ಪಿಥೋರ್ಗಢ, ಉತ್ತರಾಖಂಡ್: ಭಾರತದ ಮುಖ್ಯ ಚುನಾವಣಾ ಆಯುಕ್ತರು ಪ್ರಯಾಣಿಸುತ್ತಿದ್ದ ಹೆಲಿಕ್ಟಾಪ್ಟರ್ ಉತ್ತರಾಖಂಡ್ನ ಪಿಥೋರಗಢ ಜಿಲ್ಲೆಯಲ್ಲಿ ಚೀನಿ ಆಕ್ರಮಿತ ಟಿಬೆಟ್ ಗಡಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು. ಹೆಲಿಕಾಪ್ಟರ್ನಲ್ಲಿ ಸಿಇಸಿ ರಾಜೀವ್ ಕುಮಾರ್ ಸೇರಿದಂತೆ ಐದು ಮಂದಿ ಪ್ರಯಾಣಿಸುತ್ತಿದ್ದು, ಹೆಲಿಕಾಪ್ಟರ್ 16 ಗಂಟೆಗಳ ಬಳಿಕ ಮುನ್ಸಿಯಾರಿನಲ್ಲಿ ಸುರಕ್ಷಿತವಾಗಿ ಇಳಿದಿದೆ.
ಮುಖ್ಯ ಚುನಾವಣಾ ಅಧಿಕಾರಿಗಳಾದ ರಾಜೀವ್ ಕುಮಾರ್ ಬುಧವಾರ ಮಿಲಾಮ್ ಕಡೆಗೆ ಪ್ರಯಾಣ ಬೆಳೆಸಿದ್ದರು. ಆದರೆ, ಪ್ರತಿಕೂಲ ಹವಾಮಾನದ ಪರಿಣಾಮ ಹೆಲಿಕಾಪ್ಟರ್ ಪಿಥೋರಗಢನ ಕುಗ್ರಾಮ ರಾಲಮ್ ಗ್ರಾಮದಲ್ಲಿ ಭೂ ಸ್ಪರ್ಶ ಮಾಡಿತ್ತು. ಗುರುವಾರ ಬೆಳಗ್ಗೆ ಪ್ರಯಾಣಕ್ಕೆ ವಾತಾವರಣ ಸೂಕ್ತವಾಗಿರುವ ಹಿನ್ನಲೆ ಮತ್ತೆ ಪ್ರಯಾಣವನ್ನು ಅವರು ಮುಂದುವರೆಸಿದ್ದರು.
ರಾತ್ರಿಪೂರ್ತಿ ಗ್ರಾಮದಲ್ಲೇ ಕಳೆದ ಅಧಿಕಾರಿಗಳು: ರಾಜೀವ್ ಕುಮಾರ್ ಅವರ ಜೊತೆಗೆ ಉತ್ತರಾಖಂಡ್ನ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ವಿಜಯ್ ಕುಮಾರ್ ಮತ್ತು ಸಿಇಸಿ ಪಿಎಸ್ಒ ನವೀನ್ ಕುಮಾರ್ ಅವರು ಜೊತೆ ಪ್ರಯಾಣ ಬೆಳೆಸಿದ್ದರು. ಬುಧವಾರ ಸಂಜೆ ಪಿಥೋರಗಢದಲ್ಲಿ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಹಿಮಾಲಯ ತಪ್ಪಿಲಿನಲ್ಲಿರುವ ರಾಲಮ್ ಗ್ರಾಮದಲ್ಲಿ ರಾತ್ರಿ ಕಳೆದರು. ಗುರುವಾರ 6.30ಕ್ಕೆ ಹೆಲಿಕಾಪ್ಟರ್ ಹಾರಾಟಕ್ಕೆ ವಾತಾವರಣ ಪೂರಕವಾಗಿದ್ದ ಹಿನ್ನೆಲೆ ಹಾರಾಟ ನಡೆಸಿದ್ದು, ಬಳಿಕ ಮುನ್ಸಿಯಾರಿ ಹೆಲಿಪ್ಯಾಡ್ನಲ್ಲಿ ಲ್ಯಾಂಡ್ ಮಾಡಲಾಗಿದೆ. ಅಧಿಕಾರಿಗಳ ಜೊತೆಗೆ ಐಟಿಬಿಪಿ ಮತ್ತು ಬಿಆರ್ಒ ಸೇರಿದಂತೆ ಪಿಥೋರ್ಗಢ್ನ ಆಡಳಿತಾತ್ಮಕ ಅಧಿಕಾರಿಗಳು ಹೆಲಿಪ್ಯಾಡ್ನಲ್ಲಿ ಹಾಜರಿದ್ದರು. ಮುನ್ಸಿಯರಿಯಿಂದ ಮುಖ್ಯ ಚುನಾವಣಾ ಆಯುಕ್ತರು ಐಟಿಬಿಪಿ ಕ್ಯಾಂಪ್ಗೆ ತೆರಳಿದರು.