ಕರ್ನಾಟಕ

karnataka

ETV Bharat / bharat

ದೆಹಲಿ ವಿಧಾನಸಭೆ ಚುನಾವಣೆ: ಎಲ್ಲ 70 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಕಾಂಗ್ರೆಸ್​ - CONGRESS DECLARED 70 CANDIDATES

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿರುವ ಕಾಂಗ್ರೆಸ್​ ಎಲ್ಲ 70 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಕಾಂಗ್ರೆಸ್
ಕಾಂಗ್ರೆಸ್ (ETV Bharat)

By PTI

Published : Jan 16, 2025, 3:48 PM IST

ನವದೆಹಲಿ:ದೆಹಲಿ ವಿಧಾನಸಭೆ ಚುನಾವಣೆಯನ್ನು ಗೆದ್ದೇ ತೀರುವಂತೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್​ ಎಲ್ಲ 70 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಖೈರು ಮಾಡಿದೆ. ಬಾಕಿ ಉಳಿಸಿಕೊಂಡಿದ್ದ 2 ಸ್ಥಾನಗಳಿಗೂ ಗುರುವಾರ ಉಮೇದುವಾರರನ್ನು ಪ್ರಕಟಿಸಿತು.

ಇದುವರೆಗೂ 68 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಕಾಂಗ್ರೆಸ್​ ಇಂದು ತಿಮಾರ್​ಪುರ ಮತ್ತು ರೋಹ್ತಾಸ್​ ನಗರ ಕ್ಷೇತ್ರಗಳಿಗೆ ಇಬ್ಬರನ್ನು ಘೋಷಿಸಿತು. ತಿಮಾರ್​ಪುರದಿಂದ ಲೋಕೇಂದ್ರ ಚೌಧರಿ, ಸುರೇಶ್ ವತಿ ಚೌಹಾಣ್ ಅವರನ್ನು ರೋಹ್ತಾಸ್ ನಗರದಿಂದ ಸ್ಪರ್ಧಿಸಲಿದ್ದಾರೆ.

ಬುಧವಾರ 5 ಕ್ಷೇತ್ರಗಳಾದ ಬವಾನಾ (ಎಸ್​ಸಿ) ಕ್ಷೇತ್ರದಿಂದ ಸುರೇಂದ್ರಕುಮಾರ್​, ರೋಹಿಣಿ ಕ್ಷೇತ್ರದಿಂದ ಸುಮೇಶ್​ ಗುಪ್ತಾ, ಕರೋಲ್​ಬಾಗ್​ (ಎಸ್​ಸಿ) ಕ್ಷೇತ್ರದಿಂದ ರಾಹುಲ್​ ಧನಕ್​, ತುಘಲಕಾಬಾದ್​ನಿಂದ ವೀರೇಂದ್ರ ಬಿಧೂರಿ ಮತ್ತು ಬದರ್​ಪುರದಿಂದ ಅರ್ಜುನ್​ ಭದಾನ ಅವರನ್ನು ಕಣಕ್ಕಿಳಿಸಿತ್ತು.

ಕಾಂಗ್ರೆಸ್​ ಮಂಗಳವಾರ 15 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ಪಟೇಲ್​ ನಗರದಿಂದ ಕೇಂದ್ರ ಮಾಜಿ ಸಚಿವ ಕೃಷ್ಣಾ ತೀರತ್​​, ಓಖ್ಲಾ ಕ್ಷೇತ್ರದಿಂದ ಆರಿಬಾ ಖಾನ್​ ಅವರನ್ನು ಕಣಕ್ಕಿಳಿಸಿತ್ತು.

ಸಿಎಂ ಅತಿಶಿ ವಿರುದ್ಧ ಅಲ್ಕಾ ಲಂಬಾ:ಚುನಾವಣಾ ಕಣದಲ್ಲಿ ಕಲ್ಕಾಜಿ ಕ್ಷೇತ್ರವು ಜಿದ್ದಾಜಿದ್ದಿನ ಕ್ಷೇತ್ರವಾಗಿದೆ. ಆಮ್​ ಆದ್ಮಿ ಪಕ್ಷದ (ಆಪ್​) ಅಭ್ಯರ್ಥಿ, ಸಿಎಂ ಅತಿಶಿ ವಿರುದ್ಧ ಕಾಂಗ್ರೆಸ್​ ತನ್ನ ಪಕ್ಷದ ಫೈರ್​​ಬ್ರ್ಯಾಂಡ್​, ಮಾಜಿ ಶಾಸಕಿ ಅಲ್ಕಾ ಲಂಬಾ ಅವರನ್ನು ಕಣಕ್ಕಿಳಿಸಿದೆ. ಮಾಜಿ ಸಿಎಂ ಅರವಿಂದ್​​ ಕೇಜ್ರಿವಾಲ್​ ಅವರ ವಿರುದ್ಧ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅವರನ್ನು ಎದುರಾಳಿಯಾಗಿ ಕಣಕ್ಕೆ ಇಳಿಸಿದೆ.

ವಿಪಕ್ಷಗಳ I.N.D.I.A. ಕೂಟದ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್​ ಮತ್ತು ಆಪ್​ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಪ್ರತಿಸ್ಪರ್ಧಿಗಳಾಗಿವೆ. ಇಲ್ಲಿ ಬಿಜೆಪಿಯೂ ಕಠಿಣ ಸ್ಪರ್ಧೆ ನೀಡಿದ್ದರೂ, ಕಾಂಗ್ರೆಸ್​ ಮತ್ತು ಆಪ್​ ನಡುವಿನ ಹೋರಾಟ ಗಮನಾರ್ಹವಾಗಿದೆ.

ಫೆಬ್ರವರಿ 5 ರಂದು ದೆಹಲಿ ವಿಧಾನಸಭೆಗ ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ:ದೆಹಲಿ ಚುನಾವಣೆ: ಕಾಂಗ್ರೆಸ್​​ನಿಂದ ಇದೇ ಮೊದಲ ಸಲ 'ಉಚಿತ'ವಲ್ಲದ ಭರವಸೆ ಘೋಷಣೆ

ಓದಿ: ದೆಹಲಿ ಚುನಾವಣೆ: ಬಿಜೆಪಿ ಮೊದಲ ಪಟ್ಟಿ ಬಿಡುಗಡೆ, ಅರವಿಂದ್​ ಕೇಜ್ರಿವಾಲ್​ ವಿರುದ್ಧ ಮಾಜಿ ಸಂಸದ ಕಣಕ್ಕೆ

ABOUT THE AUTHOR

...view details