ನವದೆಹಲಿ:ದೆಹಲಿ ವಿಧಾನಸಭ ಚುನಾವಣಾ ಮತ ಎಣಿಕೆ ಇಂದು ನಡೆಯುತ್ತಿದ್ದು, ಆರಂಭಿಕ ಟ್ರೆಂಡ್ನಲ್ಲಿ ಬಿಜೆಪಿ ಎರಡು ಸ್ಥಾನದಲ್ಲಿ ಮುನ್ನೆಡೆ ಕಾಯ್ದುಕೊಂಡಿದೆ. ವಿಶ್ವಾಸ್ ನಗರ್ನ ಬಿಜೆಪಿ ಅಭ್ಯರ್ಥಿ ಓಂ ಪ್ರಕಾಶ್ ಶರ್ಮಾ 1741 ಮತಗಳಿಂದ ಮುನ್ನಡೆ ಸಾಧಿಸಿದ್ದು, ಶಹದಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂಜಯ್ ಗೋಯಲ್ ಕೂಡ ಸಣ್ಣ ಅಂತರದಲ್ಲಿ ಅಂದರೆ ಕೇವಲ 506 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಮತ ಏಣಿಕೆ ಹಿನ್ನಲೆ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ನಡೆಸಲಾಗಿದ್ದು, ಬುಧವಾರ ಫೆಬ್ರವರಿ 5ರಂದು ನಡೆದ ದೆಹಲಿ ವಿಧಾನಸಭಾ ಚುನಾವಣಾ ಮತದಾನದಲ್ಲಿ ಒಟ್ಟು ಶೇ 60.54ರಷ್ಟು ಮತದಾನ ನಡೆದಿತ್ತು.
ಈಗಾಗಲೇ ಸತತ ಎರಡು ಅವಧಿಯಿಂದ ದೆಹಲಿಯಲ್ಲಿ ಸರ್ಕಾರ ನಡೆಸಿರುವ ಎಎಪಿ ಮೂರನೇ ಅವಧಿಗೂ ಸರ್ಕಾರ ರಚಿಸುವ ಭರವಸೆಯಲ್ಲಿದ್ದರೆ, ಇತ್ತ ಬಿಜೆಪಿ ಕೂಡ ಎರಡು ದಶಕದ ಬಳಿಕ ಮತ್ತೆ ಗದ್ದುಗೆ ಏರಲು ಎಲ್ಲಾ ಪ್ರಯತ್ನ ನಡೆಸಿದೆ.
ಸಂದೀಪ್ ದೀಕ್ಷಿತ್ ಹೇಳಿದ್ದಿಷ್ಟು:ಮತದಾನ ಆರಂಭಕ್ಕೆ ಮುನ್ನ ಮಾತನಾಡಿರುವ ದೆಹಲಿ ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ದೀಕ್ಷಿತ್, ಮತದಾನೋತ್ತರದ ಬಳಿಕ ಟ್ರೆಂಡ್ ಗಮನಿಸಿ ಆಮ್ ಆದ್ಮಿ ಪಕ್ಷದ ಜೊತೆಗೆ ಮೈತ್ರಿ ನಡೆಸುವ ಕುರಿತು ಯಾವುದೇ ಸುಳಿವಿಲ್ಲ. ಇದು ಹೈ ಕಮಾಂಡ್ಗೆ ಬಿಟ್ಟ ನಿರ್ಧಾರ. ಮೊದಲಿಗೆ ಮತ ಏಣಿಕೆ ಮುಗಿದು ಫಲಿತಾಂಶ ಬರಲಿ ಎಂದರು.
ಬುಧವಾರ ಮತದಾನ ಅಂತ್ಯಗೊಂಡ ಬಳಿಕ ಹೊರಬಿತ್ತ ಚುನಾವಣೋತ್ತರ ಸಮೀಕ್ಷೆಯಲ್ಲಿ ಎಎಪಿಗೆ ಬಿಜೆಪಿ ಸವಾಲು ಒಡ್ಡಲಿದೆ ಎಂದು ತಿಳಿಸಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಎಎಪಿ ನಾಯಕರು ಚುನಾವಣೋತ್ತರ ಸಮೀಕ್ಷೆಗಳು ನಮ್ಮ ಪ್ರದರ್ಶನವನ್ನು ಕಡಿಮೆ ಅಂದಾಜಿಸಿದೆ. ನಾವು ಮತ್ತೆ ಅಧಿಕಾರಕ್ಕೆ ಮರಳುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.