ಗಾಂಧಿನಗರ:ಗಾಂಧಿನಗರ ಬಿಜೆಪಿ ಅಭ್ಯರ್ಥಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರಿ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೋನಲ್ ರಮನ್ಭಾಯ್ ಪಟೇಲ್ ವಿರುದ್ಧ 3.4 ಲಕ್ಷ ಮತಗಳಿಂದ ಬಿಜೆಪಿ ಚಾಣಕ್ಯ ಜಯಭೇರಿಸಿ ಬಾರಿಸಿದ್ದಾರೆ.
ಅಮಿತ್ ಶಾ 4,73,348 ಮತ ಗಳಿಸಿದರೆ, ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋನಲ್ ರಮನ್ಭಾಯ್ ಪಟೇಲ್ 1,01,887 ಮತ ಪಡೆದರು. ಗಾಂಧಿನಗರದಿಂದ ಸತತವಾಗಿ ಎರಡನೇ ಬಾರಿ ಸ್ಪರ್ಧಿಸಿದ್ದ ಅಮಿತ್ ಶಾ ಅನಾಯಾಸವಾಗಿ ಗೆಲುವು ದಾಖಲಿಸಿದ್ದಾರೆ.
ವಾಜಪೇಯಿ, ಅಡ್ವಾಣಿ ಕ್ಷೇತ್ರ: 1989 ರಿಂದ ಗಾಂಧಿನಗರ ಬಿಜೆಪಿ ಕೋಟೆಯಾಗಿದೆ. ಈ ಮೊದಲು ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅಡ್ವಾಣಿ ಅವರು ಈ ಕ್ಷೇತ್ರದಿಂದ 6 ಬಾರಿ ಗೆದ್ದಿದ್ದರು. 2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃತಿಭಾಯ್ ಪಟೇಲ್ ಅವರನ್ನು ಅಡ್ವಾಣಿ ಅವರು 4.83 ಮತಗಳ ಅಂತರದಿಂದ ಸೋಲಿಸಿದ್ದರು. 2019ರಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದ ಬಳಿಕ ಮೊದಲ ಬಾರಿಗೆ ಗಾಂಧಿನಗರದಿಂದ ಅಮಿತ್ ಶಾ ಕಣಕ್ಕೆ ಇಳಿದಿದ್ದರು. 2019ರಲ್ಲಿ ಅಮಿತ್ ಶಾ ದಾಖಲೆಯ 5.57 ಲಕ್ಷ ಮತಗಳಿಂದ ಗೆಲುವಿನ ಹಾರ ಕೊರಳೇರಿಸಿಕೊಂಡಿದ್ದರು.