ಲಾತೂರ್ (ಮಹಾರಾಷ್ಟ್ರ) : 'ನೀಟ್' ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಲಾತೂರ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಆರು ದಿನಗಳ ಪೊಲೀಸ್ ತನಿಖೆಯ ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ. ಈ ಪ್ರಕರಣ ಸಿಬಿಐಗೆ ವರ್ಗವಾದ ಕೂಡಲೇ ಇಬ್ಬರು ಹಿರಿಯ ಸಿಬಿಐ ಅಧಿಕಾರಿಗಳು ಶನಿವಾರ ಮಧ್ಯರಾತ್ರಿ ಅತ್ಯಂತ ಗೌಪ್ಯವಾಗಿ ಲಾತೂರ್ ಪ್ರವೇಶಿಸಿದ್ದಾರೆ.
ಭಾನುವಾರ ಇಡೀ ದಿನ ಆರೋಪಿಗಳ ವರ್ಗಾವಣೆ ಪ್ರಕ್ರಿಯೆಯನ್ನು ಸಿಬಿಐ ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ. ಲಾತೂರ್ ಪೊಲೀಸರ ವಶದಲ್ಲಿರುವ ಇಬ್ಬರು ಆರೋಪಿಗಳಾದ ಜಲೀಲ್ ಪಠಾಣ್ ಮತ್ತು ಸಂಜಯ್ ಜಾಧವ್ ಅವರನ್ನು ಇಂದು (ಜುಲೈ 01) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ನಂತರ ಈ ಇಬ್ಬರು ಆರೋಪಿಗಳ ಕಸ್ಟಡಿಯನ್ನು ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ, ತಲೆಮರೆಸಿಕೊಂಡಿರುವ ಆರೋಪಿ ಗಂಗಾಧರ್ ಅವರನ್ನು ಸಿಬಿಐ ಬಂಧಿಸಿದ ಬಳಿಕ ದೆಹಲಿಯಿಂದ ಲಾತೂರ್‌ಗೆ ಕರೆತರಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ಅವರನ್ನು ಹೊರತುಪಡಿಸಿ ಇಬ್ಬರು ಸಿಬಿಐ ಅಧಿಕಾರಿಗಳ ತಂಡ ಈಗಾಗಲೇ ಲಾತೂರ್ ಪ್ರವೇಶಿಸಿದೆ.
ದೇಶದಲ್ಲಿ ನಡೆದ ‘ನೀಟ್’ ಹಗರಣಕ್ಕೆ ಸಂಬಂಧಿಸಿದಂತೆ ಲಾತೂರ್ ನಂಟು ಬಹಿರಂಗವಾದ ನಂತರ ನಾಂದೇಡ್ ಭಯೋತ್ಪಾದನಾ ನಿಗ್ರಹ ದಳ ದೆಹಲಿಯ ಗಂಗಾಧರ್ ವಿರುದ್ಧ ಮೂವರು ಶಿಕ್ಷಕರೊಂದಿಗೆ ಪ್ರಕರಣ ದಾಖಲಿಸಿತ್ತು. ನಂತರ ಎಟಿಎಸ್ ತನಿಖೆಯನ್ನು ಲಾತೂರ್ ಪೊಲೀಸರಿಗೆ ಹಸ್ತಾಂತರಿಸಿತ್ತು. ಸದ್ಯ ಬಂಧಿತರಾಗಿರುವ ಜಲೀಲ್ ಪಠಾಣ್ ಮತ್ತು ಸಂಜಯ್ ಜಾಧವ್ ಜುಲೈ 2ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪ್ರಕರಣದ ತನಿಖೆಗಾಗಿ ಸಿಬಿಐ ತಂಡ ಶನಿವಾರ ತಡರಾತ್ರಿ ಲಾತೂರ್‌ಗೆ ಧಾವಿಸಿದೆ.