ಫತೇಪುರ್, ಉತ್ತರಪ್ರದೇಶ: ಜಿಲ್ಲೆಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಸೊಸೆಯ ಮೇಲೆ ಮಾವ ಕಣ್ಣಿಟ್ಟಿದ್ದಾನೆ. ಆಕೆಯನ್ನು ಒಲಿಸಿಕೊಳ್ಳಲು ಯತ್ನಿಸಿದ್ದಾನೆ. ಆದ್ರೆ ಸೊಸೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕೋಪಗೊಂಡ ಮಾವ ತಮ್ಮ ಸೊಸೆ ಸ್ನಾನ ಮಾಡುವಾಗ ರಹಸ್ಯವಾಗಿ ಅಶ್ಲೀಲ ವಿಡಿಯೋ ಮಾಡಿದ್ದಾನೆ. ಬಳಿಕ ಆ ವಿಡಿಯೋ ಇಟ್ಟುಕೊಂಡು ಬೆದರಿಕೆ ಹಾಕಲು ಶುರು ಮಾಡಿದ್ದಾನೆ. ವಿದೇಶದಲ್ಲಿ ನೆಲೆಸಿರುವ ಗಂಡನಿಗೆ ಮಹಿಳೆ ತನ್ನ ಪೂರ್ತಿ ಕಥೆ ಹೇಳಿದ್ದಾಳೆ. ಆದ್ರೆ ಆತ ತನ್ನ ಅಪ್ಪನ ಪರ ನಿಂತಿದ್ದು, ತನ್ನ ಪತ್ನಿಗೆ ತಲಾಖ್ ನೀಡಿ ಸಂಬಂಧ ಮುರಿದು ಹಾಕಿದ್ದಾನೆ.
ಏನಿದು ಪ್ರಕರಣ: ಫತೇಪುರ್ ಜಿಲ್ಲೆಯ ಮಾಲ್ವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ನಿವಾಸಿಯಾಗಿರುವ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನ ಪ್ರಕಾರ, ನಾನು ಕಾನ್ಪುರ ನಗರದ ನಿವಾಸಿಯನ್ನು 2015 ರಲ್ಲಿ ಮದುವೆಯಾಗಿದ್ದೇನೆ. ನಮಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮದುವೆಯಾದ ಬಳಿಕ ತಂದೆ-ಮಗ ಇಬ್ಬರು ವರದಕ್ಷಿಣೆಗಾಗಿ ನನಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಸದ್ಯ ನನ್ನ ಪತಿ ಬಹ್ರೇನ್‌ನಲ್ಲಿದ್ದಾರೆ. ನಾನು, ಇಬ್ಬರು ಮಕ್ಕಳು ಮತ್ತು ನನ್ನ ಮಾವ ಮನೆಯಲ್ಲಿ ವಾಸಿಸುತ್ತಿದ್ದೇವೆ. 2023ರ ಡಿಸೆಂಬರ್ 20ರಂದು ನಾನು ಮನೆಯಲ್ಲಿ ಒಬ್ಬಳೇ ಇದ್ದಾಗ ಮಾವ ಕೆಟ್ಟ ಉದ್ದೇಶದಿಂದ ನನಗೆ ಕಿರುಕುಳ ನೀಡಲು ಯತ್ನಿಸಿದರು. ಆದ್ರೆ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಿದೆ. ಆಗ ನಾನು ಸ್ನಾನ ಮಾಡುವಾಗ ಅಶ್ಲೀಲ ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನಾನು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ನಮ್ಮ ಮಾವ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ. ಆಗ ನಾನು ಮಾವn ಕಪಿಮುಷ್ಠಿಯಿಂದ ಬಿಡಿಸಿಕೊಂಡು ನನ್ನ ರೂಂಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.