ನವದೆಹಲಿ:ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳ ಎದೆಬಡಿತ ಹೆಚ್ಚಿದೆ. ದಕ್ಷಿಣ ಜಿಲ್ಲೆಯ ಜಿಜಾಬಾಯಿ ಐಟಿಐ ಮಹಿಳಾ ಮತ ಎಣಿಕೆ ಕೇಂದ್ರದಲ್ಲಿ 5 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಮಾಳವೀಯ ನಗರ, ಛತ್ತರ್‌ಪುರ, ದಿಯೋಲಿ, ಅಂಬೇಡ್ಕರ್ ನಗರ ಮತ್ತು ಮೆಹ್ರೌಲಿ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶಗಳ ಎಣಿಕೆ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ.
ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಭದ್ರತೆ:ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ತೆ ಕೈಗೊಳ್ಳಲಾಗಿದೆ. ನಾಲ್ಕು ಹಂತಗಳಲ್ಲಿ ಭದ್ರತೆ ಇದ್ದು ದೆಹಲಿ ಪೊಲೀಸರು ಮತ ಎಣಿಕೆ ಕೇಂದ್ರವನ್ನು ಸಂಪೂರ್ಣವಾಗಿ ಸುತ್ತುವರಿದಿದ್ದಾರೆ. ದಕ್ಷಿಣ ಜಿಲ್ಲಾ ಚುನಾವಣಾಧಿಕಾರಿ ಎಂ.ಚೈತನ್ಯ ಪ್ರಸಾದ್ (ಐಎಎಸ್) ಸಂಪೂರ್ಣ ಸಿದ್ಧತೆಯ ವಿವರಗಳನ್ನು ನೀಡಿದ್ದಾರೆ. ಮತ ಎಣಿಕೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ದೆಹಲಿ ಪೊಲೀಸರ ಸಂಪೂರ್ಣ ಪಡೆ ಮತ ಎಣಿಕೆ ಕೇಂದ್ರದಲ್ಲಿ ಸಜ್ಜಾಗಲಿದೆ ಎಂದು ದಕ್ಷಿಣ ವಲಯದ ದೆಹಲಿ ಪೊಲೀಸ್ ಜಂಟಿ ಸಿಪಿ ಸಂಜಯ್ ಕುಮಾರ್ ಜೈನ್ ತಿಳಿಸಿದ್ದಾರೆ. ಅಲ್ಲದೇ, ಆಗ್ನೇಯ ಮತ್ತು ದಕ್ಷಿಣ ಜಿಲ್ಲೆಯಲ್ಲಿ ಸಿಎಪಿಎಫ್‌ನ 6 ಪಡೆಗಳು ಮತ್ತು ನೂರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಪ್ರತಿ ಎಣಿಕೆ ಕೇಂದ್ರದಲ್ಲಿ ಮೂವರು ಎಸಿಪಿಗಳು ಹಾಗೂ ಇನ್ಸ್‌ಪೆಕ್ಟರ್‌ಗಳೊಂದಿಗೆ ಡಿಸಿಪಿ ಅಧಿಕಾರಿಯೂ ಇರುತ್ತಾರೆ.
ಮತ ಎಣಿಕೆ ಕೇಂದ್ರ ಮತ್ತು ಕೇಂದ್ರದ ಸುತ್ತಮುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿರುವುದರಿಂದ ಯಾವುದೇ ಗೊಂದಲದ ಸಾಧ್ಯತೆ ಇಲ್ಲ. ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮತ ಎಣಿಕೆ ಕೇಂದ್ರದ ಒಳಗೆ ಪ್ರವೇಶಿಸಲು ವಿಶೇಷ ಮಾರ್ಗಸೂಚಿಗಳನ್ನು ಹಾಕಲಾಗಿದೆ. ಚುನಾವಣಾ ಫಲಿತಾಂಶದ ನಂತರ, ದಕ್ಷಿಣ ದೆಹಲಿಯ ಈ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷವು ಗೆಲ್ಲುತ್ತದೆ ಮತ್ತು ಯಾವ ಅಭ್ಯರ್ಥಿಯು ಜನರ ಮನಸ್ಸನ್ನು ಗೆದ್ದಿದ್ದಾರೆ ಎಂಬುದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.
ಇದನ್ನೂ ಓದಿ:ದೆಹಲಿಯ ದಿಲ್ ಗೆಲ್ಲುವವರಾರು? ಇಂದು ಫಲಿತಾಂಶ: ಈಟಿವಿ ಭಾರತದಲ್ಲಿ ಕ್ಷಣಕ್ಷಣದ ನಿಖರ ಮಾಹಿತಿ