ಗೋರಖ್ಪುರ(ಉತ್ತರ ಪ್ರದೇಶ): ಇಲ್ಲಿನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ಬಿ.ಟೆಕ್ ವಿದ್ಯಾರ್ಥಿನಿಯರು ಮಹಿಳೆಯರ ಸುರಕ್ಷತೆಗೆ ವಿಶೇಷ ಕಿವಿಯೋಲೆಯನ್ನು ವಿನ್ಯಾಸಗೊಳಿಸಿದ್ದಾರೆ. ಮೊದಲ ವರ್ಷದ ಬಿಟೆಕ್ ಎಐ ವಿಭಾಗದ ವಿದ್ಯಾರ್ಥಿನಿರಾದ ಅಫ್ರೀನ್ ಖತೂನ್, ಉಮ್ಮೆ ಹಬೀಬಾ, ರಿಯಾ ಸಿಂಗ್ ಮತ್ತು ಫಯಾ ನೂರಿ ಅವರು ಇನ್ನೋವೇಶನ್ ಸೆಲ್ ಸಂಯೋಜಕ ವಿನೀತ್ ರೈ ನೇತೃತ್ವದಲ್ಲಿ, ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬ್ಲೂಟೂತ್ ಕಿವಿಯೋಲೆಯನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ಮಹಿಳೆಯರು ಬ್ಲೂಟೂತ್ ಇಯರ್ ಬಡ್ ಆಗಿ ಮತ್ತು ತುರ್ತು ಸಂದರ್ಭದಲ್ಲಿ ತಮ್ಮ ರಕ್ಷಣೆಗಾಗಿ ಬಳಸಬಹುದು.
ಸುಂದರವಾಗಿ ಕಾಣಲು ಮಹಿಳೆಯರು ಮೇಕಪ್ ಮತ್ತು ಆಭರಣಗಳನ್ನು ಹೆಚ್ಚಾಗಿ ಬಳಸುತ್ತಾರೆ. ಹೀಗಾಗಿ ಈ ಕಿವಿಯೋಲೆಯನ್ನು ಬಳಸುತ್ತಾರೆ, ಇದು ತುರ್ತು ಸಂದರ್ಭದಲ್ಲಿ ಮಹಿಳೆಯರನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಎರಡು ವಾರಗಳ ಕಠಿಣ ಪರಿಶ್ರಮದಿಂದ ಈ ವಿಶಿಷ್ಟ ಕಿವಿಯೋಲೆಯನ್ನು ವಿದ್ಯಾರ್ಥಿನಿಯರು ಸಿದ್ಧಪಡಿಸಿದ್ದಾರೆ. ಈ ಕಿವಿಯೋಲೆ ಮೊಬೈಲ್ ಬ್ಲೂಟೂತ್ನೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ಪೊಲೀಸರು, ಕುಟುಂಬಸ್ಥರಿಗೆ ತುರ್ತು ಕರೆಗಳು ಹಾಗೂ ಸ್ಥಳವನ್ನು ಕಳುಹಿಸುತ್ತದೆ. ಸಂಕಷ್ಟದ ಸಮಯದಲ್ಲಿ ಇದು ಜುಮ್ಕಾ ಗನ್ ಆಗಿಯೂ ಕೆಲಸ ಮಾಡುತ್ತದೆ. ಅಗತ್ಯ ಇದ್ದರೆ, ದುಷ್ಕರ್ಮಿಗಳ ಮೇಲೆ ಕಿವಿಯೋಲೆ ಮೂಲಕ ರೆಡ್ ಚಿಲ್ಲಿ ಬುಲೆಟ್ಗಳನ್ನು ಸಹ ಹಾರಿಸಬಹುದು. ಈ ಕಿವಿಯೋಲೆಯ ಸಹಾಯದಿಂದ, ಮಹಿಳೆಯರ ಮೇಲಿನ ಕಿರುಕುಳವನ್ನು ಕಡಿಮೆ ಮಾಡಬಹುದಾಗಿದೆ ಎನ್ನುತ್ತಾರೆ ವಿದ್ಯಾರ್ಥಿನಿಯರು.