ಕರ್ನಾಟಕ

karnataka

ETV Bharat / bharat

ಬಿಕ್ಕಟ್ಟಿನ ನಡುವೆ ಪಾಕಿಸ್ತಾನದ ಯುವತಿ ಜೊತೆ ಬಿಜೆಪಿ ಲೀಡರ್​ ಪುತ್ರನ 'ವರ್ಚುವಲ್​ ಮ್ಯಾರೇಜ್​' - INDIA PAKISTAN MARRIAGE STORY

ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಬಿಕ್ಕಟ್ಟನ್ನೂ ಮೀರಿ ಬಿಜೆಪಿ ನಾಯಕರೊಬ್ಬರು ತಮ್ಮ ಪುತ್ರನಿಗೆ ಪಾಕಿಸ್ತಾನದ ಯುವತಿಯೊಂದಿಗೆ ವರ್ಚುವಲ್ ನಿಕಾಹ್​ ಮಾಡಿಸಿದ್ದಾರೆ.

ಪಾಕಿಸ್ತಾನದ ಯುವತಿ ಜೊತೆ ಬಿಜೆಪಿ ಮುಖಂಡನ ಪುತ್ರನ 'ವರ್ಚುವಲ್​ ಮ್ಯಾರೇಜ್​'
ಪಾಕಿಸ್ತಾನದ ಯುವತಿ ಜೊತೆ ಬಿಜೆಪಿ ಮುಖಂಡನ ಪುತ್ರನ 'ವರ್ಚುವಲ್​ ಮ್ಯಾರೇಜ್​' (ETV Bharat)

By ETV Bharat Karnataka Team

Published : Oct 19, 2024, 8:58 PM IST

ಜೌನ್‌ಪುರ(ಉತ್ತಪ್ರದೇಶ):ಭಾರತ- ಪಾಕಿಸ್ತಾನ ನಡುವೆ ರಾಜತಾಂತ್ರಿಕ ಸಂಬಂಧ ಬಿಕ್ಕಟ್ಟಿನಲ್ಲಿದೆ. ಎರಡೂ ರಾಷ್ಟ್ರಗಳ ಮಧ್ಯೆ ಸ್ನೇಹ ಸಂಬಂಧಗಳು ಬಿರುಕು ಉಂಟಾಗಿರುವ ನಡುವೆ, ಉತ್ತರಪ್ರದೇಶದ ಬಿಜೆಪಿ ಮುಖಂಡರೊಬ್ಬರು ತಮ್ಮ ಪುತ್ರನಿಗೆ ಪಾಕ್​​ನ ಯುವತಿಯ ಜೊತೆಗೆ ವಿವಾಹ ಮಾಡಿಸಿದ್ದಾರೆ. ಅದೂ ಆನ್​ಲೈನ್​ ಮ್ಯಾರೇಜ್​.

ಹೌದು, ಎರಡೂ ಕುಟುಂಬಗಳು ವಿಡಿಯೋ ಕಾಲ್​ ಮೂಲಕ ಒಂದಾಗಿ ಇಬ್ಬರಿಗೂ ನಿಕಾಹ್​ ಮಾಡಿಸಿದ್ದಾರೆ. ಇದರಲ್ಲಿ ನೂರಾರು ಜನರು ವರ್ಚುವಲ್​ ಆಗಿ ಭಾಗವಹಿಸಿ, ನವಜೋಡಿಗೆ ಶುಭ ಹಾರೈಸಿದ್ದಾರೆ.

ಪಾಕಿಸ್ತಾನದ ಯುವತಿ ಜೊತೆ ಬಿಜೆಪಿ ಮುಖಂಡನ ಪುತ್ರನ 'ವರ್ಚುವಲ್​ ಮ್ಯಾರೇಜ್​' (ETV Bharat)

ಉತ್ತರ ಪ್ರದೇಶದ ಬಿಜೆಪಿ ಕಾರ್ಪೊರೇಟರ್ ತಹಸೀನ್ ಶಾಹಿದ್ ಅವರ ಪುತ್ರ ಮೊಹಮ್ಮದ್ ಅಬ್ಬಾಸ್ ಹೈದರ್ ಅವರು ಪಾಕಿಸ್ತಾನದ ಲಾಹೋರ್‌ನ ಆಂಡ್ಲೀಪ್ ಜೆಹ್ರಾ ಅವರೊಂದಿಗೆ ವರ್ಚುವಲ್ ನಿಕಾಹ್‌ ಮಾಡಿಕೊಂಡಿದ್ದಾರೆ. ಇದರಲ್ಲಿ ಎರಡೂ ದೇಶಗಳಲ್ಲಿನ ಸಂಬಂಧಿಗಳು ಭಾಗವಹಿಸಿದ್ದರು.

