ಕರ್ನಾಟಕ

karnataka

ETV Bharat / bharat

ಪಂಜಾಬ್ ಮಹಿಳೆಯರಿಗೆ ಪ್ರತಿ ತಿಂಗಳು ₹1,100 ನೀಡುವ ಯೋಜನೆ ಶೀಘ್ರ ಜಾರಿ: ಸಿಎಂ ಭಗವಂತ್ ಮಾನ್ - SCHEME FOR PUNJAB WOMEN

ಪಂಜಾಬ್​ನಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 1,100 ರೂ. ನೀಡುವ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

cm-bhagwant-mann-said-government-will-start-the-scheme-of-giving-1100-to-women
ಸಿಎಂ ಭಗವಂತ್ ಮಾನ್ (ANI)

By ETV Bharat Karnataka Team

Published : Jan 19, 2025, 9:36 PM IST

ಮೊಗಾ(ಪಂಜಾಬ್​): "ಮಹಿಳೆಯರಿಗೆ ಪ್ರತಿ ತಿಂಗಳು 1,100 ರೂ. ನೀಡುವ ಯೋಜನೆಯನ್ನು ಶೀಘ್ರವೇ ಪಂಜಾಬ್​​ ಸರ್ಕಾರ ಪ್ರಾರಂಭಿಸಲಿದೆ" ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಘೋಷಿಸಿದ್ದಾರೆ.

ಮೊಗಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮುಂಬರುವ ಬಜೆಟ್‌ನಲ್ಲಿ ಈ ಯೋಜನೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ದೆಹಲಿಯಲ್ಲಿ ನಮ್ಮ ಪಕ್ಷ ನೀಡಿದ್ದ ಎಲ್ಲಾ ಭರವಸೆಗಳನ್ನೂ ಈಡೇರಿಸಿದ್ದೇವೆ. ಪಂಜಾಬ್‌ನಲ್ಲೂ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ" ಎಂದು ತಿಳಿಸಿದರು.

ದೆಹಲಿಯಲ್ಲಿ ಆಪ್​ಗೆ 60ಕ್ಕೂ ಹೆಚ್ಚು ಸ್ಥಾನ:"ನಮ್ಮ ಆಮ್ ಆದ್ಮಿ ಪಕ್ಷ (ಎಎಪಿ) ಕೆಲಸದ ರಾಜಕಾರಣ ಮಾಡುತ್ತದೆ. ನಾವು ದುರಾಸೆಯ, ಧರ್ಮದ ರಾಜಕಾರಣ ಮಾಡುವುದಿಲ್ಲ, ನಾವು ಸಮಾಜವನ್ನು ಒಗ್ಗೂಡಿಸಲು ಯೋಜನೆಗಳನ್ನು ರೂಪಿಸುತ್ತೇವೆಯೇ ಹೊರತು ವಿಭಜಿಸುವುದಕ್ಕಲ್ಲ. ದೆಹಲಿಯಲ್ಲಿ ಎಎಪಿ ಸರ್ಕಾರ ಅಧಿಕಾರ ಹಿಡಿಯಲಿದೆ. ನಾಲ್ಕನೇ ಬಾರಿಗೆ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 60ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈತರೊಂದಿಗೆ ಮಾತುಕತೆ:ರೈತ ಪ್ರತಿಭಟನೆ ಕುರಿತು ಮಾತನಾಡಿದ ಅವರು, "ಮಾತುಕತೆಯ ಮೂಲಕವೇ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು, ರೈತರೊಂದಿಗೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ. ಈಗಾಗಲೇ ರೈತರೊಂದಿಗೆ ನಾಲ್ಕು ಸಭೆಗಳನ್ನು ನಡೆಸಿದ್ದೇನೆ. ರೈತರೊಂದಿಗೆ ಮಾತುಕತೆ ನಡೆಸುವಂತೆ ಈ ಹಿಂದೆಯೂ ಕೇಂದ್ರ ಸರ್ಕಾರವನ್ನು ಕೋರಿದ್ದೆವು. ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಮಾತುಕತೆಗೆ ನಾವು ಮಧ್ಯಸ್ಥಿಕೆ ವಹಿಸಿದ್ದೇವೆ. ದೇಶದ ಆಹಾರ ಒದಗಿಸುವವರ ಸಮಸ್ಯೆಗಳನ್ನು ಕೇಂದ್ರವು ಆಲಿಸಬೇಕು" ಎಂದರು.

ರಸ್ತೆ ಸುರಕ್ಷತಾ ಪಡೆ (ಎಸ್‌ಎಸ್‌ಎಫ್) ಕುರಿತ ಪ್ರಶ್ನೆಗೆ ಉತ್ತರಿಸಿ, "ರಸ್ತೆ ಸುರಕ್ಷತಾ ಪಡೆ ರಚನೆಯಿಂದ ಸಾಕಷ್ಟು ಪ್ರಯೋಜನವಾಗಿದೆ. ಈ ಹಿಂದೆ ಪಂಜಾಬ್‌ನಲ್ಲಿ ರಸ್ತೆ ಅಪಘಾತಗಳಲ್ಲಿ ಪ್ರತಿ ದಿನ ಸರಾಸರಿ 14 ಸಾವುಗಳು ವರದಿಯಾಗುತ್ತಿದ್ದವು. ಪ್ರಸ್ತುತ, ರಸ್ತೆ ಅಪಘಾತದಲ್ಲಿ ಸಾವಿನ ಸಂಖ್ಯೆ ಶೇ.47ರಷ್ಟು ಕಡಿಮೆಯಾಗಿದೆ. ಗಾಯಾಳುಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಎಸ್​ಎಸ್​ಎಫ್ ಇದನ್ನು ಸಾಧ್ಯವಾಗಿಸಿದೆ. ಅಪಘಾತ ನಡೆದಾಗ ಗಾಯಾಳುಗಳ ಆಭರಣ ಮತ್ತು ವಸ್ತುಗಳ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ. ಆದರೆ ಎಸ್​ಎಸ್​ಎಫ್​ ಒಂದು ವರ್ಷದಲ್ಲಿ ನಗದು ಸೇರಿದಂತೆ 5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಮಾಲೀಕರಿಗೆ ತಲುಪಿಸಿದೆ. ಎಲ್ಲಾ ರಸ್ತೆ ಸುರಕ್ಷತಾ ಪಡೆ ಸಿಬ್ಬಂದಿಗೆ ಸಲಾಂ. ಉತ್ತಮ ಕೆಲಸ ಮಾಡಿದವರನ್ನು ಗುರುತಿಸಿ ಗಣತಂತ್ರದ ದಿನ ಸನ್ಮಾನಿಸಲಾಗುವುದು" ಎಂದು ತಿಳಿಸಿದರು.

ಇದನ್ನೂ ಓದಿ:ಸ್ವಾಮಿತ್ವ ಯೋಜನೆ ಅಡಿ 65 ಲಕ್ಷ ಆಸ್ತಿ ಕಾರ್ಡ್ ವಿತರಿಸಲಿರುವ ಪ್ರಧಾನಿ; ಏನಿದು ಯೋಜನೆ, ಯಾರಿಗೆಲ್ಲ ಪ್ರಯೋಜನ?​​

ಇದನ್ನೂ ಓದಿ:ಜ.31ರಿಂದ ಕೇಂದ್ರ ಬಜೆಟ್​ ಅಧಿವೇಶನ: ಫೆ.1ರಂದು ಆಯವ್ಯಯ ಮಂಡನೆ

ABOUT THE AUTHOR

...view details