ಚಂಡೀಗಢ :ಇಲ್ಲಿನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಹುದ್ದೆಗಳಿಗೆ ಕ್ರಮವಾಗಿ ಕುಲ್ಜೀತ್ ಸಿಂಗ್ ಸಂಧು, ಉಪಮೇಯರ್ ಆಗಿ ರಾಜೇಂದ್ರ ಶರ್ಮಾ ಅವರು ಗೆಲುವು ಸಾಧಿಸಿದ್ದಾರೆ.
ಕುಲ್ಜೀತ್ ಸಿಂಗ್ ಸಂಧು ಅವರು 19 ಮತಗಳನ್ನು ಗಳಿಸಿದರೆ, ಎಎಪಿ - ಕಾಂಗ್ರೆಸ್‌ನ ಜಂಟಿ ಅಭ್ಯರ್ಥಿ ಗುರುಪ್ರೀತ್ ಸಿಂಗ್ ಗಾಬಿ 16 ಮತಗಳನ್ನು ಪಡೆದರು. ಒಂದು ಮತವನ್ನು ಅಸಿಂಧು ಎಂದು ಘೋಷಿಸಲಾಯಿತು. ಉಪಮೇಯರ್ ಸ್ಥಾನವನ್ನು ಗೆದ್ದ ಶರ್ಮಾ ಅವರು 19 ಮತಗಳನ್ನು ಪಡೆದರು ಮತ್ತು ಎಎಪಿ - ಕಾಂಗ್ರೆಸ್‌ನ ಜಂಟಿ ಅಭ್ಯರ್ಥಿ ನಿರ್ಮಲಾ ದೇವಿ 17 ಮತಗಳನ್ನು ಪಡೆದರು.
ಜನವರಿ 30ರಂದು ಚಂಡೀಗಢದ ಮೇಯರ್ ಚುನಾವಣೆ ನಡೆದಿದ್ದು, ಆಗ ಉಂಟಾದ ಗೊಂದಲ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಎಎಪಿ ಮತ್ತು ಕಾಂಗ್ರೆಸ್ ಚುನಾವಣೆ ನಡೆಸಿದ್ದು, ಸ್ಥಳೀಯ ಕೋರ್ಟ್ ತೀರ್ಪು ನೀಡಿದ ರೀತಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ಈ ಹಿನ್ನೆಲೆ ಇತ್ತೀಚೆಗೆ ಉಪಮೇಯರ್ ಮತ್ತು ಹಿರಿಯ ಉಪಮೇಯರ್ ಚುನಾವಣೆ ನಡೆಸಲಾಯಿತು.