ವೀಸಾ ಸಿಗದೆ ವಿವಾಹ ವಿಳಂಬ:ಶಾಹಿದ್ ತಮ್ಮ ಮಗ ಹೈದರ್‌ನ ಮದುವೆಯನ್ನು ಒಂದು ವರ್ಷದ ಹಿಂದೆಯೇ ಪಾಕಿಸ್ತಾನದಲ್ಲಿರುವ ತಮ್ಮ ಸಂಬಂಧಿಯ ಪುತ್ರಿಯಾದ ಜೆಹ್ರಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ವೀಸಾ ಸಿಗುವುದು ವಿಳಂಬವಾದ ಕಾರಣ ಎರಡೂ ಕುಟುಂಬಗಳ ಸಹಮತದ ಮೇರೆಗೆ ಆನ್‌ಲೈನ್ ನಿಕಾಹ್ ಸಮಾರಂಭ ನಡೆದಿದೆ. ಕಾರ್ಯಕ್ರಮದಲ್ಲಿ ಬಿಜೆಪಿ ಎಂಎಲ್‌ಸಿ ಬ್ರಿಜೇಶ್‌ ಸಿಂಗ್‌ ಪ್ರಿಶು ಪಾಲ್ಗೊಂಡಿದ್ದರು.

ವರನ ಕುಟುಂಬದವರು ಕಳೆದ ವರ್ಷ ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನಾನಾ ಕಾರಣಗಳಿಂದಾಗಿ ವೀಸಾ ಮಂಜೂರಾಗಿಲ್ಲ. ಈ ಮಧ್ಯೆ ವಧುವಿನ ತಾಯಿಯು ಅನಾರೋಗ್ಯಕ್ಕೆ ತುತ್ತಾಗಿದ್ದು, ಆಕೆಯ ಸ್ಥಿತಿಯು ಹದಗೆಟ್ಟಿದೆ. ಮಗಳ ಮದುವೆಯನ್ನು ನೋಡುವ ಬಯಕೆ ಇದ್ದು, ಹೀಗಾಗಿ ಎರಡೂ ಕುಟುಂಬಗಳು ತರಾತುರಿಯಲ್ಲಿ ಆನ್‌ಲೈನ್‌ನಲ್ಲಿ ಮದುವೆ ಮಾಡಿಸಿದ್ದಾರೆ.

ಆನ್​ಲೈನ್​​ನಲ್ಲಿ ಮದುವೆ:ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಿಯಾ ಧಾರ್ಮಿಕ ಮುಖಂಡ ಮೌಲಾನಾ ಮಹ್ಫೂಜುಲ್ ಹಸನ್ ಖಾನ್, "ಯುವಕ ಮತ್ತು ಯುವತಿಯ ಸಮ್ಮತಿ ಪಡೆದು ಆನ್​ಲೈನ್​ ವಿವಾಹ ಮಾಡಲಾಗಿದೆ. ಇಸ್ಲಾಮಿಕ್​ ಮೌಲ್ಯಗಳಲ್ಲಿನ ಅವಕಾಶಗಳಿಂದಲೇ ಈ ಆನ್‌ಲೈನ್ ಬೆಸುಗೆ ಸಾಧ್ಯವಾಗಿದೆ" ಎಂದು ಹೇಳಿದರು.

ಇದರ ಜೊತೆಗೆ, ಹದಗೆಟ್ಟ ರಾಜಕೀಯ ಸಂಬಂಧಗಳ ಮಧ್ಯೆ ಉದ್ವಿಗ್ನತೆಯನ್ನು ತಗ್ಗಿಸಲು ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆಗಳು ನಡೆಯಬೇಕಾಗಿದೆ ಎಂದು ಖಾನ್ ಒತ್ತಿ ಹೇಳಿದರು.

ಉತ್ತರಪ್ರದೇಶದ ಯುವಕ ತ್ವರಿತ ವೀಸಾ ಸೇವೆಗೆ ಮನವಿ ಮಾಡಿದ್ದು, ಭಾರತ ಸರ್ಕಾರ ಅಂಗೀಕರಿಸಿದಲ್ಲಿ ಮುಂದಿನ ದಿನಗಳಲ್ಲಿ ವಧುವನ್ನು ಸೇರಲಿದ್ದಾರೆ ಎಂದು ಕುಟುಂಬ ತಿಳಿಸಿದೆ.

ಇದನ್ನೂ ಓದಿ:ನಕ್ಸಲರು ನೆಲದಡಿ ಹೂತಿಟ್ಟ ಐಇಡಿ ಸ್ಫೋಟ: ಛತ್ತೀಸ್​ಗಢದಲ್ಲಿ ಇಬ್ಬರು ಯೋಧರು ಹುತಾತ್ಮ

ABOUT THE AUTHOR

...view details