ಕರ್ನಾಟಕ

karnataka

ಇವಿಎಂ ಖುದ್ದು ಪರಿಶೀಲನೆ ಕೋರಿದ ಸೋತ ಅಭ್ಯರ್ಥಿಗಳ ಮನವಿ ಒಪ್ಪಿದ ಚುನಾವಣಾ ಆಯೋಗ - EVM CHECK

ಇವಿಎಂಗಳ ಮೇಲಿನ ಅನುಮಾನ ಬಗೆಹರಿಯದ ಕಾರಣ, ಚುನಾವಣಾ ಆಯೋಗವು ಇದನ್ನು ಇತ್ಯರ್ಥಪಡಿಸಲು ಸೋತ ಅಭ್ಯರ್ಥಿಗಳಿಗೆ ನೇರವಾಗಿ ಪರಿಶೀಲನೆ ಮಾಡಲು ಅವಕಾಶವೊಂದನ್ನು ನೀಡಿದೆ.

By PTI

Published : Jul 16, 2024, 6:46 PM IST

Published : Jul 16, 2024, 6:46 PM IST

ಚುನಾವಣಾ ಆಯೋಗ
ಚುನಾವಣಾ ಆಯೋಗ (ETV Bharat)

ನವದೆಹಲಿ:ವಿದ್ಯುನ್ಮಾನ ಮತಯಂತ್ರಗಳನ್ನ (ಇವಿಎಂ) ತಿರುಚಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ಮತ್ತು ಚುನಾವಣಾ ಆಯೋಗ ಸ್ಪಷ್ಟಪಡಿಸಿದ ಬಳಿಕವೂ, ಕೆಲ ರಾಜಕೀಯ ನಾಯಕರು ಸ್ವಯಂ ಪರಿಶೀಲನೆ ಅವಕಾಶ ಕೋರಿದ್ದಾರೆ. ಇದಕ್ಕೆ ಚುನಾವಣಾ ಆಯೋಗ ಒಪ್ಪಿಗೆ ನೀಡಿದೆ.

ಮತಯಂತ್ರಗಳನ್ನು ತಾವೇ ಖುದ್ದಾಗಿ ಪರಿಶೀಲನೆ ಮಾಡಬೇಕು ಎಂಬ ಮನವಿಗೆ ಚುನಾವಣಾ ಆಯೋಗವು ಹಲವು ಆಯ್ಕೆಗಳನ್ನು ನೀಡಿದೆ. ಯಾವುದೇ ವಿಧಾನಸಭೆ ಚುನಾವಣಾ ಕ್ಷೇತ್ರದ ಮತಯಂತ್ರ, ವಿವಿಪ್ಯಾಟ್​ ಅನ್ನು ಅರ್ಜಿದಾರರೇ ಆಯ್ಕೆ ಮಾಡಿಕೊಳ್ಳಬಹುದು. ಅಣಕು ಮತದಾನ, ವಿವಿಪ್ಯಾಟ್​ ಎಣಿಕೆಯನ್ನೂ ಅವರೇ ಮಾಡಬಹುದು ಎಂದು ತಿಳಿಸಿದೆ.

ಈ ಬಗ್ಗೆ ಮಂಗಳವಾರ ಹೇಳಿಕೆ ನೀಡಿದ್ದು, ಚುನಾವಣೆಯಲ್ಲಿ ಎರಡು ಮತ್ತು ಮೂರನೇ ಸ್ಥಾನ ಪಡೆದ ಅಭ್ಯರ್ಥಿಗಳು ಈ ಪರೀಕ್ಷೆ ನಡೆಸಲು ಅವಕಾಶವಿದೆ. ಮತಯಂತ್ರಗಳನ್ನು ತಿರುಚಲು, ಹ್ಯಾಕ್​ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅವರೇ ಕಂಡುಕೊಳ್ಳಬಹುದು ಎಂದು ಆಯೋಗ ತಿಳಿಸಿದೆ.

ಈಚೆಗೆ ಮುಗಿದ ಲೋಕಸಭೆ ಚುನಾವಣೆಯ ಬಳಿಕ ಇವಿಎಂಗಳನ್ನು ಹ್ಯಾಕ್​ ಮಾಡುವ, ಮೈಕ್ರೋ ಕಂಟ್ರೋಲರ್​ ಚಿಪ್​​ಗಳನ್ನು ತಿರುಚುವ, ಮತ ಬದಲಾವಣೆ ಮಾಡುವ ಬಗ್ಗೆ ಅರಿಯಲು ಕೋರಿ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ ಚುನಾವಣಾ ಆಯೋಗಕ್ಕೆ ಎಂಟು ಅರ್ಜಿಗಳನ್ನು ಸಲ್ಲಿಸಲಾಗಿದೆ.

