ಕರ್ನಾಟಕ

karnataka

ETV Bharat / bharat

ಬಿಜೆಪಿ-ಟಿಡಿಪಿ ಮೈತ್ರಿ ವಿಚಾರ: ಅಮಿತ್​ ಶಾ ಭೇಟಿಯಾದ ಚಂದ್ರಬಾಬು ನಾಯ್ಡು - Bjp TDP Alliance Buzz

ಬಿಜೆಪಿ-ಟಿಡಿಪಿ ಮೈತ್ರಿ ವಿಚಾರದ ಕುರಿತು ಆಂಧ್ರ ಪ್ರದೇಶದ ಮಾಜಿ ಸಿಎಂ ನಾಯ್ಡು, ಕೇಂದ್ರ ಸಚಿವ ಅಮಿತ್​ ಶಾ ನಡುವೆ ಮಾತುಕತೆ ನಡೆದಿದೆ.

Telugu Desam Party   BJP  TDP  BJP TDP alliance   Ex-Andhra CM Naidu meets Shah
ಬಿಜೆಪಿ-ಟಿಡಿಪಿ ಮೈತ್ರಿ ವಿಚಾರ: ಆಂಧ್ರ ಪ್ರದೇಶದ ಮಾಜಿ ಸಿಎಂ ನಾಯ್ಡು, ಅಮಿತ್​ ಶಾ ನಡುವೆ ಮಾತುಕತೆ

By PTI

Published : Mar 8, 2024, 9:50 AM IST

ನವದೆಹಲಿ: ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರು ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯ ಕುರಿತು ಆಂಧ್ರಪ್ರದೇಶದಲ್ಲಿ ಮಾತುಕತೆ ನಡೆಸಿದ್ದಾರೆ. ಟಿಡಿಪಿ ಪಕ್ಷವು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಭಾಗವಾಗಿತ್ತು. ಆದರೆ, ನಾಯ್ಡು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 2018ರಲ್ಲಿ ಮೈತ್ರಿಯಿಂದ ನಿರ್ಗಮಿಸಿದ್ದರು.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಚರ್ಚೆಯಲ್ಲಿ ಭಾಗವಹಿಸಿದ್ದರು. ಎರಡೂ ಪಕ್ಷಗಳು ಕೈಜೋಡಿಸಲು ವಾತಾವರಣ ಮುಕ್ತವಾಗಿವೆ. ಆದರೆ, ಅವರು ಪರಸ್ಪರ ಒಪ್ಪಿಗೆಯಾಗಿ ಸೀಟು ಹಂಚಿಕೆಯವರೆಗೆ ತಲುಪುತ್ತಾರೆಯೇ ಎಂಬುದರ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಮೈತ್ರಿ ರಚನೆಯಲ್ಲಿ ಯಾವುದೇ ವಿಳಂಬ ಪ್ರಯೋಜನಕಾರಿಯಾಗುವುದಿಲ್ಲ. ಯಾವುದೇ ಅಸ್ಪಷ್ಟತೆ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಗೊಂದಲಕ್ಕೆ ಒಳಗಾಗುವಂತೆ ಮಾಡುತ್ತದೆ ಎಂದು ಟಿಡಿಪಿ ನಾಯಕರು ಹೇಳಿದ್ದಾರೆ.

