ಸುರಾಜ್ಪುರ್(ಛತ್ತೀಸ್‌ಗಢ):ಪೊಲೀಸ್ಹೆಡ್ ಕಾನ್ಸ್ಟೇಬಲ್ವೊಬ್ಬರ ಪತ್ನಿ ಮತ್ತು ಮಗುವನ್ನು ಭೀಕರವಾಗಿ ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿ ಅಕ್ರಮವಾಗಿ ಕಟ್ಟಿದ್ದ ಮನೆಯನ್ನು ಛತ್ತೀಸ್ಗಢದ ಸೂರಜ್ಪುರ್ ಜಿಲ್ಲಾಡಳಿತ ಬುಲ್ಡೋಬರ್ ಹರಿಸಿ ನೆಲಸಮಗೊಳಿಸಿತು. ಆರೋಪಿ ಕುಲ್ದೀಪ್ ಸಾಹು ಎಂಬಾತನಿಗೆ ಸೇರಿದ ಮನೆಯನ್ನು ಧ್ವಂಸಗೊಳಿಸಲಾಗಿದೆ.
ಸೋಮವಾರ ಬೆಳಗ್ಗೆ ಸುರಾಜ್ಪುರ್ ಹಳೆಯ ಬಸ್ ನಿಲ್ದಾಣದ ಸಮೀಪದಲ್ಲಿದ್ದ ಮನೆಯನ್ನು ಸ್ಥಳೀಯ ನಗರಸಭೆ ಅಧಿಕಾರಿಗಳು ಪೊಲೀಸರ ಉಪಸ್ಥಿತಿಯಲ್ಲಿ ಉರುಳಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಮನೆ ಧ್ವಂಸಗೊಳಿಸುವ ಪ್ರಕ್ರಿಯೆಗೂ ಮುನ್ನ ಸೂರಜ್ಪುರ್ ಮುನ್ಸಿಪಲ್ ಆಡಳಿತ ಆರೋಪಿಯ ಮನೆ ಮುಂದೆ 'ಅಕ್ರಮ ಕಟ್ಟಡ' ಎಂಬ ನೋಟಿಸ್ ಅಂಟಿಸಿತ್ತು.
ಈ ಕುರಿತು ಮಾತನಾಡಿರುವ ಸೂರಜ್ಪುರ್ ತಹಶೀಲ್ದಾರ್ ಸಮೀರ್ ಶರ್ಮಾ, "ಸಾಹು ಮನೆ ಸೇರಿದಂತೆ ಮೂರು ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದು, ಜಿಲ್ಲಾಡಳಿತ ಧ್ವಂಸಗೊಳಿಸಿದೆ" ಎಂದು ತಿಳಿಸಿದರು.