ಆಯೋಗ ನೀಡಿದ ಅವಕಾಶವೇನು?:ಇವಿಎಂಗಳ ಮೇಲೆ ಅನುಮಾನ ಇರುವ ಅಭ್ಯರ್ಥಿಗಳು ಆಯೋಗಕ್ಕೆ ಇಂತಿಷ್ಟು ಶುಲ್ಕವನ್ನು ಪಾವತಿಸಿದ ಬಳಿಕ, ತಾವು ಇಚ್ಚಿಸುವ ಕ್ಷೇತ್ರಗಳ ಐದು ಮತಯಂತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನಿರ್ದಿಷ್ಟ ವ್ಯಕ್ತಿ, ಆಯೋಗದ ಅಧಿಕಾರಿಯಲ್ಲದೇ, ಅಭ್ಯರ್ಥಿಯೇ ಇವಿಎಂ ಅನ್ನು ಆರಿಸಿಕೊಳ್ಳಬಹುದು.

ಒಂದು ಬ್ಯಾಲೆಟ್ ಯೂನಿಟ್, ಒಂದು ಕಂಟ್ರೋಲ್ ಯೂನಿಟ್ ಮತ್ತು ಒಂದು ವಿವಿಪ್ಯಾಟ್ ಅಥವಾ ಪೇಪರ್ ಟ್ರಯಲ್ ಮೆಷಿನ್ ಒಂದು ಇವಿಎಂಗೆ ಹೊಂದಿಸಲಾಗುತ್ತದೆ. ಅರ್ಜಿದಾರ ಅಭ್ಯರ್ಥಿಗಳು ಇವಿಎಂಗಳನ್ನು ಬಳಸಿಕೊಂಡು ಅಣಕು ಮತದಾನ ಮಾಡಬಹುದು. ಗರಿಷ್ಠ 1,400 ಮತಗಳನ್ನು ಹಾಕಬಹುದು. ಬಳಿಕ ವಿವಿಪ್ಯಾಟ್​ನಲ್ಲಿ ದಾಖಲಾದ ಮತಗಳನ್ನು ಇವಿಎಂನಲ್ಲಿ ಹಾಕಲಾದ ಮತಗಳೊಂದಿಗೆ ಎಣಿಕೆ ಮಾಡಲು ಅವಕಾಶ ನೀಡಲಾಗಿದೆ.

ಅಭ್ಯರ್ಥಿಗಳ ಆರೋಪವೇನು?:ಲೋಕಸಭೆ ಚುನಾವಣೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್​ಗಳ ಮಧ್ಯೆ ತಾಳಮೇಳವಿಲ್ಲ. ಇವಿಎಂನಲ್ಲಿ ಮೈಕ್ರೋ ಚಿಪ್​ ಅನ್ನು ಹ್ಯಾಕ್​ ಮಾಡಿ ಫಲಿತಾಂಶವನ್ನು ತಿರುಚಲಾಗುತ್ತಿದೆ ಎಂದು ಕೆಲ ಅಭ್ಯರ್ಥಿಗಳು ಆಕ್ಷೇಪಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ ಮತ್ತು ಸುಪ್ರೀಂಕೋರ್ಟ್​, ಇವಿಎಂ ಅನ್ನು ಹ್ಯಾಕ್​ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಈ ಹಿಂದಿನ ಬ್ಯಾಲೆಟ್​ ಪೇಪರ್​ ಮತದಾನವನ್ನೇ ಚುನಾವಣೆಗಳಲ್ಲಿ ಜಾರಿಗೆ ತನ್ನಿ ಎಂದು ಕೋರಿದ್ದ ಅರ್ಜಿಗಳನ್ನು ಕೋರ್ಟ್​ ರದ್ದು ಮಾಡಿತ್ತು.

ಇದನ್ನೂ ಓದಿ:'ಅವು ಯಾರೂ ಪರಿಶೀಲಿಸಲಾಗದ ಕಪ್ಪು ಪೆಟ್ಟಿಗೆಗಳು': ಇವಿಎಂ ವಿರುದ್ಧ ರಾಹುಲ್ ಗಾಂಧಿ ಕಿಡಿ - Rahul Gandhi Criticize EVM

ABOUT THE AUTHOR

...view details