ಎನ್‌ಡಿಎ ಸದಸ್ಯರಾಗಿರುವ ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷವು ಈಗಾಗಲೇ ಟಿಡಿಪಿಯೊಂದಿಗೆ ಕೈಜೋಡಿಸಿದೆ. ಕಲ್ಯಾಣ್ ಕೂಡ ಶಾ ಜೊತೆ ಸಭೆ ನಡೆಸಿದ್ದಾರೆ. ಇದಕ್ಕೂ ಮುನ್ನ ನಾಯ್ಡು ಅವರು ಟಿಡಿಪಿಯ ಸಂಸದರು ಸೇರಿದಂತೆ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಒಡಿಶಾದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಬಿಜು ಜನತಾ ದಳ ಮೈತ್ರಿ ಅಂತಿಮಗೊಳಿಸುವ ಹಂತದಲ್ಲಿದೆ ಎಂಬ ಭರವಸೆ ಹೆಚ್ಚುತ್ತಿರುವ ನಡುವೆ ನಡೆದ ಈ ಬೆಳವಣಿಗೆ ಹೊಸ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ನಾಯ್ಡು ಫೆಬ್ರುವರಿಯಲ್ಲಿ ಅಮಿತ್​ ಶಾ ಮತ್ತು ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಈ ಸಭೆಗಳು ಮೈತ್ರಿಯ ಊಹಾಪೋಹಕ್ಕೆ ಪುಷ್ಟಿ ನೀಡಿದ್ದವು.

ಆಂಧ್ರಪ್ರದೇಶದಲ್ಲಿ 25 ಲೋಕಸಭೆ ಮತ್ತು 175 ವಿಧಾನಸಭಾ ಸ್ಥಾನಗಳಿವೆ. ಎಂಟರಿಂದ 10 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಿಜೆಪಿ ಉತ್ಸುಕವಾಗಿದೆ. ಟಿಡಿಪಿಯ ಮೂಲಗಳ ಪ್ರಕಾರ, ಮೈತ್ರಿಯ ಸಂದರ್ಭದಲ್ಲಿ ಬಿಜೆಪಿ ಐದರಿಂದ ಆರು ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಬಹುದು. ಜನಸೇನೆ ಮೂರು ಮತ್ತು ಟಿಡಿಪಿ ಪಕ್ಷವು ಉಳಿದವುಗಳಲ್ಲಿ ಸ್ಪರ್ಧಿಸಬಹುದು. ಆದರೆ ಇದೇ ವೇಳೆ, ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಸಂಸತ್ತಿನಲ್ಲಿ ಮೋದಿ ಸರ್ಕಾರದ ಕಾರ್ಯಸೂಚಿಯನ್ನು ಬೆಂಬಲಿಸುತ್ತಿರುವುದು ಬಿಜೆಪಿಗೆ ಸಂಕೀರ್ಣವಾದ ವಿಷಯವಾಗಿದೆ. ಅಷ್ಟೇ ಅಲ್ಲದೇ ಅವರು ಕೇಂದ್ರದ ಹಿರಿಯ ನಾಯಕರೊಂದಿಗೆ ಉತ್ತಮ ವೈಯಕ್ತಿಕ ಬಾಂಧವ್ಯವನ್ನೂ ಹೊಂದಿದ್ದಾರೆ.

ಮಿತ್ರಪಕ್ಷಗಳೊಂದಿಗೆ 400 ಸ್ಥಾನ ಗೆಲ್ಲುವ ಗುರಿ:ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಗೆಲುವಿನ ನಿರೀಕ್ಷೆ ಹೊಂದಿರುವ ಬಿಜೆಪಿ, ಕೆಲವು ಸಮಯದಿಂದ ಎನ್‌ಡಿಎಯನ್ನು ವಿಸ್ತರಿಸುವ ಕೆಲಸ ಮಾಡುತ್ತಿದೆ. ಮೋದಿ ನೇತೃತ್ವದ ಆಡಳಿತಾರೂಢ ಪಕ್ಷವು ಮೂರನೇ ಬಾರಿಗೆ ಗೆಲುವಿನ ಮೇಲೆ ಕಣ್ಣಿಟ್ಟಿದ್ದು, ಸ್ವಂತ ಬಲದಿಂದ 370 ಮತ್ತು ಮಿತ್ರಪಕ್ಷಗಳೊಂದಿಗೆ 400 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದೆ.

ಇದನ್ನೂ ಓದಿ:ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಸೇರಿ 40 ಅಭ್ಯರ್ಥಿಗಳ ಹೆಸರು ಅಂತಿಮ

ABOUT THE AUTHOR

...view details