ಕರ್ನಾಟಕ

karnataka

ETV Bharat / bharat

Watch.. ನಾಗರಹಾವಿನ ಮೇಲೆ ಎರಗಿದ ನಾಯಿಗಳು: ಒಂದು ಬಾಲ ಹಿಡಿದರೆ ಮತ್ತೊಂದು ತಲೆ ಕಚ್ಚಿ ಹಿಡಿದ ಶ್ವಾನಗಳು - DOGS KILLED BIG SNAKE

ಹೊಲವೊಂದರಲ್ಲಿ ದೊಡ್ಡದಾದ ನಾಗರ ಹಾವನ್ನು ಎರಡು ನಾಯಿಗಳು ಕಚ್ಚಿ ಕಚ್ಚಿ ಕೊಂದು ಹಾಕಿವೆ - ಹಾವು ತಪ್ಪಿಸಿಕೊಳ್ಳದಂತೆ ಎರಡೂ ಸೇರಿ ಅದರ ಜೀವ ತೆಗೆದಿವೆ. ಈ ದೃಶ್ಯಗಳು ಈಗ ಎಲ್ಲೆಡೆ ವೈರಲ್​ ಆಗಿದೆ.

big-cobra-snake-was-killed-by-dogs-at-rangareddy-district-telangana-news
Watch.. ನಾಗರಹಾವಿನ ಮೇಲೆ ಎರಗಿದ ನಾಯಿಗಳು: ಒಂದು ಬಾಲ ಹಿಡಿದರೆ ಮತ್ತೊಂದು ತಲೆ ಕಚ್ಚಿ ಹಿಡಿದ ಶ್ವಾನಗಳು (ETV Bharat)

By ETV Bharat Karnataka Team

Published : Nov 2, 2024, 1:48 PM IST

Updated : Nov 2, 2024, 2:26 PM IST

ಶಾದ್ ನಗರ, ತೆಲಂಗಾಣ:ಎರಡು ನಾಯಿಗಳು ನಾಗರ ಹಾವನ್ನು ಕೊಂದು ಹಾಕಿರುವ ಘಟನೆ ಹೈದರಾಬಾದ್​ ಸಮೀಪದ ಶಾದ್​ನಗರದಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಕೂಡಾ ಆಗಿದೆ. ಸಾಮಾನ್ಯವಾಗಿ ಹಾವುಗಳನ್ನು ಕಂಡರೆ ನಾಯಿಗಳು ಬೆಚ್ಚಿ ಬೀಳುತ್ತವೆ. ವಿಷಪೂರಿತ ಹಾವು ಕಂಡರೆ ಎಂತಹ ಧೈರ್ಯಶಾಲಿಗಳು ಒಂದು ಕ್ಷಣ ನಡುಗಿ ಬಿಡುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ.

ಹಾಗೆಯೇ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡ ಹಾವು ಎದುರಾದರೆ ಒಂದು ಹೆಜ್ಜೆ ಹಿಂದೆ ಸರಿಯುತ್ತವೆ. ಆದರೆ, ಇತ್ತೀಚೆಗೆ ರಂಗಾರೆಡ್ಡಿ ಜಿಲ್ಲೆಯ ಶಾದ್ ನಗರದಲ್ಲಿ ನಡೆದ ಘಟನೆಯೊಂದರ ದೃಶ್ಯಗಳು ಅಚ್ಚರಿ ಮೂಡಿಸುವಂತಿದೆ. ಎರಡು ನಾಯಿಗಳು ಬೃಹತ್ ನಾಗರ ಹಾವನ್ನು ಕಚ್ಚಿ ಕಚ್ಚಿ ಸಾಯಿಸಿವೆ.

Watch.. ನಾಗರಹಾವಿನ ಮೇಲೆ ಎರಗಿದ ನಾಯಿಗಳು: ಒಂದು ಬಾಲ ಹಿಡಿದರೆ ಮತ್ತೊಂದು ತಲೆ ಕಚ್ಚಿ ಹಿಡಿದ ಶ್ವಾನಗಳು (ETV Bharat)

ಮೊಗಿಲಗಿಡ ಗ್ರಾಮದ ಬಳಿಯ ಜಮೀನಿನಲ್ಲಿ ಮಾಲೀಕರು ಡಾಬರ್ ಮನ್ ನಾಯಿಗಳನ್ನು ಸಾಕುತ್ತಿದ್ದಾರೆ. ಶುಕ್ರವಾರ ಇವರ ಜಮೀನಿನಲ್ಲಿ ಬೃಹತ್ ಹಾವೊಂದು ಸಾಕುನಾಯಿಗಳ ಕಣ್ಣಿಗೆ ಬಿದ್ದಿದೆ. ಎರಡು ನಾಯಿಗಳು ರೋಮಾಂಚನಗೊಂಡು ಹಾವನ್ನು ಒಟ್ಟಿಗೆ ಓಡಿಸಿವೆ. ಹಾವನ್ನು ಕಚ್ಚಿ ಕಚ್ಚಿ ಸಾಯಿಸಿವೆ. ಸತ್ತ ನಂತರವೂ ಹಾವನ್ನು ಬಾಯಿಯಲ್ಲಿ ಕಚ್ಚಿಕೊಂಡು ಅಲ್ಲಿ ಇಲ್ಲಿ ಎಳೆದಾಡಿವೆ. ಈ ದೃಶ್ಯ ವೈರಲ್​ ಆಗಿದೆ.

ಇದನ್ನು ಓದಿ:ಕಾಶ್ಮೀರದಲ್ಲಿ ಉಗ್ರರಿಂದ ಗುಂಡಿನ ದಾಳಿ: ಇಬ್ಬರು ವಲಸೆ ಕಾರ್ಮಿಕರಿಗೆ ಗುಂಡೇಟು

Last Updated : Nov 2, 2024, 2:26 PM IST

ABOUT THE AUTHOR

...view details