ಆಮ್ರಪಾಲಿ ತಿಳಿಸಿದ್ದಾರೆ. ಗಣೇಶ ಆ್ಯಕ್ಷನ್​ ಟೀಂ (ಜಿಎಟಿ) ರಚಿಸಲಾಗಿದ್ದು, ಹೆಚ್ಚುವರಿ ಕಾರ್ಯಕರ್ತರನ್ನು ನಿಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.

ಭಕ್ತರಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ: ನಿಮಜ್ಜನಕ್ಕೆ ಬರುವ ಭಕ್ತರ ದಾಹ ನೀಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಲಮಂಡಳಿ ಎಂಡಿ ಅಶೋಕ್ ರೆಡ್ಡಿ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗಣಪತಿ ನಿಮಜ್ಜನಕ್ಕೆ 122 ಕುಡಿಯುವ ನೀರಿನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 35 ಲಕ್ಷ ನೀರಿನ ಪ್ಯಾಕೆಟ್‌ಗಳು ಲಭ್ಯವಾಗುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

16 ಸಾವಿರ ಫ್ಲಡ್‌ಲೈಟ್‌:ನಗರದಲ್ಲಿ ಸುಮಾರು 16 ಸಾವಿರ ಫ್ಲಡ್‌ಲೈಟ್‌ಗಳು, 130 ಡೀಸೆಲ್ ಹಾಗೂ 80 ಮೊಬೈಲ್ ಜನರೇಟರ್‌ಗಳನ್ನು ಅಳವಡಿಸಲಾಗಿದೆ ಎಂದು ರಸ್ತೆ ಮತ್ತು ಕಟ್ಟಡಗಳ ಇಲಾಖೆ ಮುಖ್ಯ ಎಂಜಿನಿಯರ್ ವೈ.ಲಿಂಗಾರೆಡ್ಡಿ ತಿಳಿಸಿದರು. ರಾಜ್ಯ ಸಚಿವರಾದ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಮತ್ತು ಪೊನ್ನಂ ಪ್ರಭಾಕರ್ ಅವರ ಆದೇಶದಂತೆ ನಗರದ 32 ಕೆರೆಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ನಿಮಜ್ಜನದ ಸಮಯದಲ್ಲಿ ಭಕ್ತರು ವಿದ್ಯುತ್ ಕಂಬಗಳು ಮತ್ತು ಲೈಟಿಂಗ್ ಟವರ್‌ಗಳನ್ನು ಹತ್ತದಂತೆ ಸೂಚಿಸಲಾಗಿದೆ ಎಂದರು.

ಖೈರತಾಬಾದ್​ ಗಣಪತಿ ನಿಮಜ್ಜನ:ಖೈರತಾಬಾದ್​ನ ಏಳು ಮುಖದ ಗಣಪತಿ ಗಂಗಮ್ಮನ ಮಡಿಲು ಸೇರಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಸೋಮವಾರ ಸಂಜೆ ವಿಶೇಷ ಪೂಜೆ ನೆರವೇರಿಸಲಾಯಿತು. ಉತ್ಸವ ಸಮಿತಿಯ ಪ್ರತಿನಿಧಿ ಮಹೇಶ್ ಯಾದವ್ ಮಾತನಾಡಿ, ಸಕಾಲದಲ್ಲಿ ನಿಮಜ್ಜನ ಪೂರ್ಣಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಳಗ್ಗೆ 6 ಗಂಟೆಗೆ ಶೋಭಾಯಾತ್ರೆ ಆರಂಭವಾಗಲಿದೆ. ಮಧ್ಯಾಹ್ನ 2 ಗಂಟೆಗೆ ನಿಮಜ್ಜನ ಪೂರ್ಣಗೊಳ್ಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಮಧ್ಯರಾತ್ರಿಯಿಂದಲೇ ದರ್ಶನ ಸ್ಥಗಿತಗೊಂಡಿದ್ದರೂ ಸೋಮವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಲೈವ್ Karnataka News - Karnataka Today Live : ಕರ್ನಾಟಕ ವಾರ್ತೆ Tue Sep 17 2024 ಇತ್ತೀಚಿನ ಸುದ್ದಿ

Last Updated : Sep 17, 2024, 11:54 AM IST

ABOUT THE AUTHOR

...view details