ETV Bharat / bharat

ಆರ್​ಜಿ ಕರ್​ ವೈದ್ಯೆ ಅತ್ಯಾಚಾರ, ಕೊಲೆ ಕೇಸ್ ​: ಅಪರಾಧಿ ಸಂಜಯ್​​ಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​ - DOCTOR RAPE CASE SENTENCE

ಕೋಲ್ಕತ್ತಾದ ಆರ್​ಜಿ ಕರ್​ ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದ ತೀರ್ಪನ್ನು ಇಲ್ಲಿನ ಸೀಲ್ಡಾ ನ್ಯಾಯಾಲಯವು ಇಂದು ಪ್ರಕಟಿಸಿತು.

sanjoy-roy-sentenced-to-life-term-till-death-by-kolkata-court-in-doctor-rape-and-murder-case
ಅಪರಾಧಿ ಸಂಜಯ್ ರಾಯ್‌ (ETV Bharat)
author img

By ETV Bharat Karnataka Team

Published : Jan 20, 2025, 3:09 PM IST

Updated : Jan 20, 2025, 3:34 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ) : ದೇಶಾದ್ಯಂತ ಭಾರೀ ಸದ್ದು ಮಾಡಿ, ತೀವ್ರ ಪ್ರತಿಭಟನೆಗಳಿಗೆ ಕಾರಣವಾಗಿದ್ದ ಕೋಲ್ಕತ್ತಾದ ಪ್ರಸಿದ್ಧ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯೆ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಯಾದ ಸಂಜಯ್ ರಾಯ್‌ಗೆ ನ್ಯಾಯಾಲಯವು ಆಜೀವ ಜೈಲು ಶಿಕ್ಷೆ ವಿಧಿಸಿ ಸೋಮವಾರ ಆದೇಶಿಸಿದೆ.

ಸೀಲ್ಡಾದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರಿದ್ದ ಪೀಠವು, ಶನಿವಾರ (ಜನವರಿ 18 ರಂದು) ಪೊಲೀಸರ ವಶದಲ್ಲಿದ್ದ ಏಕೈಕ ಆರೋಪಿ ಸಂಜಯ್​ ರಾಯ್​ ಅಪರಾಧಿ ಎಂದು ಘೋಷಿಸಿ, ತೀರ್ಪು ಕಾಯ್ದಿರಿಸಿತ್ತು. ಇಂದು ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಪ್ರಕಟಿಸಿದರು.

ಕರ್ತವ್ಯನಿರತ ವೈದ್ಯೆಯನ್ನು ಅತ್ಯಾಚಾರ ಮಾಡಿದ ಕೊಲೆ ಪ್ರಕರಣದಲ್ಲಿ ಅಪರಾಧಿಗೆ ಮರಣದಂಡನೆ ವಿಧಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈ ಕುರಿತು ತೀರ್ಪು ಪ್ರಕಟ ವೇಳೆ ನ್ಯಾಯಾಧೀಶರು, ಇದೊಂದು 'ಅಪರೂಪದಲ್ಲಿ ಅಪರೂಪ 'ಪ್ರಕರಣದ ಅಡಿಯಲ್ಲಿ ಬರುವುದಿಲ್ಲ. ಹೀಗಾಗಿ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಅವಕಾಶವಿಲ್ಲ ಎಂದರು.

ಮೃತ ವೈದ್ಯೆಯ ಕುಟುಂಬಕ್ಕೆ ಪರಿಹಾರ : ಮೃತ ವೈದ್ಯೆಯ ಕುಟುಂಬಕ್ಕೆ 17 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ಇದೇ ವೇಳೆ ನಿರ್ದೇಶನ ನೀಡಿತು. ತೀರ್ಪು ಪ್ರಕಟದ ಕೊನೆಯ ಹಂತದವರೆಗೂ ಅಪರಾಧಿ ಸಂಜಯ್​ ರಾಯ್​ ತಾನು ನಿರಪರಾಧಿ ಎಂದು ಹೇಳುತ್ತಲೇ ಬಂದಿದ್ದ.

ಏನಿದು ಪ್ರಕರಣ? 2024 ರ ಆಗಸ್ಟ್​ 9 ರಂದು ಕೋಲ್ಕತ್ತಾದಲ್ಲಿನ ಪ್ರಸಿದ್ಧ ಆರ್​ಜಿ ಕರ್​ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಈ ಅಪರಾಧ ಪ್ರಕರಣ ನಡೆದ 24 ಗಂಟೆಯ ಒಳಗೆ ಆರೋಪಿ ಸಂಜಯ್​ ರಾಯ್​ನನ್ನು (ಆಗಸ್ಟ್​ 10ರಂದು) ಪೊಲೀಸರು ಬಂಧಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ವೈದ್ಯಕೀಯ ಸಂಘಟನೆಗಳು ಸೇರಿ ಪಶ್ಚಿಮಬಂಗಾಳ ಮತ್ತು ದೇಶಾದ್ಯಂತ ಭಾರೀ ಪ್ರತಿಭಟನೆಗಳು ಜರುಗಿದ್ದವು. ಸರ್ಕಾರ ಮತ್ತು ವೈದ್ಯರ ನಡುವೆ ಭಾರೀ ತಿಕ್ಕಾಟ ಕೂಡ ನಡೆದಿತ್ತು. ಸಾವಿರಾರು ವೈದ್ಯರು ವೃತ್ತಿ ತೊರೆದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ್ದ ಸುಪ್ರೀಂಕೋರ್ಟ್​ ಎಲ್ಲರೂ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿತ್ತು.

ಬಳಿಕ, ಈ ಪ್ರಕರಣದ ವಿಚಾರಣೆಯು ನವೆಂಬರ್​ 12ರಿಂದ ಪ್ರಾರಂಭವಾಗಿ, 50 ಸಾಕ್ಷ್ಯಗಳನ್ನು ವಿಚಾರಣೆ ನಡೆಸಲಾಗಿದೆ. ಜನವರಿ 9ರಂದು ಆರೋಪಿ ರಾಯ್​ ವಿಚಾರಣೆ ಕೂಡ ಮುಗಿಸಲಾಗಿದೆ. ಈ ಪ್ರಕರಣದಲ್ಲಿ ಮೃತ ವೈದ್ಯರ ತಂದೆ, ಸಿಬಿಐ ತನಿಖಾಧಿಕಾರಿ, ಕೋಲ್ಕತ್ತಾ ಪೊಲೀಸ್ ತನಿಖಾಧಿಕಾರಿ, ವಿಧಿವಿಜ್ಞಾನ ತಜ್ಞರು ಮತ್ತು ಮೃತರ ಕೆಲವು ಸಹಪಾಠಿಗಳು ಪ್ರಕರಣದಲ್ಲಿ ಸಾಕ್ಷ್ಯ ನೀಡಿದ್ದಾರೆ.

ಇದನ್ನೂ ಓದಿ: ಆರ್​ಜಿ ಕರ್ ​ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಸಂಜಯ್​ ರಾವ್​ ತಪ್ಪಿತಸ್ಥ ಎಂದ ನ್ಯಾಯಾಲಯ

Last Updated : Jan 20, 2025, 3:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.