ETV Bharat / bharat

ಫುಟ್​​​​​​ಪಾತ್​ ಮೇಲೆ ಹರಿದ ಡಂಪರ್​, ಇಬ್ಬರು ಮಕ್ಕಳು ಸೇರಿ ಮೂವರು ಸ್ಥಳದಲ್ಲೇ ಸಾವು: 6 ಮಂದಿಯ ಸ್ಥಿತಿ ಚಿಂತಾಜನಕ - 2 CHILDREN AMONG 3 KILLED

ರಸ್ತೆ ಪಕ್ಕದ ಗುಡಿಸಲುಗಳ ಮೇಲೆ ಡಂಪರ್ ಹರಿದು ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ.​

2 Children Among 3 Killed As Truck Mows Down 9 Sleeping On Pavement In Pune
ಫುಟ್​​​​​​ಪಾತ್​ ಮೇಲೆ ಹರಿದ ಡಂಪರ್​, ಇಬ್ಬರು ಮಕ್ಕಳು ಸೇರಿ ಮೂವರು ಸ್ಥಳದಲ್ಲೇ ಸಾವು: 6 ಮಂದಿಯ ಸ್ಥಿತಿ ಚಿಂತಾಜನಕ (IANS)
author img

By ETV Bharat Karnataka Team

Published : Dec 23, 2024, 10:29 AM IST

ಪುಣೆ, ಮಹಾರಾಷ್ಟ್ರ: ಪುಣೆಯ ಹೃದಯ ವಿದ್ರಾವಕ ಘಟನೆ ನಡೆದಿದೆ. ಡಂಪರ್​​​ ವಾಹನವೊಂದು ಪಾದಚಾರಿ ಮಾರ್ಗದ ಮೇಲೆ ನುಗ್ಗಿದ್ದರಿಂದ ಅಲ್ಲಿದ್ದ 9 ಜನರ ಮೇಲೆ ಹರಿದಿದೆ. ಪರಿಣಾಮ ಇಬ್ಬರು ಪುಟ್ಟ ಕಂದಮ್ಮಗಳು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಉಳಿದ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಪುಣೆಯಿಂದ ಬಂದ ಖಾಸಗಿ ಕಂಪನಿಯೊಂದರ ಡಂಪರ್ ಫುಟ್‌ಪಾತ್‌ ಮೇಲೆ ನುಗ್ಗಿದ್ದರಿಂದ ಅಲ್ಲಿದ್ದ ಗುಡಿಸಲಗಳ ಮೇಲೆ ಹರಿದಿದೆ. ಕೇಸ್ನಂದ್ ಫಾಟಾ ಬಳಿಯ ವಾಘೋಲಿಯಲ್ಲಿ ತಡ ರಾತ್ರಿ ಒಂದು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಗುಡಿಸಲಿಲ್ಲ ಇದ್ದ 9 ಜನ ಕಾರ್ಮಿಕರ ಮೇಲೆ ಹರಿದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಆರು ಜನ ತೀವ್ರವಾಗಿ ಗಾಯಗೊಂಡಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಡಂಪರ್ ಚಾಲಕ ಮದ್ಯಪಾನ ಮಾಡಿದ್ದ ಎನ್ನಲಾಗಿದ್ದು, ಪುಣೆಯಿಂದ ವಾಘೋಲಿಗೆ ಹೋಗುತ್ತಿದ್ದಾಗ ಬಿಲ್ಡ್‌ವೆಲ್ ಎಂಟರ್‌ಪ್ರೈಸಸ್ ಮಾಲೀಕತ್ವದ ಭಾರಿ ವಾಹನ ನಿಯಂತ್ರಣ ಕಳೆದುಕೊಂಡಿದೆ. ಹೀಗಾಗಿ ಒಂದು ವರ್ಷದ ವೈಭವಿ ರಿತೇಶ್ ಪವಾರ್, ಎರಡು ವರ್ಷದ ವೈಭವ್ ಪವಾರ್, ಮತ್ತು ರಿತೇಶ್​ ಎನ್. ಪವಾರ್ ಸ್ಥಳದಲ್ಲೇ ಅಸು ನೀಗಿದ್ದಾರೆ. ದುರಂತ ಸಂಭವಿಸಿದಾಗ ಅವರೆಲ್ಲರೂ ಪರಸ್ಪರ ಪಕ್ಕದಲ್ಲಿ ಮಲಗಿದ್ದರು. ಗಾಯಗೊಂಡಿರುವ ಇತರ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದ್ದು, ಸಸೂನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಪ್ರದೇಶದಲ್ಲಿ ವಿವಿಧ ಕಟ್ಟಡ ನಿರ್ಮಾಣ ನಿಮಿತ್ತ ಕಾರ್ಮಿಕರಾಗಿ ಕೆಲಸ ಮಾಡಲು ಭಾನುವಾರ ಸುಮಾರು ಒಂದು ಡಜನ್ ಕಾರ್ಮಿಕರು ಅಮರಾವತಿಯಿಂದ ಇಲ್ಲಿಗೆ ಬಂದಿದ್ದರು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸ್ಥಳೀಯ ಪೊಲೀಸರು ಘಟನೆಗೆ ನಿಖರವಾದ ಕಾರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ವರದಿಗಳು ಚಾಲಕ ಕುಡಿದ ಅಮಲಿನಲ್ಲಿದ್ದವೆಂದು ಸೂಚಿಸುತ್ತಿವೆ ಎಂದು ಸಂತ್ರಸ್ತರಿಗೆ ಸಹಾಯ ಮಾಡಲು ಅಲ್ಲಿಗೆ ಧಾವಿಸಿದ ಸ್ಥಳೀಯರು ಹೇಳಿದ್ದಾರೆ

ಇದನ್ನು ಓದಿ:ಬಾಂಗ್ಲಾದೇಶ: ಅರ್ಚಕನ ಕೈ, ಕಾಲು ಕಟ್ಟಿ ಬರ್ಬರ ಹತ್ಯೆ; ದೇವಸ್ಥಾನದಲ್ಲಿದ್ದ ಬೆಲೆಬಾಳುವ ವಸ್ತುಗಳ ಲೂಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.