ರಾಂಚಿ(ಜಾರ್ಖಂಡ್):ಕುಖ್ಯಾತ ನಕ್ಸಲರ ಕಮಾಂಡರ್ ರವೀಂದ್ರ ಗಂಜು ತಂಡ ರಾಂಚಿಯ ಮೆಕ್‌ಕ್ಲಸ್ಕಿಗಂಜ್‌ನಲ್ಲಿ ಕೇಬಲ್ ಹಾಕುವ ಕೆಲಸ ಮಾಡುತ್ತಿದ್ದ ಕಂಪನಿಯ ಕಂಟೈನರ್‌ಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ಕಂಟೈನರ್ನಲ್ಲಿದ್ದ ಗುಮಾಸ್ತ (ಅಟೆಂಡರ್) ಸಜೀವ ದಹನವಾಗಿದ್ದಾರೆ. ಮಂಗಳವಾರ ತಡರಾತ್ರಿ ನಕ್ಸಲರು ಈ ಕೃತ್ಯ ಎಸಗಿದ್ದಾರೆ ಎಂದು ಖಲಾರಿ ಡಿಎಸ್ಪಿ ರಾಮನಾರಾಯಣ ಚೌಧರಿ ತಿಳಿಸಿದ್ದಾರೆ.
ಬೈಕ್‌ನಲ್ಲಿ ಬಂದು ಥಳಿಸಿ ಬೆಂಕಿ ಹಚ್ಚಿದ ನಕ್ಸಲರು: ಮಾಹಿತಿಯ ಪ್ರಕಾರ, ಎಸ್‌ಐಪಿಎಲ್ ಹೆಸರಿನ ಕಂಪನಿಯು ಮೆಕ್‌ಕ್ಲಸ್ಕಿಗಂಜ್ ಪ್ರದೇಶದಲ್ಲಿ ಬಿಎಸ್‌ಎನ್‌ಎಲ್‌ನ ಕೇಬಲಿಂಗ್ ಕೆಲಸ ಮಾಡುತ್ತಿದೆ. ಮಂಗಳವಾರ ತಡರಾತ್ರಿಯೂ ಕಾರ್ಮಿಕರು ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಸುಮಾರು 12 ಜನ ಶಸ್ತ್ರಧಾರಿ ನಕ್ಸಲರು ಬೈಕ್‌ಗಳಲ್ಲಿ ಬಂದು ಕಾರ್ಮಿಕರನ್ನು ಥಳಿಸಿದ್ದಾರೆ.