ಕರ್ನಾಟಕ

karnataka

ETV Bharat / bharat

ಮದುವೆ ಮನೆಯಲ್ಲಿ ಭಾರಿ ಅಗ್ನಿ ಅನಾಹುತ: ಆರು ಮಂದಿ ಸಜೀವ ದಹನ - Fire broke out in Darbhanga Bihar - FIRE BROKE OUT IN DARBHANGA BIHAR

ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ಈಗ ಅಗ್ನಿ ಅನಾಹುತದಿಂದ ಸೂತಕದ ಛಾಯೆ ಆವರಿಸಿದ್ದು, ಜನರ ಆಕ್ರಂದನ ಮುಗಿಲು ಮುಟ್ಟಿದೆ.

fire-broke-out-due-to-fireworks-at-wedding-ceremony-in-darbhanga-bihar-many-people-died
fire-broke-out-due-to-fireworks-at-wedding-ceremony-in-darbhanga-bihar-many-people-died

By ETV Bharat Karnataka Team

Published : Apr 26, 2024, 12:23 PM IST

ದರ್ಬಾಂಗ್​ (ಬಿಹಾರ): ಬೆಂಕಿ ಅನಾಹುತದಿಂದ ಮದುವೆ ಮನೆ ಅಕ್ಷರಶಃ ಶೋಕದ ಮನೆಯಾಗಿ ಮಾರ್ಪಟ್ಟಿರುವ ಘಟನೆ ನಡೆದಿದೆ. ಮದುವೆ ಮೆರವಣಿಗೆ ಸಂಭ್ರಮದಲ್ಲಿ ಹಚ್ಚಿದ್ದ ಪಟಾಕಿ ಕಿಡಿಯಿಂದ ಆದ ಅಗ್ನಿ ಅನಾಹುತದಲ್ಲಿ ಮೂರು ಜಾನುವಾರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ದರ್ಬಾಂಗ್​​ನಲ್ಲಿ ನಡೆದಿದೆ. ಗುರುವಾರ ರಾತ್ರಿ ಮದುವೆ ಮೆರವಣಿಗೆ ಹಿನ್ನೆಲೆ ಸಂಭ್ರಮದಿಂದ ಪಟಾಕಿ ಹೊಡೆಯಲಾಗಿದ್ದು, ಈ ಬೆಂಕಿ ಕಿಡಿ ಸಿಲಿಂಡರ್​ ಮತ್ತು ಡೀಸೆಲ್​ ಸಂಗ್ರಹಕ್ಕೆ ಬಿದ್ದ ಪರಿಣಾಮ ಈ ಭಾರಿ ಅನಾಹುತ ಸಂಭವಿಸಿದೆ. ಘಟನೆ ಬೆಳಕಿಗೆ ಬಂದಾಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಗ್ನಿ ಶಾಮಕದಳ ಕೂಡ ಬೆಂಕಿ ಆರಿಸುವ ಯತ್ನದಲ್ಲಿ ನಿರತರವಾಯಿತು.

ಮದುವೆ ಮನೆಯಲ್ಲಿ ಭಾರೀ ಅಗ್ನಿ ಅನಾಹುತ

ಘಟನೆ ಸಂಭವಿಸಿದ್ದು ಹೇಗೆ:ಬಹೇರಾ ಪೊಲೀಸ್ ಠಾಣೆಯ ಅಂತೋರ್ ಗ್ರಾಮದಲ್ಲಿ ಛಗನ್ ಪಾಸ್ವಾನ್ ಅವರ ಮಗಳ ಮದುವೆ ಸಮಾರಂಭ ಅದ್ದೂರಿಯಾಗಿ ಏರ್ಪಡಿಸಲಾಗಿತ್ತು. ಸಮಾರಂಭದ ಹಿನ್ನೆಲೆ ಮನೆಯ ಪಕ್ಕದಲ್ಲಿ ಅತಿಥಿಗಳು ತಂಗಲು ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು. ಗುರುವಾರ ರಾತ್ರಿ ಮದುವೆ ದಿಬ್ಬಣ ಬಂದಿದ್ದು, ಅದ್ದೂರಿಯಾಗಿ ಸಂಭ್ರಮಾಚರಣೆ ಸಾಗಿತ್ತು. ಈ ವೇಳೆ ಪಟಾಕಿ ಹೊಡೆಯಾಗಿದ್ದು, ಇದರ ಕಿಡಿ ಹಾಕಿದ್ದ ಶಾಮೀಯಾನದ ಮೇಲೆ ಬಿದ್ದ ಪರಿಣಾಮ ಇಡೀ ಟೆಂಟ್​​ ಹೊತ್ತಿ ಉರಿದಿದೆ. ಈ ವೇಳೆ ಅಲ್ಲಿಯೇ ಇದ್ದ ಸಿಲಿಂಡರ್​ ಮತ್ತು ಡೀಸೆಲ್​ ಸಂಗ್ರಹಕ್ಕೂ ಕಿಡಿ ತಗುಲಿದ್ದು, ಭಾರೀ ಅನಾಹುತ ಸಂಭವಿಸಿತು. ಘಟನೆಯಲ್ಲಿ ಒಂದೇ ಕುಟುಂಬದ 6 ಮಂದಿ ಸಜೀವ ದಹನ ಆಗಿದ್ದಾರೆ.

ದುರ್ಘಟನೆ ತಿಳಿದಾಕ್ಷಣ ಗ್ರಾಮಸ್ಥರು ಆಗಮಿಸಿ ಬೆಂಕಿ ನಿಯಂತ್ರಿಸಲು ಹರಸಾಹಸ ಮಾಡಿದರು. ಆದರೆ, ಸಿಲಿಂಡರ್​ ಮತ್ತು ಡೀಸೆಲ್​ಗೆ ಕಿಡಿ ತಗುಲಿದ ಹಿನ್ನಲೆ ಬೆಂಕಿ ಕೆನ್ನಾಲಿಗೆ ಚಾಚಿತು. ಇದರಿಂದ ಮೂರು ಜಾನುವಾರು ಸೇರಿದಂತೆ 6 ಮಂದಿ ಒಂದೇ ಕುಟುಂಬಸ್ಥರು ರಕ್ಷಿಸುವ ಯತ್ನವೂ ವಿಫಲವಾಯಿತು.

ತನಿಖೆಗೆ ಮುಂದಾದ ತಂಡ: ಘಟನೆ ಮಾಹಿತಿ ತಿಳಿದ ಜಿಲ್ಲಾ ಮ್ಯಾಜಿಸ್ಟ್ರೇಟರ್​​ ರಾಜೀವ್​ ರೋಶನ್​ ದರ್ಬಾಂಗ್​​ಗೆ ತನಿಖಾ ತಂಡವನ್ನು ಕಳುಹಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ನೆರವು ನೀಡಲಾಗುತ್ತಿದೆ . ಬೆಂಕಿ ಅವಘಡದಲ್ಲಿ 6 ಮಂದಿ ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಮೂರು ಜಾನುವಾರುಗಳೂ ಪ್ರಾಣ ಕಳೆದುಕೊಂಡಿವೆ. ಘಟನೆಯ ಕುರಿತು ತನಿಖೆಗೆ ತಂಡವನ್ನು ಕಳುಹಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದರು.

ಇದನ್ನೂ ಓದಿ:ಪಾಟ್ನಾದ ಹೋಟೆಲ್‌ನಲ್ಲಿ ಭೀಕರ ಬೆಂಕಿ ಅವಘಡ; 6 ಮಂದಿ ಸಾವು

ABOUT THE AUTHOR

...view details