ಬಕ್ಸರ್(ಬಿಹಾರ):ಗುಡ್ಡ ಕುಸಿದು ಇಬ್ಬರು ಸಹೋದರಿಯರು ಸೇರಿದಂತೆ ನಾಲ್ವರು ಹುಡುಗಿಯರು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಸಂಭವಿಸಿತು.
ರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸರೇಂಜ ಗ್ರಾಮದಲ್ಲಿ ಆರು ಹುಡುಗಿಯರು ಮಣ್ಣಿನ ಒಲೆ ನಿರ್ಮಿಸಲು ಮಣ್ಣು ಅಗೆಯುತ್ತಿದ್ದಾಗ ಘಟನೆ ನಡೆದಿದೆ. ಮೃತರನ್ನು ಶಿವಾನಿ ಕುಮಾರಿ (6), ಸಂಜು ಕುಮಾರಿ (11), ನೈಂತರಾ ಕುಮಾರಿ (12) ಮತ್ತು ಸರಿತಾ ಕುಮಾರಿ (11) ಎಂದು ಗುರುತಿಸಲಾಗಿದೆ.