ಮಹಾಕುಂಭ ನಗರ(ಉತ್ತರ ಪ್ರದೇಶ): ಭಾರತ ಪ್ರವಾಸದಲ್ಲಿರುವ ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗೇಲ್ ವಾಂಗ್ಚುಕ್ ಅವರು, ಮಂಗಳವಾರ ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಗಂಗೆಗೆ ಅರ್ಘ್ಯ ಸಲ್ಲಿಸುವ ಮೂಲಕ ಸನಾತನ ಆಚರಣೆಯಲ್ಲಿ ಪಾಲ್ಗೊಂಡರು.
ಭೂತಾನ್ ದೊರೆಯೊಂದಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗಂಗಾ ನದಿಯಲ್ಲಿ ಮಿಂದೆದ್ದರು. ಈ ವೇಳೆ ಸಚಿವರಾದ ಸ್ವತಂತ್ರ ದೇವ್ ಸಿಂಗ್, ನಂದ ಗೋಪಾಲ್ ಗುಪ್ತಾ ಮತ್ತು ಮಹಾಮಂಡಲೇಶ್ವರ ಸಂತೋಷ್ ದಾಸ್ ಮಹಾರಾಜ್ ಅವರಿದ್ದರು.
#WATCH | King of Bhutan Jigme Khesar Namgyel Wangchuck, Uttar Pradesh CM Yogi Adityanath, performs aarti at Triveni Sangam, Prayagraj #MahaKumbh2025 pic.twitter.com/M9nmnUSgb3
— ANI (@ANI) February 4, 2025
ಭೂತಾನ್ ದೊರೆ ತಮ್ಮ ಸಾಂಪ್ರದಾಯಿಕ ದಿರಿಸಿನಲ್ಲಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಇದಕ್ಕೂ ಮೊದಲು ಸನಾತನ ಧರ್ಮದ ಆಚರಣೆಯ ಪ್ರಕಾರ, ಸೂರ್ಯದೇವನಿಗೆ ಅರ್ಘ್ಯ ಸಲ್ಲಿಸಿದರು. ಪೂಜಾ ಕೈಂಕರ್ಯದಲ್ಲಿ ಕುಳಿತು ಗಂಗೆಗೆ ಹೂವು, ಹಣ್ಣುಗಳನ್ನು ಸಮರ್ಪಿಸಿದರು. ಸಿಎಂ ಯೋಗಿ ಆದಿತ್ಯನಾಥ್ ಅವರು ಕೂಡ ಪೂಜೆಯಲ್ಲಿ ಜೊತೆಗೆ ಭಾಗಿಯಾದರು.
ಇದಾದ ಬಳಿಕ, ಗಂಗಾ ನದಿಯ ಸೊಬಗನ್ನು 3ಡಿ ಮೂಲಕ ತೋರಿಸಲಾಯಿತು. ಹಡಗಿನಲ್ಲಿ ಕುಳಿತು ತಾವೇ ಅರಗೋಲು ಹಾಕಿದ ಮಾದರಿಯಲ್ಲಿ 3ಡಿ ಸಂಚಾರ ನಡೆಸಿದರು. ನಂತರ, ತೀರ್ಥರಾಜ್ ಪ್ರಯಾಗಕ್ಕೆ ಭೇಟಿ ನೀಡಿ ಅಲ್ಲಿನ ಮಲಗಿರುವ ಭಂಗಿಯಲ್ಲಿರುವ ವಾಯುಪುತ್ರ ಹನುಮಾನ್ಗೆ ಪೂಜೆ ಸಲ್ಲಿಸಿದರು.
Prayagraj, UP: Bhutan King Jigme Khesar Namgyel Wangchuck and UP CM Yogi Adityanath took a holy dip at the Triveni Sangam during the #MahaKumbh2025 today pic.twitter.com/nrSjFMBYPu
— IANS (@ians_india) February 4, 2025
ಭೂತಾನ್ ದೊರೆಗೆ ಅದ್ಧೂರಿ ಸ್ವಾಗತ: ಇದಕ್ಕೂ ಮೊದಲು ಉತ್ತರಪ್ರದೇಶದ ರಾಜಧಾನಿ ಲಖನೌಗೆ ಸೋಮವಾರ ವಿಮಾನದಲ್ಲಿ ಬಂದಿಳಿದ ಭೂತಾನ್ ರಾಜನನ್ನು ಸಿಎಂ ಯೋಗಿ ಆದಿತ್ಯನಾಥ್ ಅವರು ಅದ್ಧೂರಿಯಾಗಿ ಬರಮಾಡಿಕೊಂಡರು. ಕಲಾವಿದರಿಂದ ಸಾಂಸ್ಕೃತಿಕ ಪ್ರದರ್ಶನ ಮತ್ತು ಪುಷ್ಪವೃಷ್ಟಿ ಸುರಿಸಲಾಯಿತು.
ರಾಜಭವನಕ್ಕೆ ಭೇಟಿ ನೀಡಿ, ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರ ಜೊತೆ ಮಾತುಕತೆ ನಡೆಸಲಾಯಿತು. ಈ ವೇಳೆ ಭೂತಾನ್ ದೊರೆ ಅಲ್ಲಿನ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಭಾರತ-ಭೂತಾನ್ ಸಂಬಂಧಗಳ ಕುರಿತು ರಾಜ್ಯಪಾಲೆ ಆನಂದಿ ಬೆನ್ ಮತ್ತು ಸಿಎಂ ಆಯೋಗಿ ಆದಿತ್ಯನಾಥ್ ಅವರು ಭೂತಾನ್ ದೊರೆಯ ಜೊತೆಗೆ ಚರ್ಚೆ ನಡೆಸಿದರು.
ಭಾರತ-ಭೂತಾನ್ ಸ್ನೇಹ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ದೊರೆಯ ಈ ಭೇಟಿಯು ಪ್ರಮುಖ ಹೆಜ್ಜೆಯಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.
#WATCH | King of Bhutan Jigme Khesar Namgyel Wangchuck, Uttar Pradesh CM Yogi Adityanath, visits Digital Mahakumbh Experience Centre at the Maha Kumbh Mela in Prayagraj#MahaKumbh2025 pic.twitter.com/21ba1okfvc
— ANI (@ANI) February 4, 2025
ಮಂಗಳವಾರ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ 54 ಲಕ್ಷಕ್ಕೂ ಹೆಚ್ಚು ಭಕ್ತರು ಮಹಾ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು ಎಂದು ಸರ್ಕಾರ ಮಾಹಿತಿ ನೀಡಿದೆ. ಜನವರಿ 13 ರಿಂದ ಆರಂಭವಾಗಿರುವ ಮಹಾಕುಂಭದಲ್ಲಿ ಈವರೆಗೂ 37.50 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಫೆಬ್ರವರಿ 26 ರವರೆಗೂ ಕುಂಭಮೇಳ ನಡೆಯಲಿದೆ.
ಇದನ್ನೂ ಓದಿ: ಮಹಾಕುಂಭದ ಸಮಾರೋಪದ ದಿನದೊಳಗೆ 2 ಸಾವಿರ ವೃದ್ಧರಿಗೆ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ವ್ಯವಸ್ಥೆ