ನಾಸಿಕ್ (ಮಹಾರಾಷ್ಟ್ರ) :ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್. ಡಿ. ರೇವಣ್ಣ ಅವರು ಸೇರಿ ಇತರ ಕುಟುಂಬ ಸದಸ್ಯರು ಮಹಾರಾಷ್ಟ್ರದ ನಾಸಿಕ್‌ನ ಪಂಚವಟಿಯಲ್ಲಿರುವ ಕಾಲಾರಾಮ್ ದೇವಸ್ಥಾನ ಮತ್ತು ತ್ರಯಂಬಕೇಶ್ವರದ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.
ದೇವೇಗೌಡರು ತಮ್ಮ ಪುತ್ರ ಕೇಂದ್ರ ಸಚಿವರಾದ ನಂತರ ಶ್ರೀರಾಮನ ದರ್ಶನ ಮಾಡುವುದಾಗಿ ಹರಕೆ ಹೊತ್ತುಕೊಂಡಿದ್ದರು. ಅದರಂತೆ ದೇವೇಗೌಡ ಕುಟುಂಬಸ್ಥರು ಇಂದು ಶನಿವಾರ ಭೇಟಿ ನೀಡಿದ್ದರು. ಈ ವೇಳೆ ಮಹಾಂತ ಸುಧೀರದಾಸ್ ಪೂಜಾರಿ ಸಂಕಲ್ಪ ಪೂಜೆ ನೆರವೇರಿಸಿದರು.