ಚಾಮರಾಜನಗರ: ಬಾಗಿಲಿನ ಮೇಲೆ ನೆರೆಮನೆಯವರ ಹೆಸರು ಬರೆದಿಟ್ಟು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ಚೆನ್ನಮಲ್ಲಿಪುರ ಗ್ರಾಮದಲ್ಲಿ ನಡೆದಿದೆ.
ಚೆನ್ನಮಲ್ಲಿಪುರ ಗ್ರಾಮದ ಕವನಾ (24) ಮೃತ ಯುವತಿ. ಮನೆಯಲ್ಲಿದ್ದ ವೇಳೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ ಎಂದು ಆಕೆಯ ತಾಯಿ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೂ ಮುನ್ನ ತನ್ನ ಸಹೋದರಿಗೆ ಮಾಡಿದ್ದ ಫೋನ್ ಕಾಲ್ನಿಂದ ಆಕೆ ಅಸ್ವಸ್ಥಗೊಂಡಿದ್ದು ತಿಳಿಯತೆಂದು ಯುವತಿಯ ತಾಯಿ ಹೇಳಿದ್ದಾರೆ.
ಮೆಸೇಜ್ ಮಾಡದಿದ್ದರೂ ನೆರೆಮನೆಯವರ ಅಪಮಾನ ಆರೋಪ: ನೆರೆಮನೆಯ ಯುವತಿಗೆ ಯುವಕನೊಬ್ಬ ಮಾಡಿದ್ದ ಮೆಸೇಜ್ಗಳ ವಿಚಾರವಾಗಿ ಸಂಬಂಧವಿಲ್ಲದಿದ್ದರೂ ನನ್ನ ಮಗಳಿಗೆ ಅಪಮಾನ ಮಾಡಿದ್ದರಿಂದ ಮಾನಸಿಕವಾಗಿ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮೃತಳ ತಾಯಿ ದೂರು ಕೊಟ್ಟಿದ್ದಾರೆ.
"ತನ್ನ ಮಗಳು ಡೆತ್ನೋಟ್ ಮತ್ತು ಮನೆಯ ಬಾಗಿಲಿನ ಮೇಲೂ ತನ್ನ ಸಾವಿಗೆ ಕಾರಣರಾದ ನಾಲ್ವರು ನೆರೆಯವರ ಹೆಸರು ಬರೆದಿದ್ದಾಳೆ. ಮಾನಸಿಕ ಕಿರುಕುಳ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ" ಮೃತಳ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
"ಘಟನೆ ಸಂಬಂಧ ಗುಂಡ್ಲುಪೇಟೆ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಯುವತಿ ಆತ್ಮಹತ್ಯೆಗೂ ಮುನ್ನ ತನ್ನ ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ತನಗೆ ಅಪಮಾನ ಆಗಿದೆ, ತಾನು ಮೆಸೇಜ್ ಮಾಡಿಲ್ಲ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆಂದು ಮೃತಳ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹ: ಪತ್ನಿ ಮನೆ ಮುಂದೆ ಪತಿ ಆತ್ಮಹತ್ಯೆ