ಬೂಂದಿ, ರಾಜಸ್ಥಾನ: ಭಾರತದ ಜನಪದ ಸಂಸ್ಕೃತಿ ಹಾಗೂ ಭವ್ಯ ಇತಿಹಾಸದಿಂದ ಪ್ರಭಾವಿತರಾದ ವಿದೇಶಿ ಜೋಡಿ ಆಟೋದಲ್ಲಿ ಭಾರತದಾದ್ಯಂತ ಸಂಚರಿಸುತ್ತಿದೆ. ಇಂತಹದೊಂದು ತೀರ್ಮಾನ ಕೈಗೊಂಡಿರುವ ಜೋಡಿ ಎಂದರೆ ಅದು, ಇಟಲಿಯ ಆಡಮ್ ಮತ್ತು ಜೈನಿ. ಈ ಇಬ್ಬರೂ ಭಾರತೀಯ ಸಂಸ್ಕೃತಿಗೆ ಮಾರು ಹೋಗಿದ್ದಾರೆ.
ಭಾರತದ ಸಂಸ್ಕೃತಿ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಇವರು ಐದನೇ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ಬಾರಿ ಇಬ್ಬರೂ ವಿಶಿಷ್ಟ ರೀತಿಯಲ್ಲಿ ಪ್ರಯಾಣ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ಚೆನ್ನೈನ ಚೆಂಗಲ್ಪಟ್ಟದಿಂದ ಆಟೋವೊಂದನ್ನು ಖರೀದಿಸಿದ್ದಾರೆ. ಆಟೋವನ್ನು ಮಾಡಿಫೈ ಮಾಡಿಸಿರುವ ಇವರು ದೇಶಾದ್ಯಂತ ಪ್ರವಾಸ ಹೊರಟಿದ್ದಾರೆ.
ಈಗಾಗಲೇ ಆರು ಸಾವಿರ ಕಿಮೀ ಪ್ರಯಾಣ ಪೂರ್ಣಗೊಳಿಸಿರುವ ಜೋಡಿ:ಪ್ರಯಾಣದ ಸಮಯದಲ್ಲಿ ಮಾತನಾಡಿದ ಇಟಲಿ ಪ್ರವಾಸಿ ಆಡಮ್, ತಮಿಳುನಾಡಿನಿಂದ ಈ ಯಾನ ಆರಂಭಿಸಿದ್ದೇವೆ. ಅಂತಿಮವಾಗಿ ಇಲ್ಲಿಗೆ ವಾಪಸ್ ಬರುತ್ತೇವೆ ಎಂದು ಹೇಳಿದರು. ಚೆನ್ನೈನಿಂದ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್ ಮೂಲಕ 6000 ಕಿಲೋಮೀಟರ್ ಪ್ರಯಾಣಿಸಿ, ಈ ಜೋಡಿಯೀಗ ರಾಜಸ್ಥಾನದ ಬೂಂದಿ ತಲುಪಿದೆ. ಆಯಾಯ ರಾಜ್ಯಕ್ಕೆ ಹೋದಾಗ ಅಲ್ಲಿನ ಸಂಸ್ಕೃತಿ, ಜನಪದದ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ. ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದಾಗ ಅಲ್ಲಿನ ಆಹಾರ, ಜೀವನಶೈಲಿ, ಬಟ್ಟೆಬರೆ ಬಗ್ಗೆ ಹತ್ತಿರದಿಂದ ನೋಡಿ, ಕೇಳಿ, ಆಶ್ವಾಸಿದ್ದೇವೆ ಅಂತಾರೆ ಆಡಮ್ ಮತ್ತು ಜೆನ್ನಿ.
ರಾಣಿಜಿ ಮೆಟ್ಟಿಲು ಬಾವಿ ಕಂಡು ಅಚ್ಚರಿ:ರಾಣಿಜಿಯವರ ಮೆಟ್ಟಿಲುಗಳ ಬಾವಿ, ಗಢ ಅರಮನೆ ನೋಡಿದ ಈ ವಿದೇಶಿ ಅಲ್ಲಿನ ಸೌಂದರ್ಯ, ಶಿಲ್ಪಕಲೆ, ಎಂಜಿನಿಯರಿಂಗ್ ಕಂಡು ಬೆರಗಾದರು. ಆಟೋದಲ್ಲಿ ಭಾರತದ ಭವ್ಯ ದರ್ಶನ ಮಾಡುತ್ತಿರುವ ಇವರು, ರಾಣಿಜಿಯ ಸ್ಟೆಪ್‌ವೆಲ್, ಗಢ್ ಅರಮನೆ ಮತ್ತು ಚಿತ್ರಶಾಲಾದ ವೈಭವವನ್ನು ಕಣ್ತುಂಬಿಕೊಂಡರು.
ಭಾರತ ಪ್ರವಾಸಕ್ಕಾಗಿ 60 ತಿಂಗಳ ಪ್ರವಾಸಿ ವೀಸಾ:ಭಾರತೀಯ ಸಂಸ್ಕೃತಿಯನ್ನು ಹತ್ತಿರದಿಂದ ತಿಳಿದುಕೊಳ್ಳುವ ಉದ್ದೇಶದಿಂದ ಭಾರತಕ್ಕೆ ಆಗಮಿಸಿದ್ದಾಗಿ ಆಡಮ್ ಹೇಳಿದರು. ಭಾರತದ ಸಂಪೂರ್ಣ ಅಧ್ಯಯನಕ್ಕಾಗಿ ಇವರು 60 ತಿಂಗಳ ಅಂದರೆ ಐದುವರ್ಷದ ಪ್ರವಾಸಿ ವೀಸಾ ತೆಗೆದುಕೊಂಡಿದ್ದಾರೆ. 6 ತಿಂಗಳ ಕಾಲ ಭಾರತದಲ್ಲಿ ಪ್ರವಾಸ ಮಾಡಿರುವ ಈ ಜೋಡಿ ಇಟಲಿಗೆ ಹೋಗಿ ಒಂದು ವರ್ಷದ ನಂತರ ಭಾರತಕ್ಕೆ ಹಿಂತಿರುಗುತ್ತಾರೆ. ಭಾರತದಲ್ಲಿ ಸುಮಾರು 10 ಸಾವಿರ ಕಿಲೋಮೀಟರ್ ಆಟೋದಲ್ಲೇ ಪ್ರಯಾಣ ಮಾಡಿ ಪ್ರತ್ಯೇಕ್ಷವಾಗಿ ಎಲ್ಲವನ್ನೂ ತಿಳಿದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ವೈವಿಧ್ಯತೆಯಲ್ಲಿ ಏಕತೆಗೆ ಜೋಡಿ ದಿಲ್ ಖುಷ್: ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಇದು ಆಸಕ್ತಿದಾಯವಾಗಿದೆ ಅಂತಾರೆ ಜೈನಿ. ವೈವಿಧ್ಯಮಯ ಭಾಷೆ, ಸಂಸ್ಕೃತಿ, ಆಚಾರ - ವಿಚಾರಗಳು, ಪ್ರದೇಶದಿಂದ ಪ್ರದೇಶಕ್ಕೆ ಇರುವ ಮಹತ್ವ ಹೀಗೆ ಇಲ್ಲಿ ಎಲ್ಲವೂ ಒಂದಕ್ಕಿಂತ ಒಂದು ಚಂದ ಅಂತಾರೆ ಅವರು. ಭಾರತದಲ್ಲಿ ವಿವಿಧತೆಯಲ್ಲಿ ಏಕತೆ ಕಾಣುತ್ತಿದೆ. ಇದೇ ಕಾರಣಕ್ಕೆ ನಾವು ಪ್ರತಿ ವರ್ಷ ಭಾರತಕ್ಕೆ ಬರಲು ಯೋಜಿಸಿದ್ದೇವೆ ಅಂತಾರೆ ಜೈನಿ.